ಸುಸ್ಮಿತಾ ಸೇನ್ ಬಿಚ್ಟಿಟ್ಟ Bollywood ರಹಸ್ಯಗಳಿವು, ಇದಕ್ಕೆ ಚಿತ್ರರಂಗದಿಂದ ದೂರ ಉಳಿದ್ರಾ?

Suvarna News   | Asianet News
Published : Mar 04, 2022, 07:11 PM IST

ವಿಶ್ವ ಸುಂದರಿ (Miss Universe) ಪಟ್ಟ ಗೆದ್ದ ನಂತರ ಸುಶ್ಮಿತಾ ಸೇನ್  (Sushmita Sen) ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ 1997ರಲ್ಲಿ ಮಹೇಶ್ ಭಟ್ ಅವರ ದಸ್ತಕ್,   ಉತ್ತಮ ಪ್ರದರ್ಶನ ನೀಡಲಿಲ್ಲ. ಇದಾದ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು ಮತ್ತು ನಂತರ ಇದ್ದಕ್ಕಿದ್ದಂತೆ ಬೆಳ್ಳಿತೆರೆಯಿಂದ ಕಣ್ಮರೆಯಾದರು. ಸಿನಿ ಜರ್ನಿ (Cine Journey( ಅವರಿಗೆ ಸುಲಭವಾಗಿರಲಿಲ್ಲ. ಆದಾಗ್ಯೂ,ಸುದೀರ್ಘ ಗ್ಯಾಪ್ ನಂತರ, ಅವರು OTT ಗೆ ಪಾದಾರ್ಪಣೆ ಮಾಡಿದರು ಮತ್ತು ಆರ್ಯ ವೆಬ್ ಸರಣಿಯು ಸೂಪರ್ ಹಿಟ್ ಆಗಿತ್ತು. ಅದರ ಎರಡನೇ ಭಾಗವೂ ಸಹ ಹಿಟ್‌ ಆಗಿದೆ. ಈ ನಡುವೆ ಅವರು ಏಕೆ ಚಲನಚಿತ್ರಗಳಿಂದ ದೂರವಿದ್ದರು ಮತ್ತು ನಂತರ ಸುಮಾರು 10 ವರ್ಷಗಳ ನಂತರ OTT ಗೆ ಪಾದಾರ್ಪಣೆ ಮಾಡಿದರು, ಎಂದು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದರು. ಅಷ್ಟೇ ಅಲ್ಲ, ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನೂ ಅವರು ಬಹಿರಂಗಪಡಿಸಿದ್ದಾರೆ. ಮನರಂಜನಾ ಉದ್ಯಮದ ಬಗ್ಗೆ ಅವರು ಏನು ಹೇಳಿದ್ದಾರೆ ನೋಡಿ.

PREV
18
ಸುಸ್ಮಿತಾ ಸೇನ್ ಬಿಚ್ಟಿಟ್ಟ Bollywood ರಹಸ್ಯಗಳಿವು, ಇದಕ್ಕೆ ಚಿತ್ರರಂಗದಿಂದ ದೂರ ಉಳಿದ್ರಾ?

ಸುಶ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ನ್ಯೂಸ್‌ ಆಗುತ್ತಿರುತ್ತಾರೆ ಕೆಲವು ತಿಂಗಳ ಹಿಂದೆ, ಅವರು ತಮ್ಮ ಬಾಯ್‌ಫ್ರೆಂಡ್‌ ರೋಹ್ಮನ್ ಶಾಲ್ ಅವರ ಜೊತೆ ಬ್ರೇಕಪ್ ಮಾಡಿಕೊಂಡರು. ಆದರೂ ಬ್ರೇಕಪ್ ನಂತರವೂ ಸೇನ್‌ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

28

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಅವರು ಬಾಲಿವುಡ್ ತನಗೆ ಬೇಕಾದಂತೆ ಯಾವುದೇ ಕೆಲಸವನ್ನು ನೀಡದ ಕಾರಣ ಲಾಂಗ್ ಗ್ಯಾಪ್ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.  ಮುಖ್ಯವಾಗಿ ನನ್ನ ವಯಸ್ಸು ಮತ್ತು ನನ್ನ ಪರದೆಯ ವಯಸ್ಸಿನಲ್ಲಿ ವ್ಯತ್ಯಾಸ ಕಾರಣ .

38

ಉತ್ತಮ ಪಾತ್ರಗಳು ಮತ್ತು ಕೆಲಸದ ಕೊರತೆಯಿಂದಾಗಿ ನಾನು ಹತ್ತು ವರ್ಷಗಳಿಂದ ಕೆಲಸ ಮಾಡಲಿಲ್ಲ ಎಂದು ಅವರು ಹೇಳಿದರು. ನಾನು ನೆಟ್‌ವರ್ಕಿಂಗ್‌ನಲ್ಲಿ ಚೆನ್ನಾಗಿಲ್ಲ. ಈ ಸಮಯದಲ್ಲಿ ನಾನು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅರ್ಥಮಾಡಿಕೊಂಡಿದ್ದೇನೆ.


 

48

ಈ 10 ವರ್ಷಗಳ ಅಂತರದಲ್ಲಿ, ನಾನು ನನ್ನ ಇಬ್ಬರು ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರನ್ನು ಚೆನ್ನಾಗಿ ಬೆಳೆಸಿದೆ. ಮತ್ತು ಈ ಸಮಯದಲ್ಲಿ, ಅವರು ಇಬ್ಬರಿಗೂ ಹೆಚ್ಚಿನ ಗಮನವನ್ನು ನೀಡಿದ್ದೇನೆ. ಅವರಿಗೆ ಆದ್ಯತೆಯ ನೀಡಿದೆ ಎಂದು ಸುಶ್ಮಿತಾ ಸೇನ್ ಹೇಳಿದರು. 

58

ನನ್ನ ಬಗ್ಗೆ ಜನರ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ ಎಂದರು. ನಾನು ನೆಟ್‌ವರ್ಕಿಂಗ್‌ನಲ್ಲಿ ಚೆನ್ನಾಗಿಲ್ಲ ಮತ್ತು ಅದಕ್ಕಾಗಿಯೇ ನನಗೆ ನನ್ನ ಆಯ್ಕೆಯ ಕೆಲಸವೂ ಸಿಗಲಿಲ್ಲ ಎಂದು ಸಂದರ್ಶನದಲ್ಲಿ ಇನ್ನಷ್ಟು ಹೇಳಿದ್ದಾರೆ.

 

68

ಸುಶ್ಮಿತಾ ಸೇನ್ ಕೊನೆಯದಾಗಿ 2010 ರ ಚಲನಚಿತ್ರ ದುಲ್ಹಾ ಮಿಲ್ ಗಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಫರ್ದೀನ್ ಖಾನ್ ಜೊತೆ ಸುಶ್ಮಿತಾ ನಟಿಸಿದ್ದಾರೆ. ಅದೊಂದು ಕಾಮಿಡಿ ಚಿತ್ರವಾಗಿತ್ತು

78

2020 ರಲ್ಲಿ, ಸುಶ್ಮಿತಾ ಸೇನ್ ಡಿಸ್ನಿ ಹಾಟ್‌ಸ್ಟಾರ್‌ನ ವೆಬ್ ಸರಣಿ ಆರ್ಯದ ಮೂಲಕ ಪುನರಾಗಮನ ಮಾಡಿದರು. ಈ ವೆಬ್ ಸರಣಿಯ ಎರಡು ಭಾಗಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದರ ಮೂರನೇ ಭಾಗದ ಚಿತ್ರೀಕರಣ ಇನ್ನೂ ನಡೆಯುತ್ತಿದೆ.


 

88

ಸುಶ್ಮಿತಾ ಸೇನ್ ಅವರು ಬಿವಿ ನೋ ಒನ್, ತುಮ್ಕೋ ನಾ ಭೂಲ್ ಪಯೇಂಗೆ, ಫಿಜಾ, ಆಂಖೇನ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂಂ ಕಿಯಾ, ಮೈನ್ ಐಸಾ ಹಿ ಹೂ, ನೋ ಪ್ರಾಬ್ಲಂ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಅವರಿಗೆ ಯಾವುದೇ ಬಾಲಿವುಡ್ ಸಿನಿಮಾ ಆಫರ್‌ಗಳಿಲ್ಲ.

Read more Photos on
click me!

Recommended Stories