ನನ್ನ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ನನಗೆ 8 ವರ್ಷಗಳು ಬೇಕಾಯಿತು: Kriti Sanon

First Published | Jun 6, 2022, 6:33 PM IST

ಪ್ರಸ್ತುತ ಬಾಲಿವುಡ್ ನಟಿ ಕೃತಿ ಸನೋನ್ (Kriti Sanon)  ತಮ್ಮ ಜೀವನದ ಸಂತೋಷದ ಕ್ಷಣವನ್ನು ಆನಂದಿಸುತ್ತಿದ್ದಾರೆ. ಅವರು IIFA 2022 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ಆವಾರ್ಡ್‌ ಆಗಿದ್ದು ನಟಿ ಈ ಬಗ್ಗೆ ಹೆಚ್ಚು ಭಾವುಕರು ಮತ್ತು ಉತ್ಸುಕರಾಗಿದ್ದಾರೆ. 

 ಮಿಮಿಯಲ್ಲಿನ ಅತ್ಯುತ್ತಮ ನಟನೆಗಾಗಿ ಅತ್ಯುತ್ತಮ ನಟಿಪ್ರಶಸ್ತಿಯನ್ನು ಸ್ವೀಕರಿಸುವಾಗ ತಮ್ಮ ಮಿಲಿಯನ್ ಡಾಲರ್ ಸ್ಮೈಲ್‌ ಜೊತೆ ಸ್ಟ್ರಾಪ್‌ಲೆಸ್ ಹಳದಿ ಫೇದರ್‌  ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು ಕೃತಿ ಸನೋನ್‌.
 

ಕಳೆದ ವರ್ಷ ಸಂಪೂರ್ಣವಾಗಿ ವಿಭಿನ್ನವಾದ ಮಿಮಿ ಪಾತ್ರದಲ್ಲಿ ತನ್ನ ಅಭಿನಯದ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದ ಕೃತಿ ಸನೋನ್, ಅಂತಿಮವಾಗಿ ತನ್ನ ಕೆಲಸಕ್ಕೆ ಅರ್ಹವಾದ ಎಲ್ಲಾ ಪ್ರಶಂಸೆ ಮತ್ತು ಗೌರವಗಳನ್ನು ಪಡೆಯುತ್ತಿದ್ದಾರೆ. ಏಕೆಂದರೆ  ಅವರು ಪ್ರಮುಖ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
 

Tap to resize

ಕೃತಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆಯ ಜೊತೆ ಸ್ವೀಟ್‌ ನೋಟ್‌ ಅನ್ನು  ಹಂಚಿಕೊಂಡಿದ್ದಾರೆ. 'ಕನಸುಗಳು ನನಸಾಗುತ್ತವೆ! ನೀವು ಮಾಡಬೇಕಾಗಿರುವುದು ಅದಕ್ಕಾಗಿ ಶ್ರಮಿಸುವುದು ಮತ್ತು ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ನನ್ನ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ನನಗೆ 8 ವರ್ಷ ಗಳು ಬೇಕಾಯಿತು. . ಆದರೆ ನಾನು ಮಿಮಿಗಾಗಿ ನನ್ನ ಮೊದಲನೆಯದನ್ನು ಸ್ವೀಕರಿಸಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಗಿ. ಎಂದೆಂದಿಗೂ ವಿಶೇಷವಾಗಿರುವ ಚಿತ್ರ, ನನ್ನ ಚಿತ್ರಕಥೆಯಲ್ಲಿ ಯಾವಾಗಲೂ ವಿಶೇಷ ಪಾತ್ರ!#ಅತ್ಯುತ್ತಮ ನಟಿ ಪ್ರಶಸ್ತಿ. ಮತ್ತು ಅದ್ಭುತ ಸಂಜೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ನನ್ನನ್ನು ನಿಮ್ಮ ಜೀವನದ ಮಿಮಿಯನ್ನಾಗಿ ಮಾಡಿದ #Dinoo @laxman.utekar ಸರ್ ಅವರಿಗೆ ಮತ್ತು ಮಿಮಿಯ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ' ಎಂದು ನಟಿ ಬರೆದಿದ್ದಾರೆ.
 

ಮಿಮಿಯಲ್ಲಿ ಅಂತಹ ಬಲವಾದ ಮತ್ತು ಪ್ರಬುದ್ಧ ಅಭಿನಯವನ್ನು ನೀಡಿದ್ದರಿಂದ ಮತ್ತು  ಅದಕ್ಕಾಗಿ ಅವರು 15 ಕೆಜಿ ತೂಕವನ್ನು ಸಹ  ಹೆಚ್ಚಿಸಿಕೊಂಡಿದ್ದ ಅವರು ಮುಖ್ಯ ನಟಿ ಅತ್ಯುತ್ತಮವಾದ ಸ್ಥಾನವನ್ನು ಗಳಿಸಿದ್ದಾರೆ. ಕೃತಿ ಸನೋನ್ ಚಿತ್ರದ ಬಿಡುಗಡೆಯ ನಂತರ ಭಾಗದಲ್ಲಿ ತನ್ನ ಪ್ರಬುದ್ಧತೆ ಮತ್ತು ಸಾಮರ್ಥ್ಯಕ್ಕಾಗಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದರು.  

ಕೃತಿ ಮುಂಬರುವ ತಿಂಗಳುಗಳಲ್ಲಿ ಆದಿಪುರುಷ, ಗಣಪತ್‌ ಟು ಭೇಡಿಯ ಮತ್ತು ಶೆಹಜಾದಾ ಸೇರಿದಂತೆ ಹಲವಾರು ದೊಡ್ಡ-ಬಜೆಟ್ ಚಿತ್ರಗಳ, ಜೊತೆಗೆ ಅನುರಾಗ್ ಕಶ್ಯಪ್ ಅವರ ಹೆಸರಿಡದ ಚಲನಚಿತ್ರದಲ್ಲಿನಟಿಸುವ ನಿರೀಕ್ಷೆಯಿದೆ.

Latest Videos

click me!