ಬಾಡಿಕಾನ್ ಡ್ರೆಸ್ಸಲ್ಲಿ ಸುಹಾನಾ ಖಾನ್; ಶಾರುಖ್‌ ಮಗಳ ಪರ್ಫೇಕ್ಟ್‌ ಫಿಗರ್‌ಗೆ ಫ್ಯಾನ್ಸ್‌ ಫಿದಾ

First Published | Oct 11, 2022, 3:53 PM IST

ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಸಹ ಕಡಿಮೆ ಜನಪ್ರಿಯತೆಯನ್ನು ಹೊಂದಿಲ್ಲ. ಇವರಲ್ಲಿ ಶಾರುಖ್ ಖಾನ್ (Shahrukh Khan) ಅವರ ಮಕ್ಕಳು ತುಂಬಾ ಫೇಮಸ್‌. ಶಾರುಖ್ ಅವರ ಮಗಳು ಸುಹಾನಾ ಖಾನ್ (Suhana Khan) ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸುಹಾನಾರ  ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ತಿಳಿ ನೀಲಿ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು  ಅವರ ಸ್ಟೈಲ್‌ಗೆ ಫ್ಯಾನ್ಸ್‌ ಫುಲ್‌  ಫಿದಾ ಆಗಿದ್ದಾರೆ.

ವೈರಲ್‌ ಆಗಿರುವ ಫೋಟೋಗಳಲ್ಲಿ  ಸುಹಾನಾ ಖಾನ್ ಅವರು ಬಾಡಿಕಾನ್ ಡ್ರೆಸ್‌ನೊಂದಿಗೆ ಹೊಸ ಮೇಕಪ್ ಮಾಡಿದ್ದಾರೆ. ಅವಳ ಕೂದಲು ತೆರೆದಿದೆ ಮತ್ತು ಸುಹಾನಾರ ಪರ್ಫೇಕ್ಟ್‌ ಫಿಗರ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.
 

ಸುಹಾನಾ ಖಾನ್ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ.  ಕೆಲವೊಮ್ಮೆ ಅವರು ಸ್ನೇಹಿತರೊಂದಿಗೆ ಪಾರ್ಟಿಯನ್ನು ಎಂಜಾಯ್‌ ಮಾಡುತ್ತಾರೆ ಮತ್ತು ಕೆಲವೊಮ್ಮೆ ಅವರು ಡಿನ್ನರ್ ಡೇಟ್‌ನಲ್ಲಿ ಕಂಡುಬರುತ್ತಾರೆ.

Tap to resize

ಬಾಲ್ಯದಿಂದಲೂ ನಟಿಯಾಗಬೇಕೆಂದು ಬಯಸಿರುವ ಸುಹಾನಾ ಖಾನ್ ಇದಕ್ಕಾಗಿ ವಿದೇಶದಲ್ಲಿಯೂ ಓದಿದ್ದಾರೆ. ಸುಹಾನಾ ಕೆಲವು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
 

ಪ್ರಸ್ತುತ ಸುಹಾನಾ ನಿರ್ದೇಶಕ ಜೋಯಾ ಅಖ್ತರ್ ಅವರ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಿಲ್ಲ. OTT ನಲ್ಲಿ ಬಿಡುಗಡೆಯಾಗುತ್ತದೆ. 

ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿರುವ ಸುಹಾನಾ ಖಾನ್‌ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಸುಹಾನಾ ಖಾನ್ ಕೆಲವು ಬೋಲ್ಡ್ ಫೋಟೋಶೂಟ್‌ಗಳನ್ನು ಸಹ ಮಾಡಿದ್ದಾರೆ.

Latest Videos

click me!