ಸೈಫ್‌ ಅಲಿ ಖಾನ್‌ಗೆ ಕರ್ನಾಟಕ-ತಮಿಳು ನಾಡು ಗಾಳಿ ಬೀಸಿತ್ತೆ?; ಮೀಸೆ ನೋಡಿ ನೆಟ್ಟಿಗರು ಶಾಕ್

First Published | Jan 19, 2023, 2:37 PM IST

 ವೈರಲ್ ಆಯ್ತು ಬಾಲಿವುಡ್ ನಟ ಸೈಫ್‌ ಅಲಿ ಖಾನ್ ಮಾಸ್ ಲುಕ್. ಮೀಸೆ ನೋಡಿ ಬಾಹುಬಲಿ ಎಂದು ಕಾಲೆಳೆದ ನೆಟ್ಟಿಗರು.... 

ಬಾಲಿವುಡ್‌ ಚಿತ್ರರಂಗದಲ್ಲಿ ರಾಜಮನೆತನಕ್ಕೆ ಸೇರಿದ ಸೈಫ್‌ ಅಲಿ ಖಾನ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

ನೀಲಿ ಬಣ್ಣದ ಟೀ-ಶರ್ಟ್‌ ಮತ್ತು ಬ್ಲ್ಯಾಕ್ ಟ್ರ್ಯಾಕ್‌ ಪ್ಯಾಂಟಲ್ಲಿ ತುಂಬಾನೇ ಸಿಂಪಲ್ ಅಗಿ ಕಾಣಿಸಿಕೊಂಡಿರುವ ಸೈಫ್. ಬ್ಲ್ಯಾಕ್ ಗ್ಲಾಸ್‌ ಒಂದು ಕೈಯಲ್ಲಿ ಹಳದಿ ಬಣ್ಣದ ಪ್ಯಾನಲ್‌ ಹೊಂದಿರುವ ಫೋನ್ ಹಿಡಿದುಕೊಂಡು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

Tap to resize

ಸೈಫ್‌ ಅಲಿ ಖಾನ್ ಮೀಸೆಗೆ ಮತ್ತು ಕೂದಲಿಗೆ ಕಪ್ಪು ಬಣ್ಣ ಹಾಕಿರುವುದಕ್ಕೆ ತುಂಬಾನೇ ಯಂಗ್ ಆಗಿ ಕಾಣಿಸುತ್ತಿದ್ದರೂ ಟ್ರೋಲ್ ಆಗಲು ಕಾರಣ ಏನೆಂದರೆ ಸೌತ್‌ ಇಂಡಿಯನ್ ಲುಕ್.

ಪ್ಯಾಪರಾಜಿಗಳು ಎದುರು ಬರುತ್ತಿದ್ದಂತೆ ಕಪ್ಪು ಕನ್ನಡಕ ತೆಗೆದುಕೊಂಡು ಬಾಯಿಯಲ್ಲಿ ಇಟ್ಟುಕೊಳ್ಳುವಂತೆ ಪೋಸ್ ಕೊಟ್ಟಿದ್ದಾರೆ. ಸೈಫ್‌ ಸೂಪರ್ ಫಿಟ್ ಅಗಿ ಕಾಣಿಸುತ್ತಿದ್ದಾರೆ.  

ಕರೀನಾ ಕಪೂರ್ ಚಿಕ್ಕ ಹುಡುಗಿ ಸೈಫ್‌ಗೆ ವಯಸ್ಸಾಗಿದೆ ಎನ್ನುತ್ತಿದ್ದವರೆಲ್ಲಾ ಈ ಫೋಟೋ ನೋಡಿ ಸೈಲೆಂಟ್ ಆಗಿದ್ದಾರೆ. ಸೈಫ್ ತುಂಬಾನೇ ವರ್ಕೌಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಸೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಅಥವಾ ಅವರ ಆಸ್ತಿ ಮೇಲೆ ಅವರ  ಮಕ್ಕಳು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ  ಎಂಬ ಅಂಶಕ್ಕಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ.

ಫ್ ತನಗಿಂತ 13 ವರ್ಷ ದೊಡ್ಡವರಾಗಿದ್ದ ಅಮೃತಾ ಸಿಂಗ್ ಅವರನ್ನು 21ನೇ ವಯಸ್ಸಿನಲ್ಲಿ ವಿವಾಹವಾದರು. ದಂಪತಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಅಮೃತಾ ಸಿಂಗ್‌ಗೆ ವಿಚ್ಛೇದನ ನೀಡಿದ ನಂತರ, ಸೈಫ್ ಅಲಿ ಖಾನ್ ತಮಗಿಂತ ಸುಮಾರು 11 ವರ್ಷ ಚಿಕ್ಕವರಾದ ಕರೀನಾ ಕಪೂರ್ ಅವರನ್ನು ವಿವಾಹವಾದರು. ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿವೆ. ಸೈಫ್ 4 ಮಕ್ಕಳ ತಂದೆ ಮತ್ತು ಅವರು ನಾಲ್ವರಿಗೂ ಸಮಾನ ಗಮನ ನೀಡುತ್ತಾರೆ.

Latest Videos

click me!