Rs 225 Crore Fraud Case: ಸುಕೇಶ್ ಚಂದ್ರಶೇಖರ್ ಪ್ರಕರಣ: ನೋರಾ ಫತೇಹಿಗೆ ಮತ್ತೆ ಸಮನ್ಸ್

Published : Sep 15, 2022, 05:27 PM IST

ಸುಕೇಶ್ ಚಂದ್ರಶೇಖರ್ (Sukesh Chandrasekhar) ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ದೆಹಲಿ ಪೊಲೀಸರ ಇಒಡಬ್ಲ್ಯೂ ವಿಭಾಗದಿಂದ ನೋರಾ (Nora Fatehi) ಫತೇಹಿಗೆ ಮತ್ತೊಮ್ಮೆ ಸಮನ್ಸ್ ನೀಡಲಾಗಿದೆ. ಈ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ 2 ರಂದು ನಟಿನನ್ನು ಕೊನೆಯ ಬಾರಿಗೆ ಪೊಲೀಸರು ವಿಚಾರಣೆ ನಡೆಸಿದ್ದರು.ಈ ನಡುವೆ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez)ಅವರನ್ನು ಪೊಲೀಸರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದರು.

PREV
110
Rs 225 Crore Fraud Case: ಸುಕೇಶ್ ಚಂದ್ರಶೇಖರ್ ಪ್ರಕರಣ: ನೋರಾ ಫತೇಹಿಗೆ ಮತ್ತೆ ಸಮನ್ಸ್

ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಅವರಿಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ( EOW) ಮತ್ತೊಮ್ಮೆ ಸಮನ್ಸ್ ನೀಡಿದೆ.
 

210

ವರದಿಗಳ ಪ್ರಕಾರ ನೋರಾ ಅವರನ್ನು ತನಿಖಾಧಿಕಾರಿಗಳು ಗುರುವಾರ ವಿಚಾರಣೆ ನಡೆಸಲಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 2 ರಂದು ಪೊಲೀಸರು ನೋರಾಳನ್ನು ವಿಚಾರಣೆಗೆ ಒಳಪಡಿಸಿದ್ದರು.

310

ಇದೇ ಕೇಸ್‌ಗೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಬುಧವಾರ ಎಂಟು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ ಒಂದು ದಿನದ ನಂತರ ನೋರಾ ಫತೇಹಿಯವರೆಗೆ ಸಮನ್ಸ್‌ ನೀಡಿರುವ ಸುದ್ದಿ ಬಂದಿದೆ. 

410

ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ EOW ನಿಂದ ಮೂರು ನೋಟಿಸ್‌ಗಳನ್ನು ನೀಡಲಾಯಿತು, ನಂತರ ಅವರು ಬುಧವಾರ ಬೆಳಿಗ್ಗೆ 11:20 ರ ಸುಮಾರಿಗೆ EOW ಕಚೇರಿಯನ್ನು ತಲುಪಿದರು.

 

510

ವರದಿಗಳ ಪ್ರಕಾರ, ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಪೊಲೀಸರು 100 ಕ್ಕೂ ಹೆಚ್ಚುಪ್ರಶ್ನೆಗಳೊಂದಿಗೆ ಡ್ರಿಲ್‌ ಮಾಡಿದ್ದಾರೆ. ಜಾಕ್ವೆಲಿನ್ ಪೊಲೀಸರಿಗೆ ಸ್ಪಷ್ಟ ಉತ್ತರ ನೀಡದ ಕಾರಣ, ಆಕೆಯನ್ನು ಮತ್ತೆ ವಿಚಾರಣೆಗೆ ಕರೆಯಲಾಗುವುದು ಎಂದು ಹೇಳಲಾಗಿದೆ.

610

ಸುಕೇಶ್ ಈವೆಂಟ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ತನಗೆ ತಿಳಿದಿತ್ತು ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ವಿಚಾರಣೆ ವೇಳೆ ಅಪರಾಧ ವಿಭಾಗದ ವಿಶೇಷ ಸಿಪಿ ರವೀಂದ್ರ ಯಾದವ್ ಮತ್ತು ಇಒಡಬ್ಲ್ಯು ಜಂಟಿ ಸಿಪಿ ಛಾಯಾ ಶರ್ಮಾ ಕೂಡ ಹಾಜರಿದ್ದರು.

710

ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸುಕೇಶ್ ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

810

ತಿಹಾರ್ ಜೈಲಿನಲ್ಲಿರುವ ಉದ್ಯಮಿಯೊಬ್ಬನ ಹೆಂಡತಿಗೆ ಆಕೆ ಪತಿಯನ್ನು ಜೈಲಿನಿಂದ ಹೊರಬರಲು ಸಹಾಯ ಮಾಡುವುದಾಗಿ ಹೇಳಿ ಉನ್ನತ ಸರ್ಕಾರಿ ಅಧಿಕಾರಿಯಂತೆ ಸುಕೇಶ್ ಚಂದ್ರಶೇಖರ್  ನಟಿಸುತ್ತಿದ್ದರು ಮತ್ತು ಆಕೆಯಿಂದ ಸುಲಗೆ ಮಾಡಿದ ಹಣವನ್ನು ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿಗೆ ದುಬಾರಿ ಉಡುಗೊರೆ ನೀಡಲು   ಸುಲಿಗೆ ಮಾಡಿದ   ಬಳಸಲಾಗಿದೆ.

910

ಈ ನಡುವೆ ಕೆಲಸದ ಮುಂಭಾಗದಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಕೊನೆಯದಾಗಿ ನಟ ಅಕ್ಷಯ್ ಕುಮಾರ್ ಎದುರು ಬಚ್ಚನ್ ಪಾಂಡೆಯಲ್ಲಿ ಕಾಣಿಸಿಕೊಂಡರು. ಮುಂಬರುವ ಚಿತ್ರ 'ರಾಮ್ ಸೇತು' ನಲ್ಲಿ ಮತ್ತೊಮ್ಮೆ ಅಕ್ಷಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. 

1010

ನೋರಾ ಫತೇಹಿ ಅವರು ಪ್ರಸ್ತುತ ಡ್ಯಾನ್ಸ್ ರಿಯಾಲಿಟಿ ಟಿವಿ ಶೋ 'ಝಲಕ್ ದಿಖ್ಲಾ ಜಾ' ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ಮತ್ತು ಕರಣ್ ಜೋಹರ್  ಈ ಕಾರ್ಯಕ್ರಮದ ಇತರ ಇಬ್ಬರು ತೀರ್ಪುಗಾರರಾಗಿದ್ದಾರೆ.

Read more Photos on
click me!

Recommended Stories