ರೋಹಿತ್ ಶೆಟ್ಟಿ, ಭನ್ಸಾಲಿಯೂ ಅಲ್ಲ, ಇವರೇ ಸೋಲಿಲ್ಲದ ನಿರ್ದೇಶಕ; ಬಾಕ್ಸ್‌ ಆಫಿಸ್‌ನ 1000 ಕೋಟಿಯ ಸರದಾರ

Published : Feb 20, 2025, 05:40 PM ISTUpdated : Feb 20, 2025, 05:41 PM IST

Successful Young Director: ಭಾರತೀಯ ಚಿತ್ರರಂಗದಲ್ಲಿ ಇವರು ಯಶಸ್ವಿ ನಿರ್ದೇಶಕ. ಅವರು ಇದುವರೆಗೆ ಸೋಲನ್ನೇ ಕಂಡಿಲ್ಲ. ತಮಿಳು ಚಿತ್ರರಂಗದಲ್ಲಿ ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಶಾರುಖ್ ಖಾನ್ ಜೊತೆ ಸಿನಿಮಾ ಮಾಡಿ 1,000 ಕೋಟಿ ಕಲೆಕ್ಷನ್ ಮಾಡಿದ್ದಾರೆ.

PREV
17
ರೋಹಿತ್ ಶೆಟ್ಟಿ, ಭನ್ಸಾಲಿಯೂ ಅಲ್ಲ, ಇವರೇ ಸೋಲಿಲ್ಲದ ನಿರ್ದೇಶಕ; ಬಾಕ್ಸ್‌ ಆಫಿಸ್‌ನ 1000 ಕೋಟಿಯ ಸರದಾರ

ಭಾರತದ ಸಿನಿಮಾ ಅಂಗಳಲ್ಲಿ ಸಾವಿರಾರು ಯಶಸ್ವಿ ನಿರ್ದೇಶಕರಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಬಾಕ್ಸ್‌ ಅಫಿಸ್‌ನಿಂದ  ನೂರಾರು ಕೋಟಿ ಹಣ ತುಂಬಿಸಿಕೊಂಡಿರುತ್ತಾರೆ. ಆದರೂ ಇವರು ವೃತ್ತಿಜೀವನದಲ್ಲಿ ಹಲವು ಸಿನಿಮಾಗಳು ಸೋತಿರುತ್ತವೆ.  

27

ಸ್ಟಾರ್ ಡೈರೆಕ್ಟರ್ ಆಗಿರುವ ಸಂಜಯ್ ಲೀಲಾ ಭನ್ಸಾಲಿ, ರೋಹಿತ್ ಶೆಟ್ಟಿ, ಎಸ್ ನಾರಾಯಣ್, ಮಣಿರತ್ನಂ, ಕರಣ್ ಜೋಹರ್‌ ಸೇರಿದಂತೆ ಹಲವರು ಕೆಲವು ಸಿನಿಮಾಗಳು ಸೋಲಿನ ಪಟ್ಟಿಗೆ ಸೇರಿಕೊಂಡಿವೆ. ಆದರೆ ಇಂದು ಹೇಳುತ್ತಿರುವ ಯಂಗ್ ಆಂಡ್ ಎನರ್ಜಿಟಿಕ್ ನಿರ್ದೇಶಕ ಸೋಲನ್ನೇ ಕಂಡಿಲ್ಲ. 

37

ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾ ಮಾಡಬೇಕು ಅನ್ನೋದು ಬಹುತೇಕ ನಿರ್ದೇಶಕರ ಕನಸು. ಸೌಥ್ ಸಿನಿಮಾ ಇಂಡಸ್ಟ್ರಿಯ ನಿರ್ದೇಶಕರು ಇಂದು ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಸಿನಿಮಾಗಳನ್ನು ಯಶಸ್ವಿಯಾಗುತ್ತಿದ್ದಾರೆ. ಇಂದು ನಾವು ಹೇಳುತ್ತಿರುವ ನಿರ್ದೇಶಕ ಮೂರು ಸಿನಿಮಾಗಳನ್ನು ಮಾಡಿ, ನಂತರ ಬಾಲಿವುಡ್ ನಟ ಶಾರೂಖ್‌ ಖಾನ್‌ಗೂ ಆಕ್ಷನ್ ಕಟ್ ಹೇಳಿ  ಯಶಸ್ವಿಯಾಗಿದ್ದಾರೆ. 

47

ನಾವು ಹೇಳುತ್ತಿರುವ ಯಶಸ್ವಿ ನಿರ್ದೇಶಕನ ಹೆಸರು ಅಟ್ಲಿ ಕುಮಾರ್.  ಹೌದು, ನಾನು ಕಾಪಿ ಮಾಡುತ್ತೇನೆ. ಆದ್ರೆ ಸಿನಿಮಾವನ್ನು ಹಿಟ್ ಮಾಡೋದು ನನ್ನ ಸಾಮರ್ಥ್ಯ ಎಂದು ಅಟ್ಲಿ ಹೇಳುತ್ತಾರೆ. ತಮಿಳು ಚಿತ್ರರಂಗ ಸ್ಟಾರ್ ಡೈರೆಕ್ಟರ್ ಪಟ್ಟಿಯಲ್ಲಿಅಟ್ಲಿ ಅವರ ಹೆಸರು ಸಹ ಸೇರುತ್ತದೆ. 

57
Atlee Kumar

ನಿರ್ದೇಶಕ ಶಂಕರ್ ಅವರ ಸಹಾಯಕರಾಗಿ ಕೆಲಸ ಆರಂಭಿಸುವ ಮೂಲಕ ಅಟ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಿರ್ದೇಶಕ ಶಂಕರ್ ಅವರನ್ನು ಗುರು ಎಂದು ಅಟ್ಲಿ ಕರೆಯುತ್ತಾರೆ. ಯಶಸ್ವಿ ನಿರ್ದೇಶಕರಾಗಿರುವ ಸಾಧನೆ ಹಿಂದೆ ಅಟ್ಲಿಯವರ ಕಠಿಣ ಪರಿಶ್ರಮವಿದೆ. ಅಟ್ಲಿ ಅಸಲಿ ಹೆಸರು ಅರುಣ್ ಕುಮಾರ್. ತಮ್ಮ 25ನೇ ವಯಸ್ಸಿನಲ್ಲಿಯೇ ಸಿನಿಮಾ ಅಂಗಳಕ್ಕೆ ಕಾಲಿಟ್ಟಿದ್ದಾರೆ.

67
Director Atlee Kumar

ನಿರ್ದೇಶಕ ಶಂಕರ್ ಅವರ ಎಂಧಿರನ್ (ರೋಬೋಟ್) ಸಿನಿಮಾದವರೆಗೂ ಅಟ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಇದಾದ ಬಳಿಕ ಅಟ್ಲಿ ನಿರ್ದೇಶನ ರಾಜಾ-ರಾಣಿ ಸಿನಿಮಾ ಸೂಪರ್ ಹಿಟ್ ಆಯ್ತು. ಈ ಚಿತ್ರ 'ಮೌನರಾಗ' ಸಿನಿಮಾದ ನಕಲು ಎಂಬ ಮಾತುಗಳು ಕೇಳಿ ಬಂದರೂ ಸಿನಿಮಾ ಯಶಸ್ಸು ಕಾಣಿಸಿತು. ಇದಾದ ವಿಜಯ್ ಜೊತೆ ತೇರಿ ಸಿನಿಮಾ ಮಾಡಿದರು. ಈ ಸಿನಿಮಾ ಸಹ 100 ಕೋಟಿಯ ಕ್ಲಬ್ ಸೇರಿತು. ಇದಾದ ಬಳಿಕ ಬಂದ ಬಿಗಿಲ್ ಸಹ 300 ಕೋಟಿ ಕಲೆಕ್ಷನ್ ಮಾಡಿತು.

77

ಮೂರು ಹಿಟ್ ಸಿನಿಮಾ ನೀಡಿದ ಬಳಿಕ ಅಟ್ಲಿ, ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಜೊತೆ ಚಿತ್ರ ಮಾಡುವ ಮೂಲಕ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದರು. ಶಾರೂಖ್ ಖಾನ್, ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ ಸೇರಿದಂತೆ ದೊಡ್ಡ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡಿ ಸಕ್ಸಸ್ ಆದರು. ಈ ಚಿತ್ರ 1,000 ಕೋಟಿ ಕಲೆಕ್ಷನ್ ಮಾಡಿತು. 

Read more Photos on
click me!

Recommended Stories