ಸುಕೇಶ್ ಚಂದ್ರಶೇಖರ್‌ ಬಲೆಗೆ ನೋರಾ ಮತ್ತು ಜಾಕ್ವೆಲಿನ್ ಬಿದ್ದಿದ್ದು ಹೇಗೆ?

First Published | Jan 19, 2023, 5:28 PM IST

200 ಕೋಟಿಗೂ ಹೆಚ್ಚು ವಂಚನೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಸ್ಟರ್ ಮೈಂಡ್ ಸುಕೇಶ್ ಚಂದ್ರಶೇಖರ್, ತಮ್ಮ ಹಣ ತೋರಿಸಿ ಸಿನಿಮಾ ನಾಯಕಿಯರನ್ನು ತನ್ನ ಜಾಲಕ್ಕೆ ಸಿಲುಕಿಸುತ್ತಿದ್ದ. ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಖಾಸಗಿ ಜೆಟ್ ರೈಡ್‌ಗೆ ಕರೆದೊಯ್ದರು. ಅದೇ ವೇಳೆಗೆ ನೋರಾ ಫತೇಹಿಗೆ (Nora Fatehi)  ನನ್ನ ಗೆಳತಿಯಾಗಲು ಬಂಗಲೆ ಹಾಗೂ ಕಾರಿನ ಆಸೆ ತೋರಿಸಿದ್ದರು. ಸುಕೇಶ್ ತನ್ನ ಗೆಳತಿಯಾದ ನಂತರ ದೊಡ್ಡ ಮನೆ ಮತ್ತು ಐಷಾರಾಮಿ ಜೀವನಶೈಲಿಯನ್ನು ನೀಡುವುದಾಗಿ ಭರವಸೆ ನೀಡಿದ್ದ ಎಂದು ನೋರಾ ಫತೇಹಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. 

ಪಿಂಕಿ ಇರಾನಿ ತನ್ನನ್ನು ಸುಕೇಶ್ ಬಲೆಯಲ್ಲಿ ಸಿಲುಕಿಸಿದ್ದಾಳೆ ಎಂದು ಬಾಲಿವುಡ್‌ ನಟಿ ನೋರಾ ಪತೇಹಿ ಇತ್ತೀಚೆಗೆ ನ್ಯಾಯಾಲಯದಲ್ಲಿ ಹೇಳಿದ್ದರು.  
 

'ಸುಕೇಶ್ ಗೆಳತಿಯಾಗಲು ಅನೇಕ ನಟಿಯರು ಸಾಯುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಸುಕೇಶ್ ಜೊತೆ ಸಂಬಂಧ ಹೊಂದಲು ಬಯಸಿದ್ದಾರೆ ಮತ್ತು ಸುಕೇಶ್ ಒಪ್ಪಿಗೆಗೆ ಕಾಯುತ್ತಿದ್ದಾರೆ. ಆದರೆ ಸುಕೇಶನಿಗೆ ನೋರಾ ಫತೇಹಿ ಬೇಕು ಎಂದು ಪಿಂಕಿ ನನ್ನ ಕಸಿನ್‌ ಬಳಿ ಹೇಳಿದ್ದಳು' ಎಂಬ ವಿಷಯವನ್ನು  ನೋರಾ ಬಹಿರಂಗಪಡಿಸಿದ್ದಾರೆ.

Tap to resize

ಆರಂಭದಲ್ಲಿ ಸುಕೇಶ್ ಯಾರೆಂದು ತಿಳಿದಿರಲಿಲ್ಲ. ಸುಕೇಶ್ ಎಲ್ ಎಸ್ ಕಾರ್ಪೊರೇಷನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಭಾವಿಸಿದ್ದರು. ಆಕೆಯೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕವಿರಲಿಲ್ಲ.ಯಾವತ್ತೂ ಮಾತುಕತೆ ನಡೆದಿರಲಿಲ್ಲ. ಇಡಿಯಿಂದ ವಿಚಾರಣೆಗೆ ನೋಟಿಸ್ ಬಂದ ನಂತರ  ಸುಕೇಶ್ ಚಂದ್ರಶೇಖರ್ ಒಬ್ಬ ವಂಚಕ ಎಂದು ತಿಳಿಯಿತು, ಎಂದು ನೋರಾ ಹೇಳಿದ್ದಾರೆ

ಸುಕೇಶ್ ತನ್ನ ಭಾವನೆಗಳ ಜೊತೆ ಆಟವಾಡಿ ಬದುಕನ್ನು ನರಕ ಮಾದ್ದಾನೆ. ಅವರ ವೃತ್ತಿ ಮತ್ತು ಕೆರಿಯರ್‌ ಅನ್ನು ಹಾಳುಮಾಡಿದರು  ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ನ್ಯಾಯಾಲಯದಲ್ಲಿ ಹೇಳಿದ್ದರು.

ನಾನು ಸನ್ ಟಿವಿಯ ಮಾಲೀಕ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಜಾಕ್ವೆಲಿನ್‌ಗೆ ಸುಕೇಶ್ ಹೇಳಿದ್ದಾರೆ. ಅವರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಜಾಕ್ವೆಲಿನ್‌ಗೆ ಆಮಿಷವೊಡ್ಡಿದರು.
 

ಸುಕೇಶ್ ದಿನವೂ ಜಾಕ್ವೆಲಿನ್ ಜೊತೆ ಫೋನ್ ಕರೆ ಹಾಗೂ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದ. ತಾನು ಜೈಲಿನಿಂದ ಮಾತನಾಡುತ್ತಿದ್ದೇನೆ ಅಥವಾ ಜೈಲಿನಲ್ಲಿ ಇದ್ದೇನೆ ಎಂದು ಅವರು ಎಂದಿಗೂ ಹೇಳಲಿಲ್ಲ.

ಸುಕೇಶ್ ಅವರನ್ನು ಭೇಟಿ ಮಾಡಲು ಜಾಕ್ವೆಲಿನ್ ಎರಡು ಬಾರಿ ಚೆನ್ನೈಗೆ ಹೋಗಿದ್ದರು. ಎರಡೂ ಬಾರಿ ಅವರು ತಮ್ಮ ಖಾಸಗಿ ಜೆಟ್ ಅನ್ನು ಕಳುಹಿಸಿದ್ದರು. ಜಾಕ್ವೆಲಿನ್ ಕೇರಳಕ್ಕೆ ಹೋಗಬೇಕಾದಾಗ, ಸುಖೇಶ್ ಖಾಸಗಿ ಜೆಟ್ ಮೂಲಕ ಪ್ರಯಾಣ ಬೆಳೆಸಿದರು. ಅವರು ಕೇರಳದಲ್ಲಿ ಜಾಕ್ವೆಲಿನ್‌ಗೆ ಹೆಲಿಕಾಪ್ಟರ್ ಅನ್ನು ಸಹ ಒದಗಿಸಿದ್ದರು.
 
 

ಸುಕೇಶ್ ಚಂದ್ರಶೇಖರ್ ಅವರು ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ಹಲವಾರು ಹೈ ಪ್ರೋಫೈಲ್‌ ವ್ಯಕ್ತಿಗಳಿಗೆ 200 ಕೋಟಿ ರೂ.ವಂಚಿಸಿದ್ದಾರೆ.

ಸುಕೇಶ್ ನಡೆಸಿದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಮತ್ತು ನೋರಾ ಭಾಗಿಯಾಗಿದ್ದಾರೆ ಮತ್ತು ಆತ ಲಪಟಾಯಿಸಿದ ಹಣದಿಂದ ಇಬ್ಬರಿಗೂ ಲಾಭವಾಗಿದೆ, ಎಂದು ಇಡಿ ನ್ಯಾಯಾಲಯ ಆರೋಪಿಸಿದೆ. ಡಿಸೆಂಬರ್ 2020 ರಲ್ಲಿ ನೋರಾ ಫತೇಹಿಗೆ ಸುಕೇಶ್ ಚಂದ್ರಶೇಖರ್ BMW ಕಾರನ್ನು ಉಡುಗೊರೆಯಾಗಿ ನೀಡಿದರು.

Latest Videos

click me!