ಮನೋಜ್ ಭಾರತಿರಾಜಾ, ತಮಿಳಿನಲ್ಲಿ ನಟರಾಗಿ ತಾಜ್ ಮಹಲ್, ಅಲ್ಲೀ ಅರ್ಜುನ, ವರುಷಮೆಲ್ಲಾಂ ವಸಂತಂನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿಕ್ಕಂದಿನಿಂದಲೂ ತಂದೆಯಂತೆ ನಿರ್ದೇಶಕರಾಗಬೇಕೆಂಬ ಆಸೆ ಇತ್ತು. ಮಣಿರತ್ನಂ ನಿರ್ದೇಶಿಸಿದ `ಬಾಂಬೆ` ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಆ ನಂತರ ನಿರ್ದೇಶಕ ಶಂಕರ್ ಅವರ ಬಳಿ `ರೋಬೋ` ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು.