ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈ ನಟನೀಗ ಬಾಲಿವುಡ್ ಬಾದ್ ಶಾ!

ಇಂದು ಶಾರುಖ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್, ಕೋಟ್ಯಂತರ ರೂಪಾಯಿಗಳ ಒಡೆಯ, ಆದರೆ ಅವರು ಬಾಲ್ಯದಲ್ಲಿ ಎಷ್ಟೊಂದು ಕಷ್ಟ ಅನುಭವಿಸಿದ್ದರು ಗೊತ್ತಾ? 
 

Struggle faced by Sharukh Khan in childhood pav

ಶಾರುಖ್ ಖಾನ್ ಇಂದು ಸಾಕಷ್ಟು ಸಂಪತ್ತನ್ನು ಹೊಂದಿದ್ದಾರೆ. ಅವರು ಮುಂಬೈನ ಅತ್ಯಂತ ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಮನೆ ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಒಂದೊಂದು ಸಿನಿಮಾಕ್ಕಾಗಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shahrukh Khan) ಕೋಟಿ ಕೋಟಿ ಪಡೆಯುತ್ತಾರೆ ಅನ್ನೋದು ಎಷ್ಟು ನಿಜವೋ, ನಟನ ಬಾಲ್ಯ ತುಂಬಾನೆ ಕಷ್ಟಕರವಾಗಿತ್ತು ಅನ್ನೋದು ಅಷ್ಟೇ ನಿಜ, 
 

ಹೌದು ಶಾರುಖ್ ಖಾನ್ ಬಾಲ್ಯದಲ್ಲಿ ಯಾವುದೇ ಶ್ರೀಮಂತಿಕೆಯನ್ನು ನೋಡಿಲ್ಲ. ಅವರು ಬಡತನದಲ್ಲಿ ಬೆಳೆದವರು. ಶಾರುಖ್ ಖಾನ್ ಅನೇಕ ಸಂದರ್ಶನಗಳಲ್ಲಿ ತಮ್ಮ ಪೋಷಕರು ಯಾವಾಗಲೂ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ (hard work) ಬದುಕಲು ಕಲಿಸಿದರು ಎಂದು ಹೇಳಿದ್ದಾರೆ. 
 


ಶಾರುಖ್ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು (freedom fighter) , ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದರು. ಇತ್ತೀಚೆಗೆ, ಅನುಪಮ್ ಖೇರ್ ಅವರ ಚಾಟ್ ಶೋನಲ್ಲಿ, ನಟ ತಮ್ಮ ಬಾಲ್ಯದ ಅನೇಕ ಕಥೆಗಳನ್ನು ಹಂಚಿಕೊಂಡರು. 

ಬಾಲ್ಯದಲ್ಲಿ ತಾವು ಪಡುತ್ತಿದ್ದ ಕಷ್ಟಗಳ ಬಗ್ಗೆ ಮಾತನಾಡಿದ ಶಾರುಖ್ ಬಾಲ್ಯದಲ್ಲಿ ಮನೆಯಲ್ಲಿದ್ದ ನಾಲ್ಕು ಜನರಿಗೆ ಸರಿಯಾದ ಪ್ರಮಾಣದಲ್ಲಿ ದಾಲ್ ಸಿಗಲು ಅನುಕೂಲವಾಗುವಂತೆ ಆಹಾರಕ್ಕೆ ಹೆಚ್ಚುವರಿ ನೀರು ಸೇರಿಸಿ ತಿನ್ನುತ್ತಿದ್ದ ಮನೆಯಿಂದ ನಾನು ಬಂದಿದ್ದೇನೆ.  ನಾನು ಇವತ್ತಿನ ಈ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅಂದು ಕನಸು ಕೂಡ ಕಂಡಿರಲಿಲ್ಲ ಎಂದು ಹೇಳಿದ್ದಾರೆ. .
 

ಶಾರುಖ್ ಖಾನ್ ತಮ್ಮ ಬಾಲ್ಯದಲ್ಲಿ (childhood of Shahrukh) ಅನೇಕ ಕಷ್ಟಗಳನ್ನು ಎದುರಿಸಿದ್ದರು, ಆದರೆ ಎಂದಿಗೂ ಬಿಟ್ಟುಕೊಡಲಿಲ್ಲ ಎಂದು ಹೇಳುತ್ತಾರೆ. ಅವರ ತಾಯಿ ಲತೀಫ್ ಫಾತಿಮಾ ಬಲಿಷ್ಠ ಮಹಿಳೆಯಾಗಿದ್ದು, ತಮ್ಮ ಪುತ್ರನಿಗೆ ಸ್ವಾವಲಂಬಿಯಾಗಿರಲು ಕಲಿಸಿದರು. 
 

ಶಾರುಖ್ ಬಾಲಕನಾಗಿದ್ದಾಗ, ಮನೆಯಲ್ಲಿ ಟಿವಿ ಸಹ ಇರಲಿಲ್ಲವಂತೆ,  ಸ್ವಂತ ಟಿವಿ ಇಲ್ಲದ ಕಾರಣ ಇತರರ ಮನೆಗಳಿಗೆ ಟಿವಿ ನೋಡಲು ಹೋಗುತ್ತಿದ್ದರಂತೆ.  ಸಿನಿಮಾಗೆ ಬರೋದಕ್ಕೂ ಮುನ್ನ ಶಾರುಖ್ ರಂಗಭೂಮಿಯಲ್ಲೂ ಕೆಲಸ ಮಾಡಿದರು ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಅನೇಕ ನಾಟಕಗಳಲ್ಲಿ ಪಾತ್ರಗಳನ್ನು ಸಹ ಮಾಡಿದ್ದರು ಶಾರುಖ್. 

1991 ರಲ್ಲಿ ತಾಯಿ ನಿಧನರಾದಾಗ, ಶಾರುಖ್ ಮುಂಬೈಗೆ ಹೋಗಲು ನಿರ್ಧರಿಸಿದರು. ಅವರು "ಫೌಜಿ" ಮತ್ತು "ಸರ್ಕಸ್" ಸೇರಿದಂತೆ ಟಿವಿ ಧಾರಾವಾಹಿಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1992 ರಲ್ಲಿ "ದೀವಾನಾ" ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ (bollywood entry) ಶಾರುಖ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

Latest Videos

vuukle one pixel image
click me!