ಬೇಬಿ ಬೆಡ್‌ರೂಮ್‌ ಸೀನ್ ವೈರಲ್; ಪೋಷಕರ ಒಪ್ಪಿಗೆ ಪಡೆದು ರೆಕಾರ್ಡ್ ಮಾಡಿದ ವೈಷ್ಣವಿ!

First Published | Aug 8, 2023, 11:22 AM IST

ಆನಂದ್ ದೇವರಕೊಂಡ ಜೊತೆ ವೈಷ್ಣವಿ ಬೆಡ್‌ ರೂಮ್‌ ಸೀನ್ ವೈರಲ್. ಪೊಷಕರು ಒಪ್ಪಗೆ ಕೊಟ್ಟಿದ್ದು ನಿಜವೇ?

ತೆಲುಗು ಚಿತ್ರರಂಗದಲ್ಲಿ ಬಾಕ್ಸ್‌ ಆಫೀಸ್‌ ಧೋಳ್ ಎಬ್ಬಿಸುತ್ತಿರುವ ಬೇಬಿ ಸಿನಿಮಾದಲ್ಲಿ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅಭಿನಯಿಸಿದ್ದಾರೆ.

ಸಿನಿಮಾ ಸೂಪರ್ ಹಿಟ್ ಪ್ರತಿಕ್ರಿಯೆ ಪಡೆಯುತ್ತಿದ್ದು ಚಿತ್ರದ ಬೆಡ್‌ ರೂಮ್ ಸೀನ್ ವೈರಲ್ ಆಗುತ್ತಿದೆ. ಈ ಸೀನ್‌ ಬಗ್ಗೆ ಸ್ವತಃ ವೈಷ್ಣವಿ ಮಾತನಾಡಿದ್ದಾರೆ.

Tap to resize

ನಿರ್ದೇಶಕ ಸಾಯಿ ರಾಜೇಶ್ ತಮ್ಮ ಪಾತ್ರ ಮತ್ತು ಕ್ಯಾರೆಕ್ಟರ್‌ಗಿರುವ ಬೆಡ್‌ ರೂಮ್‌ ಸೀನ್‌ ಬಗ್ಗೆ ತಿಳಿಸಿದರು ಆರಂಭದಲ್ಲಿ ತುಂಬಾನೇ ಹೆದರಿಕೊಂಡೆ ಎಂದು ವೈಷ್ಣವಿ ಹೇಳಿದ್ದಾರೆ.

ಬೆಡ್‌ ರೂಮ್‌ ದೃಶ್ಯವನ್ನು ಸಿನಿಮಾದಲ್ಲಿ ಹೇಗೆ ತೋರಿಸುತ್ತಾರೆ ಗೊತ್ತಿಲ್ಲ ಆದರಲ್ಲೂ ವೀಕ್ಷಕರು ಹೇಗೆ ರಿಯಾಕ್ಟ್‌ ಮಾಡುತ್ತಾರೆ ಅನ್ನೋ ಭಯವಿತ್ತಂತೆ.

'ಚಿತ್ರಕಥೆ ಒಪ್ಪಿಕೊಂಡ ಸಮಯದಲ್ಲಿ ಪೋಷಕರ ಜೊತೆ ಬೆಡ್‌ ರೂಮ್ ಸೀನ್ ಬಗ್ಗೆ ಮಾತನಾಡಿದ್ದರೆ ಅವರು ಒಪ್ಪಿಗೆ ಕೊಟ್ಟ ಮೇಲೆ ನಟಿಸಿರುವುದು'

'ಬೆಡ್‌ ರೂಮ್ ಸೀನ್ ಮಾಡುವಾಗ ಚಿತ್ರತಂಡ ಸಹಾಯ ಮಾಡಿದೆ. ಸೆಟ್‌ನಲ್ಲಿ ಹೆಚ್ಚಿಗೆ ಜನರು ಇರಲಿಲ್ಲ ಹೀಗಾಗಿ ಮುಜುಗರ ಕಡಿಮೆ ಆಯ್ತು'

ಮೂವಿ ಮೇಕರ್ ಬ್ಯಾನರ್‌ನ ಅಡಿ  ಎಸ್‌ಕೆಎನ್‌ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಪೋಸ್ಟರ್‌ಯಿಂದ ಹಿಡಿದು ಈವರೆಗೂ ಸಿನಿಮಾ ಸುದ್ದಿಯಲ್ಲಿದೆ. 

Latest Videos

click me!