ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಸುದ್ದಿಯಾಗಿತ್ತೆ. ನಟ-ನಟಿಯರು ಮದುವೆಯಾದ್ರೂ, ದೂರವಾದ್ರೂ ಆ ಬಗ್ಗೆ ಗಾಸಿಪ್‌ಗಳು ಹರಿದಾಡ್ತಾನೆ ಇರ್ತವೆ. ಸದ್ಯ ಕಾಲಿವುಡ್ ನಟಿ ಸ್ವಾತಿ ರೆಡ್ಡಿ ಮದುವೆ, ಡಿವೋರ್ಸ್‌ನಲ್ಲಿ ಕೊನೆಗೊಂಡಿದೆ ಅನ್ನೋ ಸುದ್ದಿ ಹರಿದಾಡ್ತಿದೆ.
ಈ ರೀತಿ ವಿಚ್ಛೇದನದ ಸುದ್ದಿ ಕೇಳಿ ಬಂದಿರೋದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಸ್ವಾತಿ ರೆಡ್ಡಿ ಗಂಡನಿಂದ ದೂರವಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ಸ್ವಾತಿ ಅವರಿಗೆ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಧ್ಯಮಗಳು ಕೇಳಿದ್ದವು. ಆದರೆ ನಟಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಸ್ಪಷ್ಟತೆ ಎಂದರೆ ಸ್ಪಷ್ಟತೆಯ ಕೊರತೆ. ಅದೊಂದು ಸಂಬಂಧವಿಲ್ಲದ ಪ್ರಶ್ನೆ. ನಾನು ಮಾತನಾಡುವುದಿಲ್ಲ ಎಂದು ಸ್ವಾತಿ ತಿಳಿಸಿದ್ದಾರೆ.
ವಿಚ್ಛೇದನ ಅಥವಾ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಸ್ವಾತಿ ರೆಡ್ಡಿ ಹೇಳಿದ್ದಾರೆ. ವರದಿಗಳ ಪ್ರಕಾರ ಸ್ವಾತಿ ಮತ್ತು ಆಕೆಯ ಪತಿ ಬೇರೆಯಾಗಿದ್ದಾರೆ. ತನ್ನ ಸಂಗಾತಿಗೆ ವಿಚ್ಛೇದನ ನೀಡಿದ ನಂತರ ಅವರು ತಮ್ಮ ತವರು ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಾತಿ ರೆಡ್ಡಿ ತೆಲು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಾತಿ ತೆಲುಗಿನ ಕಲರ್ಸ್ ಎಂಬ ಕಾರ್ಯಕ್ರಮದ ಮೂಲಕ ಜನಪ್ರಿಯರಾದರು. ಹಲವಾರು ಪೋಷಕ ಪಾತ್ರಗಳನ್ನು ನಿರ್ವಹಿಸಿದ ನಂತರ, ಅವರು ತಮಿಳು ಚಲನಚಿತ್ರ ಸುಬ್ರಮಣ್ಯಪುರಂ (2008) ನಲ್ಲಿ ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡಿದರು . ತೆಲುಗು ಚಲನಚಿತ್ರ ಅಷ್ಟಾ ಚಮ್ಮಾ (2008) ನಲ್ಲಿ ಅವರ ಪಾತ್ರವು ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು.
ನಂತರ] ಅವರು ಡಬ್ಬಿಂಗ್ ಕಲಾವಿದೆಯಾಗಿ ಮತ್ತು ಕೆಲವು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದರು. ಆಕೆಯ ಇತರ ಗಮನಾರ್ಹ ಚಿತ್ರಗಳೆಂದರೆ ಆದವರಿ ಮಾತಲಕು ಅರ್ಥಲೆ ವೆರುಲೆ (2007), ಸ್ವಾಮಿ ರಾ ರಾ (2013), ಆಮೆನ್ (2013), ಮತ್ತು ಕಾರ್ತಿಕೇಯ (2014).
ಸ್ವಾತಿ ರೆಡ್ಡಿ ಅಭಿನಯದ 'ಮಂತ್ ಆಫ್ ಮಧು' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಆಕರ್ಷಕವಾಗಿದೆ. ಶ್ರೀಕಾಂತ್ ನಾಗೋಟಿ ಈ ಚಿತ್ರದ ನಿರ್ದೇಶಕರು. ಯಶವಂತ್ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾತಿ ರೆಡ್ಡಿ ಗಂಡನಿಂದ ದೂರವಿರುವ ಕಾರಣಕ್ಕೇ ಡಿವೋರ್ಸ್ ಸುದ್ದಿ ಹರಿದಾಡ್ತಿದೆ.