ಎಲ್ಲರನ್ನೂ ನಕ್ಕು ನಗಿಸುವ ಕಪಿಲ್‌ ಶರ್ಮಾರನ್ನೂ ಬಿಟ್ಟಿಲ್ಲ ಖಿನ್ನತೆ, ಸಹಕರಿಸಿದ್ದು ಶಾರುಖ್!

First Published | Mar 14, 2023, 4:56 PM IST

ಹಾಸ್ಯನಟ ಕಪಿಲ್ ಶರ್ಮಾ ಪ್ರಕಾರ ಅವರು ಖಿನ್ನತೆಗೆ ಒಳಗಾಗಿದ್ದರು  ಮತ್ತು ಆ ಸಮಯದಲ್ಲಿ ಶಾರುಖ್ ಖಾನ್ ಅವರಿಗೆ ಸಹಾಯ ಮಾಡಿದರು. 41 ವರ್ಷದ ಕಪಿಲ್ ಇತ್ತೀಚೆಗೆ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅವರು ತಮ್ಮ ಜೀವನದ ಕೆಟ್ಟ ಹಂತದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

'ಆಪ್ ಕಿ ಅದಾಲತ್' ನಲ್ಲಿ 'ಅನಿಲ್ ಕಪೂರ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಅವರಂತಹ ತಾರೆಯರು 'ದಿ ಕಪಿಲ್ ಶರ್ಮಾ ಶೋ' ಸೆಟ್‌ನಲ್ಲಿ ಕಾಯುತ್ತಿದ್ದರು. ಆದರೆ ನೀವು ಸೆಟ್‌ನಲ್ಲಿ ಚಿತ್ರೀಕರಣಕ್ಕೆ ಹೋಗಲಿಲ್ಲ ಎಂದು ಪತ್ರಕರ್ತ ರಜತ್ ಶರ್ಮಾ ಕಪಿಲ್ ಅವರನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಅವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರಣ ಚಿತ್ರೀಕರಣವನ್ನು ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ. ಕಪಿಲ್ ಪ್ರಕಾರ, 'ನಾನು ಯಾರನ್ನೂ ಕಾಯುವಂತೆ ಮಾಡಲಿಲ್ಲ, ಆದರೆ ಅನೇಕ ಚಿತ್ರೀಕರಣಗಳು ರದ್ದುಗೊಂಡವು' ಎಂದಿದ್ದಾರೆ

Tap to resize

ಅವರ ಆಪ್ತರು ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಮತ್ತು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ಒತ್ತಡವನ್ನು ನಿಭಾಯಿಸಲು, ಅವರು ಮದ್ಯಪಾನದ ದಾಸರಾದರ ಎಂಬ ವಿಷಯವನ್ನು ಬಹರಿಂಗಪಡಿಸಿದ್ದಾರೆ. 

ಈ ಸಂಭಾಷಣೆಯಲ್ಲಿ ಕಪಿಲ್ ತಮ್ಮ ಖಿನ್ನತೆ ಮತ್ತು ಆತಂಕದ ಬಗ್ಗೆ ಮಾತನಾಡಿದ್ದಾರೆ. ಒಳಗೊಳಗೆ ಒದ್ದಾಡುತ್ತಿದ್ದರಿಂದ ಯಾರನ್ನೂ ನಗಿಸಲು ಸಾಧ್ಯವಾಗುತ್ತಿಲ್ಲ. ಜನರನ್ನು ನಗಿಸುವುದೇ ನನ್ನ ಕೆಲಸವಾಗಿತ್ತು, ಒಳಗೆ ಖುಷಿ ಇಲ್ಲದಿರುವಾಗ ಯಾರನ್ನಾದರೂ ನಗಿಸುವುದು ಹೇಗೆ ಎನ್ನುತ್ತಾರೆ ಕಪಿಲ್.

ಶಾರುಖ್ ಖಾನ್ ಅವರ ಶೂಟಿಂಗ್ ರದ್ದತಿ ಬಗ್ಗೆ ಕಪಿಲ್ ಮಾತನಾಡಿದ್ದಾರೆ. ಅವರ ಪ್ರಕಾರ, ಚಿತ್ರೀಕರಣವನ್ನು ರದ್ದುಗೊಳಿಸಲು ಅವರು ತುಂಬಾ ದುಃಖಿತರಾಗಿದ್ದರು. ಆದರೆ ಶಾರುಖ್ ಸ್ವತಃ ಅವರನ್ನು ಒಂದು ಗಂಟೆ ಭೇಟಿಯಾದಾಗ, ಅವರು ನೋವಿಗೊಂದು ಮದ್ದು ಸಿಕ್ತಂತಾಯಿತು. ಈ ಸಮಯದಲ್ಲಿ ಶಾರುಖ್ ಕಪಿಲ್ ಅವರನ್ನು ಪ್ರೋತ್ಸಾಹಿಸಿ,  ಕಪಿ ಅವರನ್ನು ಜನರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಅರ್ಥ ಮಾಡಿಸುವಲ್ಲ ಸಫಲರಾದರು.
 

'ನೀವು ಯಾಕೆ ತುಂಬಾ ಟೆನ್ಷನ್ ತೆಗೆದುಕೊಳ್ಳುತ್ತಿದ್ದೀರಿ? ಜನರು ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ" ಎಂದು  ಶಾರುಖ್‌ ನನಗೆ ಹೇಳಿದರು ಎಂದು ಕಪಿಲ್‌ ಶರ್ಮ ಹೇಳಿಕೊಂಡಿದ್ದಾರೆ.

'ಇದು ಆತಂಕದ ಅವಧಿ, ನಾನು ತುಂಬಾ ಕುಡಿಯಲು ಪ್ರಾರಂಭಿಸಿದೆ. ಇದು ನನಗೆ ತಪ್ಪಿತಸ್ಥ ಭಾವನೆ ಕಾಡುವಂತೆ ಮಾಡಿತ್ತು. ಶಾರುಖ್ ಜೊತೆಗಿನ ನನ್ನ ಶೂಟಿಂಗ್ ರದ್ದಾಯಿತು. ಒಂದು ದಿನ ಅವರು ಫಿಲ್ಮ್‌ಸಿಟಿಯಲ್ಲಿ ನಾನು ಶೂಟಿಂಗ್ ಮಾಡುತ್ತಿದ್ದೆ. ಆಗ ನನಗವರು ಭೇಟಿ ಆಗಲು ಹೇಳಿದರು ಎಂದು ಮತ್ತೊಂದು ಸಂಭಾಷಣೆಯಲ್ಲಿಯೂ ಕಪಿಲ್ ಶಾರುಖ್ ಭೇಟಿಯ ಬಗ್ಗೆ ವಿವರವಾಗಿ ಹೇಳಿ ಕೊಂಡಿದ್ದು, ತಮ್ಮ ಜೀವನದಲ್ಲಿ ಬಾಲಿವುಡ್ ಬಾದ್ ಶಾ ಎಂಷ್ಟು ಪ್ರಭಾವ ಬೀರಿದ್ದಾರೆಂಬುದನ್ನು ವಿವರಿಸಿದ್ದಾರೆ. 

ಶಾರುಖ್ ಖಾನ್ ಸಾಕಷ್ಟು ಸ್ಟಾರ್‌ಡಮ್‌ಗಳನ್ನು ಕಂಡಿದ್ದಾರೆ, ಹಾಗಾಗಿ ನಾನು ಎಲ್ಲಿಂದ ಬಂದಿದ್ದೇನೆ ಎಂದು ಅವರು ಅರ್ಥಮಾಡಿಕೊಂಡರು. ಅವರು ನನ್ನನ್ನು ತಮ್ಮ ಕಾರಿನಲ್ಲಿ ಕೂರಿಸಿ  ಒಂದು ಗಂಟೆ ಮಾತನಾಡಿದರು ಎಂಬ ವಿಷಯವನ್ನು  ಸುದ್ದಿ ವಾಹಿನಿಯ 'ಸೀಧಿ ಬಾತ್' ಕಾರ್ಯಕ್ರಮವೊಂದರಲ್ಲಿ ಕಪಿಲ್ ಬಿಚ್ಚಿಟ್ಟಿದ್ದಾರೆ. 

ನೀವು ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದೀರಾ?'  ಎಂದು ನನ್ನನ್ನು ಕೇಳಿದರು. 'ನಾನು ನನ್ನ ಜೀವನದಲ್ಲಿ ಎಂದಿಗೂ ಡ್ರಗ್ಸ್ ಮುಟ್ಟಲಿಲ್ಲ. ಆದರೆ, ಖಿನ್ನತೆ ಕಾಡುತ್ತಿದೆ ಎಂದು ವಿವರಿಸಿದೆ. ಶಾರುಖ್ ಕೆಲವು ಒಳ್ಳೆಯ ವಿಷಯಗಳನ್ನು ಹೇಳಿದರು. ಖಿನ್ನತೆಯ ಅನುಭವ ನನಗೆ ಮೊದಲ ಬಾರಿಗೆ ಆಗಿತ್ತು.  ಹಾಗಾಗಿ ನಾನು ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಕಪಿಲ್‌ ಶಾರುಖ್‌ ಜೊತೆ ಮುಕ್ತ ಮನಸ್ಸಿನಿಂದ ಮಾತನಾಡಿದ್ದರಂತೆ. 
 

ಕಪಿಲ್ 'ದಿ ಕಪಿಲ್ ಶರ್ಮಾ ಶೋ' ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಇದಲ್ಲದೇ ಅವರ 'ಜ್ವಿಗಾಟೊ' ಚಿತ್ರ ಕೂಡ ಮಾರ್ಚ್ 17 ರಂದು ಬಿಡುಗಡೆಯಾಗುತ್ತಿದೆ. 'ಕಿಸ್ ಕಿಸ್ಕೊ ​​ಪ್ಯಾರ್ ಕರೂನ್' ಮತ್ತು 'ಫಿರಂಗಿ' ನಂತರ ನಾಯಕನಾಗಿ ಕಪಿಲ್ ಅವರ ಮೂರನೇ ಹಿಂದಿ ಚಿತ್ರ ಇದಾಗಿದೆ. ಈ ಚಿತ್ರವನ್ನು ನಂದಿತಾ ದಾಸ್ ನಿರ್ದೇಶಿಸಿದ್ದು, ಕಪಿಲ್ ನಾಯಕಿ ಶಹಾನಾ ಗೋಸ್ವಾಮಿ ನಟಿಸಿದ್ದಾರೆ.

Latest Videos

click me!