ಲಕ್ಸುರಿ ಬಂಗಲೆ, ದುಬಾರಿ ಕಾರು, ಕೋಟಿ ಕೋಟಿ ಸಂಭಾವನೆ… ನಟಿ ತಮನ್ನಾ Net worth ಎಷ್ಟು?

Published : Jun 23, 2026, 04:29 PM IST

Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕಗಳಾದರೂ, ಇಂದಿಗೂ ಸಹ ಮೋಸ್ಟ್ ಡಿಮಾಂಡ್ ನಲ್ಲಿರುವ ನಟಿಮಣಿಯರಲ್ಲಿ ಒಬ್ಬರು. ಲಕ್ಸುರಿ ಬಂಗಲೆ, ದುಬಾರಿ ಕಾರು, ಕೋಟಿ ಸಂಭಾವನೆ ಪಡೆಯುವ ತಮನ್ನಾ ಭಾಟಿಯಾ ನೆಟ್ ವರ್ತ್ ಎಷ್ಟು ಗೊತ್ತಾ? 

PREV
16
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಅವರು ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟಿ. ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಇವರು. ತಮನ್ನಾ ಕೇವಲ ಬೆಳ್ಳಿ ತೆರಯಲ್ಲಿ ಮಾತ್ರವಲ್ಲ, ವೆಬ್ ಸೀರೀಸ್ ಮತ್ತು ಒಟಿಟಿಗಳನ್ನೂ ತಮ್ಮ ನಟನೆಯ ಮೂಲಕ ನಟಿ ಭರ್ಜರಿ ಮನರಂಜನಿ ನೀಡಿ, ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.

26
ತಮನ್ನಾ ಭಾಟಿಯಾ ಕರಿಯರ್ ಹೈಲೈಟ್

ತಮನ್ನಾ ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಜೈಲರ್ ಮತ್ತು ಸ್ತ್ರೀ 2 ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿನ ನಟಿಯ ಐಟಂ ಹಾಡು ನಟಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದಾಗಿ ತಮನ್ನಾ ಸಿನಿ ರಸಿಕರಲ್ಲಿ ಹಾಗೂ ನಿರ್ಮಾಪಕರ ಮೋಸ್ಟ್ ಫೇವರಿಟ್ ಆಗಿ ಉಳಿದಿದಾರೆ.

36
ಸಿನಿ ಪಯಣ ಶುರುವಾಗಿದ್ದು ಹೀಗೆ

2005ರಲ್ಲಿ ತಮನ್ನಾ ‘ಚಾಂದ್ ಸ ರೋಶನ್ ಚೆಹರಾ’ ಎನ್ನುವ ಬಾಲಿವುಡ್ ಸಿನಿಮಾ ಮೂಲಕ ಕರಿಯರ್ ಆರಂಭಿಸಿದರು. ನಂತರ ದಶಕಗಳ ಕಾಲ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಬಳಿಕ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲಿ ‘ಬಾಹುಬಲಿ’ ಯಂತಹ ಬ್ಲಾಕ್ ಬಸ್ಟರ್ ಸಿನಿಮಾಗಳು, ಡ್ಯಾನ್ಸ್ ನಂಬರ್ ನೀಡುತ್ತಾ ಚಿತ್ರರಂಗದಲ್ಲಿ ಉತ್ತುಂಗಕ್ಕೇರಿದರು ತಮನ್ನಾ.

46
ತಮನ್ನಾ ಭಾಟಿಯಾ ನೆಟ್ ವರ್ತ್

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ತಮನ್ನಾ ಭಾಟಿಯಾ ಅವರ ಅಂದಾಜು ನೆಟ್ ವರ್ತ್ 120 ಕೋಟಿ ರೂ.ಗಳಿಗಿಂತ ಹೆಚ್ಚು. ಅವರ ಗಳಿಕೆಯ ಹೆಚ್ಚಿನ ಭಾಗವು ಚಲನಚಿತ್ರಗಳು, ಬ್ರಾಂಡ್, ಮತ್ತು ಡಿಜಿಟಲ್ ಯೋಜನೆಗಳಿಂದ ಬರುತ್ತದೆ. ತಮನ್ನಾ ರಿಯಲ್ ಎಸ್ಟೇಟ್‌ನಲ್ಲಿಯೂ ಸಹ ಭಾರಿ ಹೂಡಿಕೆ ಮಾಡಿದ್ದಾರೆ. ಅವರು 16 ಕೋಟಿಯಿಂದ 20 ಕೋಟಿ ರೂಪಾಯಿಗಳವರೆಗಿನ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆಂದು ವರದಿಯಾಗಿದೆ. ಇದಲ್ಲದೆ, ಅವರು ಮುಂಬೈನಲ್ಲಿ ಸುಮಾರು 7 ಕೋಟಿ ರೂಪಾಯಿಗಳ ಮೌಲ್ಯದ ಪ್ರೀಮಿಯಂ ಅಪಾರ್ಟ್ಮೆಂಟ್ ಸಹ ಹೊಂದಿದ್ದಾರೆ.

56
ನಟಿ ಪಡೆಯುವ ಸಂಭಾವನೆ ಎಷ್ಟು?

ವರದಿಗಳ ಪ್ರಕಾರ, ತಮನ್ನಾ ಭಾಟಿಯಾ ಪ್ರತಿ ಚಿತ್ರಕ್ಕೆ 4 ಕೋಟಿಯಿಂದ 5 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ, ಇದು ಅವರನ್ನು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಇನ್ನು 'ಸ್ತ್ರೀ 2' ಸಿನಿಮಾದ 'ಆಜ್ ಕಿ ರಾತ್' ಹಾಡಿಗಾಗಿ, ಕೆಲವೇ ನಿಮಿಷಗಳ ದೃಶ್ಯಕ್ಕಾಗಿ ನಟಿ 1ಕೋಟಿ ಸಂಭಾವನೆ ಪಡೆದಿದ್ದಾರೆ.

66
ತಮನ್ನಾ ಭಾಟಿಯಾ ಅವರ ಐಷಾರಾಮಿ ಕಾರು ಸಂಗ್ರಹ

ನಟಿ ತಮನ್ನಾಗೆ ಐಷಾರಾಮಿ ಆಟೋಮೊಬೈಲ್‌ಗಳ ಮೇಲೆ ಇನ್ನಿಲ್ಲದ ಕ್ರೇಜ್. ಅವರ ಗ್ಯಾರೇಜ್‌ನಲ್ಲಿ ಯಾವೆಲ್ಲಾ ವಾಹನಗಳಿವೆ ಗೊತ್ತಾ?

  • BMW 320i
  • ಮರ್ಸಿಡಿಸ್-ಬೆನ್ಜ್
  • ಮಿತ್ಸುಬಿಷಿ ಪಜೆರೊ ಸ್ಪೋರ್ಟ್
  • ಲ್ಯಾಂಡ್ ರೋವರ್ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories