ನಟಿ ರಾಕುಲ್ ಪ್ರೀತ್ ಸಿಂಗ್ ಸೌತ್ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ ಬಳಿಕ ರಾಕುಲ್ ಬಾಲಿವುಡ್ ಕಡೆ ಮುಖಮಾಡಿದರು. ಬಾಲಿವುಡ್ ನಲ್ಲೂ ರಾಕುಲ್ ಸಕ್ಸಸ್‌ಫುಲ್ ನಟಿಯಾಗಿ ಹೊರಹೊಮ್ಮಿದ್ದಾರೆ.
ರಾಕುಲ್ ಕೊನೆಯದಾಗಿ ಡಾಕ್ಟರ್ ಜೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಛತ್ರಿವಾಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮಹಿಳಿಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಇರುವ ಸಿನಿಮಾ ಇದಾಗಿದೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನಟಿ ರಾಕುಲ್, ಶಾಲೆಗಳಲ್ಲಿ ಲೈಗಿಂಕ ಶೀಕ್ಷಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ. ನಾವು ಎಲ್ಲೋ ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಶಾಲೆಗಳಲ್ಲಿ ಖಡ್ಡಾಯವಾಗಬೇಕು ಎನ್ನುವುದು ಈ ಸಿನಿಮಾ ಹೇಳುತ್ತದೆ. ಇದು ಕೂಡ ಪಠ್ಯಕ್ರಮದ ಭಾಗವಾಗಲು ಒಂದು ಕಾರಣವಿದೆ. ಇದು ಮುಖ್ಯ ಎಂದು ನಾನು ಯೋಚಿಸುತ್ತೇನೆ' ಎಂದು ಹೇಳಿದರು.
ಲೈಂಗಿಕ ಶಿಕ್ಷಣ ವ್ಯಕ್ತಿಯ ಸ್ವಾಭಾವಿಕ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಅದರಿಂದ ಓಡಿಹೋಗಲು ಸಾಧ್ಯವಿಲ್ಲ. ಅಂತಿಮವಾಗಿ ಇದು ಜೀವಶಾಸ್ತ್ರ ಮತ್ತು ವಿಜ್ಞಾನ ಹಾಗೂ ಆರೋಗ್ಯಕ್ಕೂ ಸಂಬಂಧಿಸಿದೆ ಎಂದು ಹೇಳಿದರು.
ಲೈಂಗಿಕ ಶಿಕ್ಷಣದ ಯಾವ ವಯಸ್ಸಿನ ಮಕ್ಕಳಿಗೆ ನೀಡಬೇಕು ಎನ್ನುವುದನ್ನು ವಿವರಿಸಿದರು. 13-14ನೇ ವಯಸ್ಸಿನ ಮಕ್ಕಳು ಪ್ರೌಢಾವಸ್ಥೆ ತಲುಪಿದ ಮಕ್ಕಳು, ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ತಿಳಿದುಕೊಳ್ಳಬೇಕಾದ ಸಮಯವಾಗಿದೆ. ಆಗ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ' ಎಂದು ಹೇಳಿದರು.
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೋ ಅಥವಾ ಬೇಡವೋ ಎನ್ನುವ ಚರ್ಚೆ ಈಗಲೂ ನಡೆಯುತ್ತಿದೆ. ಈ ಬಗ್ಗೆ ಅನೇಕರು ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ. ಇದೀಗ ರಾಕುಲ್ ಪ್ರೀತ್ ಸಿಂಗ್ ಕೂಡ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದ್ದಾರೆ. ಜೊತೆಗೆ ಯಾವ ವಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕೆಂದು ಸಹ ವಿವರಿಸಿದ್ದಾರೆ.