ಈ ಸಂದರ್ಭದಲ್ಲಿ ತಮ್ಮ ಹೆಂಡತಿ ಸುರೇಖಾ ಬಗ್ಗೆ ಹೊಗಳಿಕೆಯ ಸುರಿಮಳೆ ಗೈದಿದ್ದಾರೆ. ಸುರೇಖಾ ನನ್ನ ಜೀವನಕ್ಕೆ ಬಂದಿದ್ದಕ್ಕೆ ನಾನು ಯಾವಾಗಲೂ ಅದೃಷ್ಟವಂತ ಅಂತ ಫೀಲ್ ಮಾಡ್ತೀನಿ. ಅವಳು ನನ್ನ ಬಲ, ನನ್ನನ್ನು ನಡೆಸುವ ಶಕ್ತಿ. ಅವಳ ಮಾತುಗಳು ಜೀವನದಲ್ಲಿ ಮುಂದೆ ಹೋಗಲು ನನಗೆ ಪ್ರೋತ್ಸಾಹ ನೀಡುತ್ತವೆ. ಥ್ಯಾಂಕ್ಯೂ ಸೋಲ್ ಮೇಟ್ ಅಂತ ಚಿರಂಜೀವಿ ಪೋಸ್ಟ್ ಮಾಡಿದ್ದಾರೆ. ಇನ್ನು ಇಂಡಸ್ಟ್ರಿಯಲ್ಲಿ ಚಿರಂಜೀವಿ, ನಾಗಾರ್ಜುನ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ.