ಊರ್ಮಿಳಾ ಮಾತೊಂಡ್ಕರ್ (Urmila Matondkar): ತನ್ನ ನಟನೆ, ಗ್ಲಾಮರ್ ಮೂಲಕ ಹಿಂದಿ, ತಮಿಳು, ತೆಲುಗು, ಮಲಯಾಲಂ, ಮರಾಠಿ ಸಿನಿಮಾಗಳಲ್ಲಿ ಬಹು ದೊಡ್ಡ ಹೆಸರು ಮಾಡಿದ ನಟಿ ಊರ್ಮಿಳಾ ಮಾತೊಂಡ್ಕರ್ ಬಾಲನಟಿಯಾಗಿ ಮೂರನೇ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಮಾಸೂಮ್, ಕರ್ಮ್, ಡಕಾಯಿತ್ ಹೀಗೆ ಹಲವಾರು ಸಿನಿಮಾಗಳಲ್ಲಿ ಇವರು ಬಾಲನಟಿಯಾಗಿ ನಟಿಸಿದ್ದಾರೆ.