ಹುಟ್ಟೋ ಮಗುವಿಗೆ ತೊಟ್ಟಿಲು ರೆಡಿ ಮಾಡಿದ ಸ್ವರಾ ಭಾಸ್ಕರ್‌: ಮಲಗಿದ್ದು ಯಾರು ನೋಡಿ!

Published : Aug 08, 2023, 04:25 PM IST

ನಟಿ  ಸ್ವರಾ ಭಾಸ್ಕರ್ ಗರ್ಭಿಣಿಯಾಗಿದ್ದು, ಈ ದಿನಗಳಲ್ಲಿ ಅವರು ತಮ್ಮ ಗರ್ಭಧಾರಣೆಯ ಅವಧಿಯನ್ನು ಆನಂದಿಸುತ್ತಿದ್ದಾರೆ. ಶೀಘ್ರದಲ್ಲೇ ತಾಯಿಯಾಗಲಿರುವ ಸ್ವರಾ ಕೆಲವು ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬೇಬಿ ಬಂಪ್‌ನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಪುಟ್ಟ ಅತಿಥಿಯ ಆಗಮನಕ್ಕೆ ಸಿದ್ಧತೆಯನ್ನೂ ಆರಂಭಿಸಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. 

PREV
17
ಹುಟ್ಟೋ ಮಗುವಿಗೆ ತೊಟ್ಟಿಲು ರೆಡಿ ಮಾಡಿದ ಸ್ವರಾ ಭಾಸ್ಕರ್‌: ಮಲಗಿದ್ದು ಯಾರು ನೋಡಿ!

ಸ್ವರಾ ಭಾಸ್ಕರ್  ಕೆಲವು ಗಂಟೆಗಳ ಹಿಂದೆ, ಬಂಪ್ ತೋರಿಸುತ್ತಿರುವ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮುಂಬರುವ ಮಗುವಿನ ತಯಾರಿಯ ಕಿರುನೋಟವನ್ನೂ ಶೇರ್‌ ಮಾಡಿಕೊಂಡಿದ್ದಾರೆ.

27

ಹಂಚಿಕೊಂಡ ಫೋಟೋದಲ್ಲಿ, ಸ್ವರಾ ಸ್ಕೈ ಬ್ಲೂ ಕಲರ್ ಡ್ರೆಸ್ ಧರಿಸಿ ಎರಡೂ ಕೈಗಳಿಂದ ಬೇಬಿ ಬಂಪ್ ಹಿಡಿದಿದ್ದಾರೆ. ಮೇಕಪ್ ಇಲ್ಲದ ಸ್ವರಾ ಮುಖದಲ್ಲಿ ತಾಯಿತನದ ಕಳೆ ಮೂಡಿದೆ. ಕೂದಲನ್ನು ಕೂಡ ಬಿಗಿಯಾಗಿ ಕಟ್ಟಿಕೊಂಡಿದ್ದಾರೆ. 

37

ಮತ್ತೊಂದೆಡೆ, ಎರಡನೇ ಫೋಟೋದಲ್ಲಿ, ಬರಲಿರುವ ಮಗುವಿಗುವಾಗಿ ಸಿದ್ಧ ಗೊಳಿಇಸರುವ ತೊಟ್ಟಿಲನ್ನು ತೋರಿಸಲಾಗಿದೆ. ಆದರೆ ಫೋಟೋದಲ್ಲಿ, ಅವರ ಬೆಕ್ಕು ಈ ತೊಟ್ಟಿಲಲ್ಲಿ ವಿಶ್ರಾಂತಿ ಪಡೆಯುತ್ತಿದೆ. 

47

'ಹೊಸ ಅತಿಥಿಗಾಗಿ ತಯಾರಿ ಮಾಡಲು ನಮ್ಮ ಕೋಣೆಯಲ್ಲಿ ಒಂದು ಹಾಸಿಗೆ ರೆಡಿಯಾಗಿದೆ. ಅದನ್ನು ಯಾರು ಆಕ್ರಮಿಸಿಕೊಂಡಿದ್ದಾರೆ ಎಂದು ನೋಡಲು ಸ್ವೈಪ್ ಮಾಡಿ. ತೊಟ್ಟಿಲನ್ನು ಬಿಡಲು ನಿರಾಕರಿಸಿದ ಮೊದಲ ನಿವಾಸಿ' ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. 

57

ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ಯುವ ಘಟಕ ಸಮಾಜವಾದಿ ಯುವಜನ ಸಭಾದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾದ ಫಹಾದ್ ಅಹ್ಮದ್ ಅವರನ್ನು ಈ ವರ್ಷದ ಜನವರಿಯಲ್ಲಿ ಕೋರ್ಟ್ ಮ್ಯಾರೇಜ್ ಆದರು. ನಂತರ ಮಾರ್ಚ್‌ನಲ್ಲಿ  ಸಂಪ್ರಾದಯಿಕವಾಗಿ ಮರು ಮದುವೆಯಾದರು.

67

 ಅವರ ಮದುವೆಯ ಫೋಟೋಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡ ನಂತರ ಶಾಕ್ ಆಗಿದ್ದ ಅಭಿಮಾನಿಗಳಿಗೆ ಮದುವೆಯಾದ 3 ತಿಂಗಳ ನಂತರ ಅವರು ತಮ್ಮ ಮಗುವಿನ ಆಗಮನದ ಬಗ್ಗೆ ಸುದ್ದಿ ಹಂಚಿಕೊಂಡು ಮತ್ತೊಂದು ಸರ್‌ಪ್ರೈಸ್‌ ನೀಡಿದರು

77

'ಕೆಲವೊಮ್ಮೆ ನಿಮ್ಮ ಎಲ್ಲಾ ಪ್ರಾರ್ಥನೆಗಳು ಒಂದೇ ಬಾರಿಗೆ ಉತ್ತರಿಸಲ್ಪಡುತ್ತವೆ. ನಾವು ಹೊಸ ಪ್ರಪಂಚಕ್ಕೆ ಕಾಲಿಡಲಿದ್ದೇವೆ ಎಂದು ನಾನು ತುಂಬಾ  ಕೃತಜ್ಞನಾಗಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ ಎಂದು ತಮ್ಮ ಪತಿಯೊಂದಿಗೆ ಫೋಟೋವನ್ನು ಹಂಚಿಕೊಂಡು ಇದರೊಂದಿಗೆ ಅಕ್ಟೋಬರ್‌ನಲ್ಲಿ ತಮ್ಮ ಮಗು ಜನಿಸುವುದಾಗಿಯೂ ಹೇಳಿದ್ದರು.

Read more Photos on
click me!

Recommended Stories