ಭಾರತದ ಈ ಸಿನಿಮಾ ವಿದೇಶದಲ್ಲೂ ಸೂಪರ್‌ಹಿಟ್; ಭರ್ತಿ 30 ಕೋಟಿ ಟಿಕೆಟ್ ಸೇಲ್; ಆರ್‌ಆರ್‌ಆರ್‌, ಪಠಾಣ್ ಅಲ್ಲ!

Published : Sep 26, 2023, 02:29 PM IST

ಭಾರತದ ಸಿನಿಮಾಗಳು ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕೋಟಿ ಕೋಟಿ ಗಳಿಸುತ್ತಿದೆ. ಇತ್ತೀಚಿನ ಸಿನಿಮಾಗಳಾದ RRR, ಪಠಾಣ್, ದಂಗಲ್‌, ಕಾಂತಾರಾ, ಬಾಹುಬಲಿ ಮೊದಲಾದವು ಉತ್ತಮ ಸಿನಿಮಾಕ್ಕೆ ದೇಶಗಳ ಗಡಿಯಿಲ್ಲ ಅನ್ನೋದನ್ನು ಸಾಬೀತುಪಡಿಸಿದೆ. ಆದ್ರೆ ಈ ಸಿನ್ಮಾ ವಿದೇಶಗಳಲ್ಲಿ 30 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಿದ ಸಿನಿಮಾವೆಂದು ಗುರುತಿಸಿಕೊಂಡಿದೆ. ಅದ್ಯಾವುದು?

PREV
18
ಭಾರತದ ಈ ಸಿನಿಮಾ ವಿದೇಶದಲ್ಲೂ ಸೂಪರ್‌ಹಿಟ್; ಭರ್ತಿ 30 ಕೋಟಿ ಟಿಕೆಟ್ ಸೇಲ್; ಆರ್‌ಆರ್‌ಆರ್‌, ಪಠಾಣ್ ಅಲ್ಲ!

ಭಾರತೀಯ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಡಿಫರೆಂಟ್ ಸ್ಟೋರಿ, ಸಿನಿಮಾಟೋಗ್ರಫಿ, ಆಕ್ಟಿಂಗ್ ಮೂಲಕ ವಿದೇಶಗರನ್ನು ಆಕರ್ಷಿಸುತ್ತಿದೆ. ಕೇವಲ ಇಂಡಿಯನ್ ಬಾಕ್ಸ್‌ ಆಫೀಸಿನಿಂದ ಮಾತ್ರವಲ್ಲ ವಿದೇಶಗಳಲ್ಲೂ ಕೋಟಿ ಕೋಟಿ ಗಳಿಸುತ್ತಿದೆ. ಇತ್ತೀಚಿನ ಸಿನಿಮಾಗಳಾದ RRR, ಪಠಾಣ್, ದಂಗಲ್‌, ಕಾಂತಾರಾ, ಬಾಹುಬಲಿ ಮೊದಲಾದವು ಉತ್ತಮ ಸಿನಿಮಾಕ್ಕೆ ದೇಶಗಳ ಗಡಿಯಿಲ್ಲ ಅನ್ನೋದನ್ನು ಸಾಬೀತುಪಡಿಸಿದೆ. 

28

ಆದರೆ ಈ ಒಂದು ಚಿತ್ರವು ಭಾರತದಲ್ಲಿ ಮಾತ್ರ ಬ್ಲಾಕ್‌ಬಸ್ಟರ್ ಅಲ್ಲ. ವಿದೇಶದಲ್ಲೂ ಸೂಪರ್‌ಹಿಟ್ ಆಗಿದೆ. ಆರ್‌ಆರ್‌ಆರ್, ದಂಗಲ್, ಬಾಹುಬಲಿ ಮತ್ತು ಪಠಾನ್‌ಗಳಿಗಿಂತ ಹೆಚ್ಚು ಗಳಿಸಿದೆ. ಅಷ್ಟೇ ಯಾಕೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಜವಾನ್ ಚಿತ್ರವನ್ನೂ ಮೀರಿಸಿದೆ. ವಿದೇಶಗಳಲ್ಲಿ 30 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಿದ ಸಿನಿಮಾವೆಂದು ಗುರುತಿಸಿಕೊಂಡಿದೆ
 

38

ಜಿತೇಂದ್ರ ಮತ್ತು ಆಶಾ ಪರೇಖ್ ಅವರ ಕಾರವಾನ್ ಭಾರತದಲ್ಲಿ 1971ರಲ್ಲಿ ಬಿಡುಗಡೆಯಾಯಿತು. ಚಿತ್ರವು ಯಶಸ್ವಿಯಾಯಿತು, ಗಲ್ಲಾಪೆಟ್ಟಿಗೆಯಲ್ಲಿ 3.6 ಕೋಟಿ ರೂ ಗಳಿಸಿತು. ಎಂಟು ವರ್ಷಗಳ ನಂತರ, ಚಲನಚಿತ್ರವು ಚೀನಾದಲ್ಲಿ ಬಿಡುಗಡೆಯಾಯಿತು ಮತ್ತು ಅದು ಅಲ್ಲಿ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಆಯಿತು, ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿತು. ಭರ್ತಿ 30 ಕೋಟಿ ಟಿಕೆಟ್‌ ವಿದೇಶಿ ನೆಲದಲ್ಲಿ ಮಾರಾಟಗೊಂಡಿತು.

48

2018ರಲ್ಲಿ ದೇಶದಲ್ಲಿ ಗಳಿಕೆಯ ದಾಖಲೆಗಳನ್ನು ನಿರ್ಮಿಸಿದ ಅಮೀರ್ ಖಾನ್ ಅವರ 'ದಂಗಲ್' 4.5 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ, 'ಕಾರವಾನ್' ಸಿನಿಮಾ ರಾಜ್ ಕಪೂರ್ ಅವರ 'ಆವಾರಾ'ವನ್ನು ಹಿಂದಿಕ್ಕಿ ವಿದೇಶದಲ್ಲಿ ಹೆಚ್ಚು ಖ್ಯಾತಿ ಗಳಿಸಿದ ಸಿನಿಮಾ ಎಂದು ಗುರುತಿಸಿಕೊಂಡಿದೆ. 'ಆವಾರಾ'ದ 20 ಕೋಟಿಗೂ ಹೆಚ್ಚು ಟಿಕೆಟ್‌ ಮಾರಾಟಗೊಂಡರೆ, ಕಾರವಾನ್‌ನ 30 ಕೋಟಿ ಟಿಕೆಟ್‌ ಮಾರಾಟಗೊಂಡಿತು.

58

ಕಾರವಾನ್ 1979 ರಲ್ಲಿ ಚೀನಾದಲ್ಲಿ ಸುಮಾರು ರೂ 31 ಕೋಟಿ ಗಳಿಸಿತು. ಹಣದುಬ್ಬರಕ್ಕೆ ಸರಿಹೊಂದಿಸಿದರೆ, ಈ ಅಂಕಿ ಅಂಶವು ಇಂದಿನ ಕಾಲದಲ್ಲಿ 1000 ಕೋಟಿ ರೂ ಗಿಂತ ಹೆಚ್ಚಾಗಿರುತ್ತದೆ. ಇಂದಿನ ದರಗಳಿಗೆ ಟಿಕೆಟ್ ದರವನ್ನು ಸರಿಹೊಂದಿಸಿದರೆ, ಅಂಕಿಅಂಶವು 3000 ಕೋಟಿ ರೂ. ದಾಟುತ್ತದೆ. ದಂಗಲ್ ವಿದೇಶದಲ್ಲಿ 1300 ಕೋಟಿ ಗಳಿಸಿದರೆ, ಪಠಾಣ್ ಮತ್ತು RRR ಎರಡೂ ಕೇವಲ 400 ಕೋಟಿ ರೂ ಗಳಿಸಿದೆ.

68

ಬಾಹುಬಲಿ 2, ದೇಶ-ವಿದೇಶಗಳಲ್ಲಿ ದೊಡ್ಡ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಬರೋಬ್ಬರಿ 425 ಕೋಟಿ ಗಳಿಸಿದೆ. ಆದ್ರೆ ಇದ್ಯಾವುದೂ ಕಾರವಾನ್  ಚಿತ್ರ ಸಾಧಿಸಿದ್ದಕ್ಕೆ ಹತ್ತಿರವಾಗುವುದಿಲ್ಲ.

78

ಆದರೆ, ಕಾರವಾನ್ ಭಾರತದಲ್ಲಿ ಹೆಚ್ಚು ಮಹತ್ವದ ಚಿತ್ರವಾಗಿರಲಿಲ್ಲ. ಇದು 1971ರ ಅತಿ ಹೆಚ್ಚು ಗಳಿಕೆಯ ಆರನೇ ಭಾರತೀಯ ಚಲನಚಿತ್ರವಾಗಿತ್ತು. ಲಿಸ್ಟ್‌ನಲ್ಲಿ ಹಾಥಿ ಮೇರೆ ಸಾಥಿ, ಮೇರಾ ಗಾಂವ್ ಮೇರಾ ದೇಶ್ ಮತ್ತು ಹರೇ ರಾಮ ಹರೇ ಕೃಷ್ಣದಂತಹ ದೊಡ್ಡ ಚಲನಚಿತ್ರಗಳನ್ನು ಹೊಂದಿತ್ತು. ಆದರೆ ಚೀನಾದಲ್ಲಿ, ಚಲನಚಿತ್ರವು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದೆ. ಇದನ್ನು ಅಮೀರ್ ಖಾನ್ ತಂದೆ ತಾಹಿರ್ ಹುಸೇನ್ ನಿರ್ದೇಶಿಸಿದ್ದಾರೆ. 

88

2018ರಲ್ಲಿ, ದಂಗಲ್ ಮತ್ತು ಸೀಕ್ರೆಟ್ ಸೂಪರ್‌ಸ್ಟಾರ್ ಪ್ರಚಾರಕ್ಕಾಗಿ ಅಮೀರ್ ಚೀನಾದಲ್ಲಿದ್ದಾಗ, ಜನರು ಕಾರವಾನ್ ಸಿನಿಮಾವನ್ನು ಅಲ್ಲಿನ ಜನರು ಇನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.

Read more Photos on
click me!

Recommended Stories