ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆಯಲ್ಲಿ ಜಾನ್ವಿ ಕಪೂರ್ ಲವೆಂಡರ್ ಬಣ್ಣದ ಕಾಂಜೀವರಂ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸ್ಟೈಲಿಂಗ್, ಜ್ಯುವೆಲ್ಲರಿ ವಿಶೇಷವಾಗಿ ಮೆಹೆಂದಿ ಎಲ್ಲರ ಗಮನ ಸೆಳೆಯಿತು.
Janhvi Kapoor Stuns in Lavender Kanjeevaram Saree at Anshula Kapoor's Reception
ಇತ್ತೀಚೆಗೆ ನಡೆದ ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆಯಲ್ಲಿ ಬಾಲಿವುಡ್ ಸ್ಟಾರ್ ನಟಿಯರು ಮಿಂಚಿದ್ರು. ಆದರೆ, ಎಲ್ಲರ ಕಣ್ಣು ಜಾನ್ವಿ ಕಪೂರ್ ಮೇಲಿತ್ತು. ಅವರು ಉಟ್ಟಿದ್ದ ಲವೆಂಡರ್ ರೇಷ್ಮೆ ಸೀರೆ ಮತ್ತು ಅವರ ಮಾಡರ್ನ್ ಸ್ಟೈಲ್, ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಮಿಶ್ರಣವಾಗಿತ್ತು. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.
25
A Royal Kanjeevaram Saree Inspired by Tradition
ಜಾನ್ವಿ ಧರಿಸಿದ್ದು ಮನೀಶ್ ಮಲ್ಹೋತ್ರಾ ವಿನ್ಯಾಸದ ಲವೆಂಡರ್ ಮತ್ತು ಗೋಲ್ಡ್ ಬಣ್ಣದ ಕಾಂಜೀವರಂ ರೇಷ್ಮೆ ಸೀರೆ. ಇದರ ಅಗಲವಾದ ಕಸೂತಿ ಬಾರ್ಡರ್ ಸೀರೆಗೆ ರಾಯಲ್ ಲುಕ್ ನೀಡಿತ್ತು. ದಕ್ಷಿಣ ಭಾರತದ ಸೀರೆಯ ಸೊಬಗನ್ನು ಈ ಡಿಸೈನ್‌ನಲ್ಲಿ ಸುಂದರಗೊಳಿಸಿತ್ತು. ರೇಷ್ಮೆ ಸೀರೆಗಳನ್ನು ಇಷ್ಟಪಡುತ್ತಿದ್ದ ತಮ್ಮ ತಾಯಿ, ದಿವಂಗತ ಶ್ರೀದೇವಿ ಅವರಿಗೆ ಗೌರವ ಸಲ್ಲಿಸಲು ಜಾನ್ವಿ ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.
35
Backless Blouse and Statement Jewellery Elevated the Look
ಈ ಸಾಂಪ್ರದಾಯಿಕ ರೇಷ್ಮೆ ಸೀರೆಗೆ ಆಧುನಿಕ ಸ್ಪರ್ಶ ನೀಡಲು, ಜಾನ್ವಿ ಸ್ಟ್ರಾಪ್‌ಲೆಸ್ ಬ್ಯಾಕ್‌ಲೆಸ್ ಬ್ಲೌಸ್ ಧರಿಸಿದ್ದರು. ಇದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ತಮ್ಮ ಲುಕ್ ಪರ್ಫೆಕ್ಟ್ ಆಗಿ ಕಾಣುವಂತೆ ಮಾಡಲು ಜಾನ್ವಿ ಸೀರೆಯೊಂದಿಗೆ ವಜ್ರದ ಆಭರಣಗಳನ್ನು ಧರಿಸಿದ್ದರು. ಇದರಲ್ಲಿ ಹೆವಿ ಚೋಕರ್ ನೆಕ್ಲೇಸ್, ಅದಕ್ಕೆ ಹೊಂದುವ ಕಿವಿಯೋಲೆ, ಡಾಬು, ತೋಳ್ಬಂದಿ, ಬಳೆ, ಉಂಗುರಗಳು ಸೇರಿದ್ದವು. ಅವರ ಮೇಕಪ್ ಮತ್ತು ಹೇರ್‌ಸ್ಟೈಲ್ ಕೂಡಾ ಈ ರಾಯಲ್ ಲುಕ್‌ಗೆ ಇನ್ನಷ್ಟು ಮೆರಗು ನೀಡಿತ್ತು.
55
Mehendi with Shikhar Pahariya's Name Became the Talking Point
ಆದರೆ ಅರತಕ್ಷತೆ ಕಾರ್ಯಕ್ರಮದಲ್ಲಿ ಜಾನ್ವಿ ಧರಿಸಿದ್ದ ಸೀರೆ, ಆಭರಣಗಳಿಗಿಂತ ಹೆಚ್ಚು ಗಮನ ಸೆಳೆದಿದ್ದು ಅವರ ಮೆಹೆಂದಿ! ಹೌದು ಸೂಕ್ಷ್ಮವಾಗಿ ಗಮನಿಸಿದಾಗ, ಜಾನ್ವಿ ಕೈಯಲ್ಲಿ 'ಶಿಖು' ಎಂದು ಬರೆದಿರುವುದು ಕಾಣಿಸಿತು. ಇದು ಶಿಖರ್ ಪಹಾರಿಯಾ ಅವರ ಸರ್‌ನೇಮ್ ಆಗಿದೆ. ಈ ಮೂಲಕ ಇವರಿಬ್ಬರ ಸಂಬಂಧದ ಬಗ್ಗೆ ನಡೆಯುತ್ತಿದ್ದ ಗುಸುಗುಸು ಸುದ್ದಿಗಳಿಗೆ ಮೆಹಂದಿ ಹೆಸರಿನ ಬಳಿಕ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಜಾನ್ವಿ ಇತ್ತೀಚೆಗೆ ರಾಮ್ ಚರಣ್ ಜೊತೆ 'ಪೆದ್ದಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ಒಂದು ಹಾರರ್ ಸಿನಿಮಾ ಜೊತೆಗೆ ಮತ್ತೊಂದು ದಕ್ಷಿಣ ಭಾರತದ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.