ಮದುವೆಯಾಗಿ 4 ತಿಂಗಳಿಗೆ ಪೋಷಕರಾದ ನಯನತಾರಾ-ವಿಘ್ನೇಶ್ ವಿವಾದ; ತಮಿಳು ನಾಡು ಸರ್ಕಾರದಿಂದ ತನಿಖೆ

Published : Oct 11, 2022, 03:49 PM IST

ತಮಿಳು ಚಿತ್ರರಂಗದ ಪವರ್ ಕಪಲ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮದುವೆಯಾದ ಕೇವಲ 4 ತಿಂಗಳಲ್ಲೇ ಇಬ್ಬರೂ ಪೋಷಕರಾದರು ಎಂಬುದು ಅಚ್ಚರಿಯ ಸಂಗತಿ. ಇತ್ತೀಚೆಗಷ್ಟೇ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಇಬ್ಬರೂ ಕೂಡ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ತಮಿಳು ನಾಡು ಸರ್ಕಾರ ಇವರ  ಮೇಲೆ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ. ಕಾರಣವೇನು ಗೊತ್ತಾ?  

PREV
17
ಮದುವೆಯಾಗಿ 4 ತಿಂಗಳಿಗೆ ಪೋಷಕರಾದ ನಯನತಾರಾ-ವಿಘ್ನೇಶ್ ವಿವಾದ; ತಮಿಳು ನಾಡು ಸರ್ಕಾರದಿಂದ ತನಿಖೆ

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮಿಳುನಾಡು ಆರೋಗ್ಯ ಸಚಿವ ಎಂ.ಎ.ಸುಬ್ರಮಣ್ಯಂ ಅವರಿಗೆ ಈ ಕುರಿತು ಪ್ರಶ್ನೆಗಳನ್ನು ಕೇಳಿದಾಗ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.

27

'ಬಾಡಿಗೆ ತಾಯ್ತನವೇ ದೊಡ್ಡ ಚರ್ಚೆಯ ವಿಷಯವಾಗಿದೆ. ಆದರೆ, ವ್ಯಕ್ತಿಗಳು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಕುಟುಂಬದ ಅನುಮೋದನೆಯೊಂದಿಗೆ 36 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಬಾಡಿಗೆ ತಾಯ್ತನದಲ್ಲಿ ತೊಡಗಿಸಿಕೊಳ್ಳಲು ಕಾನೂನು  ಅನುಮತಿಸುತ್ತದೆ. ಈ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡುವುದಾಗಿಯೂ' ಅವರು ಘೋಷಿಸಿದ್ದಾರೆ. 

37

ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆಯಾದರೂ, ಬಾಡಿಗೆ ತಾಯಿಯು ಒಮ್ಮೆಯಾದರೂ ಮದುವೆಯಾಗಬೇಕು ಮತ್ತು ತನ್ನದೇ ಆದ ಮಗುವನ್ನು ಹೊಂದಿರಬೇಕು ಎಂಬುದು ರೂಢಿಯಾಗಿದೆ.

 

47

ಇದಕ್ಕೂ ಮೊದಲು, ಅಕ್ಟೋಬರ್ 9 ರಂದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ತಾವು ಅವಳಿಗಳ ಪೋಷಕರಾಗಿದ್ದೇವೆ ಎಂದು ಹೇಳಿದರು. ಇದನ್ನು ಪ್ರಕಟಿಸಿದ ಅವರು, ತಮ್ಮ ಅವಳಿ ಮಕ್ಕಳ ಪಾದಗಳ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

57

'ನಯನತಾರಾ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಾವು ಅವಳಿ ಮಕ್ಕಳನ್ನು ಹೊಂದಿದ್ದೇವೆ. ನಾವು ಧನ್ಯರು. ನಮ್ಮ ಎಲ್ಲಾ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದಗಳು ನಮ್ಮ ಮಗುವಿನ ರೂಪದಲ್ಲಿ ಬಂದಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು. ನಮ್ಮ ಉಯಿರೋ ಮತ್ತು ಉಗಾಮ್ಗೆ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ 

67

ನಯನಾತಾರಾ ಮತ್ತು ವಿಘ್ನೇಶ್ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಒಟ್ಟಿಗೆ ಕೆಲಸ ಮಾಡುವಾಗ ದಂಪತಿಗಳು ಪ್ರೀತಿಸುತ್ತಿದ್ದರು ಮತ್ತು ಇಬ್ಬರೂ 6 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದರ ನಂತರ, ಇಬ್ಬರೂ ಮಾರ್ಚ್ 25, 2021 ರಂದು ನಿಶ್ಚಿತಾರ್ಥ ಮಾಡಿಕೊಂಡರು.

77

ನಯನಾ ತಾರಾ ಮತ್ತು ವಿಘ್ನೇಶ್ 10 ಜೂನ್ 2022 ರಂದು ಇಬ್ಬರೂ ವಿವಾಹವಾದರು. ಈಗ ಮದುವೆಯಾಗಿ 4 ತಿಂಗಳ ನಂತರ ಈ ಜೋಡಿ ತಾವು ತಂದೆ ತಾಯಿಯಾಗಿರುವ ಸುದ್ದಿಯನ್ನು ನೀಡಿದ್ದಾರೆ.
 

Read more Photos on
click me!

Recommended Stories