Engineers day 2022: ಸೌತ್‌ ಸಿನಿಮಾದ ಹಾಟೆಸ್ಟ್ ಎಂಜಿನಿಯರ್‌ಗಳು ಇವರು

First Published Sep 15, 2022, 4:50 PM IST

ಇಂಜಿನಿಯರ್ ದಿನವನ್ನು (Engineer day 2022) ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಇಂಜಿನಿಯರ್‌ಗಳ ಮಹತ್ವ ಮತ್ತು ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಂದಹಾಗೆ, ಭಾರತದಲ್ಲಿ ಅನೇಕ ಪ್ರಸಿದ್ಧ ಎಂಜಿನಿಯರ್‌ಗಳು ತಮ್ಮ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾರಂಗದ ಹಲವು ಸ್ಟಾರ್ಸ್‌ ಸಹ  ಇಂಜಿನಿಯರಿಂಗ್ ಓದಿದ್ದಾರೆ.
 

ದಕ್ಷಿಣದ ಸೂಪರ್‌ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರು ಆಟೋಮೊಬೈಲ್ ಇಂಜಿನಿಯರ್ ಆಗಿದ್ದು, ಅವರು ಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದಿಂದ   ಎಂಎಸ್ ಪದವಿ ಮಾಡಿದ್ದಾರೆ.

ರೆಹನಾ ಹೈ ತೇರೆ ದಿಲ್ ಮೇ ಖ್ಯಾತಿಯ ನಟ ಆರ್ ಮಾಧವನ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ (Degree) ಪಡೆದಿದ್ದಾರೆ. ಆ ನಂತರ ಅವರು ದಕ್ಷಿಣ ಚಿತ್ರರಂಗದ ಜೊತೆಗೆ ಬಾಲಿವುಡ್‌ನ ಯಶಸ್ವಿ ನಟರಾದರು.
 

ಬಾಲಿವುಡ್‌ನ ಮನಮೋಹಕ ನಟಿ ತಾಪ್ಸಿ ಪನ್ನು (Tapsee Pannu) ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಆಗಿಯೂ ಕೆಲಸ ಮಾಡಿದ್ದಾರೆ. ಆದರೆ ಇದಾದ ನಂತರ ಸೌತ್ ಮತ್ತು ಬಾಲಿವುಡ್  ನಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದಾರೆ.

ಸುಂದರ ನಟಿ ಕೃತಿ ಸನೊನ್ ಅವರು ಜೇಪೀ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಅಂಡ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.
 

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಡಿಸಿಇ ಪ್ರವೇಶದಲ್ಲಿ (ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್) 7 ನೇ ರ್ಯಾಂಕ್ ಗಳಿಸಿದ ನಂತರ ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದರು.
 

ನಟ ವಿಕ್ಕಿ ಕೌಶಲ್ 2009 ರಲ್ಲಿ ಮುಂಬೈನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನವನ್ನು ಅಧ್ಯಯನ ಮಾಡಿದರು. ಆದಾಗ್ಯೂ, ಅಧ್ಯಯನದ ಜೊತೆಗೆ, ಅವರು ಮಾಡೆಲಿಂಗ್ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ನಂತರ ಯಶಸ್ವಿ ನಟರಾದರು, ವಿಕ್ಕಿ ಹಾಟೆಸ್ಟ್ ಮತ್ತು ಕೂಲ್‌ ಎಂಜಿನಿಯರ್.

ಕೂಲ್ ಮತ್ತು ಹಾಟ್ ಯಂಗ್‌ ನಟ ಕಾರ್ತಿಕ್ ಆರ್ಯನ್ 2011 ರಲ್ಲಿ ಬಿಡುಗಡೆಯಾದ ಪ್ಯಾರ್ ಕಾ ಪಂಚ್ನಾಮಾ ಸಮಯದಲ್ಲಿ ಬಯೋಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಓದುತ್ತಿದ್ದರು. ಆದರೆ ಮುಂಬೈನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ಕಾರ್ತಿಕ್ ನಟನಾಗುವ ಕನಸನ್ನು ನನಸು ಮಾಡಿಕೊಳ್ಳಲು ಆಕ್ಟಿಂಗ್ ಕೋರ್ಸ್ ಮಾಡಿ ಇಂದು ಯಶಸ್ವಿ ನಟ ಎನಿಸಿಕೊಂಡಿದ್ದಾರೆ.

ಕುಂಗ್ ಫೂ ಯೋಗ, ದಬಾಂಗ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ನಟ ಸೋನು ಸೂದ್, ನಾಗಪುರದ ಯಶವಂತರಾವ್ ಚವಾಣ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

click me!