ತಾಪ್ಸಿ ಪನ್ನು ಚಿತ್ರಗಳು ಹಿಟ್ ಆಗೋಲ್ಲ, ಆದರೂ ಅವಕಾಶಗಳಿಗೆ ಇಲ್ಲ ಭರ
First Published | Aug 1, 2022, 5:23 PM ISTದಕ್ಷಿಣ ಚಿತ್ರರಂಗದಿಂದ ಬಾಲಿವುಡ್‌ಗೆ ಬಂದಿರುವ ತಾಪ್ಸಿ ಪನ್ನು (Taapee Pannu) ಇಂದು ಆಗಸ್ಟ್ 1 ರಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 198 ರಲ್ಲಿ ದೆಹಲಿಯಲ್ಲಿ ಜನಿಸಿದ ತಾಪ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಓದಿದ ನಂತರ ಸಾಫ್ಟ್‌ವೇರ್ ಎಂಜಿನಿಯರ್ ಆಗಿಯೂ ಕೆಲಸ ಮಾಡಿದರು. ಆದರೆ ಅವರು ಗ್ಲಾಮರ್ ಪ್ರಪಂಚದತ್ತ ಒಲವು ತೋರಿದರು ಮತ್ತು ಮಾಡೆಲಿಂಗ್ ಪ್ರಾರಂಭಿಸಿದರು. ಮಾಡೆಲಿಂಗ್ ಜೊತೆಗೆ ಹಲವು ಬ್ರಾಂಡ್‌ಗೆ ಜಾಹೀರಾತು ಮಾಡುವ ಅವಕಾಶವನ್ನೂ ಪಡೆದರು. ಆ ನಂತರ ಸಿನಿಮಾದಲ್ಲಿ ಕೆಲಸ ಮಾಡುವ ಯೋಚನೆ ಮಾಡಿದರು. 2010ರಲ್ಲಿ, ತಾಪ್ಸಿ ಜುಮ್ಮಂದಿ ನಂದಂ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಟಾಲಿವುಡ್‌ನಲ್ಲಿ ಯಶಸ್ಸು ಪಡೆದ ನಂತರ, ಅವರು ಹಿಂದಿ ಚಿತ್ರಗಳ ಕಡೆ ಮುಖ ಮಾಡಿದರು. ಅಂದಹಾಗೇ, ಅವರು ತಮ್ಮ 12 ವರ್ಷಗಳ ವೃತ್ತಿ ಜೀವನದಲ್ಲಿ 21 ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು, ನಾಲ್ಕು ಮಾತ್ರ ಹಿಟ್ ಆಗಿವೆ. ಇವುಗಳಲ್ಲದೆ ಆಕೆ ಕಾಣಿಸಿಕೊಂಡ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ತಾಪ್ಸಿ ಪನ್ನು ವೃತ್ತಿಜೀವನದ ರಿಪೋರ್ಟ್ ಕಾರ್ಡ್ಇಲ್ಲಿದೆ.