Niti Taylor: ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!

Published : Jul 08, 2026, 02:50 PM IST

ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..

PREV
16

ಗ್ಲಾಮರ್ ಲೋಕದ ಕರಾಳ ಮುಖ: ನಟಿ ನೀತಿ ಟೇಲರ್ ಅನುಭವಿಸಿದ ಆ ನರಕಯಾತನೆಯ ಕಥೆ!

ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. 

ಸದಾ ನಗುನಗುತ್ತಿರುವಂತೆ ಕಾಣುವ ಖ್ಯಾತ ನಟಿ ನೀತಿ ಟೇಲರ್ (Neeti Taylor) ಅವರ ಬದುಕಿನಲ್ಲೂ ಅಂತಹದ್ದೇ ಒಂದು ಕರಾಳ ಘಟನೆ ಇದೆ. ಅದು ಅವರ ;ನೆನಪಿನ ಪುಟದಿಂದ ಯಾವತ್ತೂ ಮರೆಯಾಗುವುದಿಲ್ಲ; ಎಂದಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಅವರು ಬಿಚ್ಚಿಟ್ಟ ಸತ್ಯಗಳು ಕೇಳುಗರ ಮೈ ಜುಂ ಎನಿಸುವಂತಿದೆ.

26

ಆ ಒಂದು ರಾತ್ರಿ ಮತ್ತು ಆ ಸೈಕೋ ಪ್ರಿಯಕರ!

'ಅಲಾಯನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಮಿನಿ ಮಾಥುರ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದ ನೀತಿ ಟೇಲರ್, 'ನಾನು ಹಿಂದೆ ಪ್ರೀತಿಸಿದ ವ್ಯಕ್ತಿ ಎಂತಹ ಕ್ರೂರಿಯಾಗಿದ್ದ' ಎಂಬುದನ್ನು ವಿವರಿಸಿದ್ದಾರೆ. 

'ಪ್ರೀತಿಯ ಹೆಸರಿನಲ್ಲಿ ಆತ ನನಗೆ ನೀಡಿದ್ದು ಕೇವಲ ನೋವು ಮತ್ತು ಅವಮಾನ. ಆತ ಕೇವಲ ಲವರ್ ಆಗಿರಲಿಲ್ಲ, ಬದಲಾಗಿ ಒಬ್ಬ 'ಸೈಕೋ'ನಂತೆ ವರ್ತಿಸುತ್ತಿದ್ದ. ಸಣ್ಣ ವಿಷಯಗಳಿಗೂ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ' ಎಂದಿದ್ದಾರೆ.

36

ಬರ್ತ್‌ಡೇ ಗಿಫ್ಟ್ ಆಗಿ ಸಿಕ್ಕಿದ್ದು ಸಿಗರೇಟ್ ಬರೆ!

'ಜನ್ಮದಿನ ಎನ್ನುವುದು ಯಾವುದೇ ಕುಟುಂಬದ ಸಂಬಂಧಗಳಲ್ಲಿ ಸಂಭ್ರಮದ ಕ್ಷಣ. ಆದರೆ ನನ್ನ ಪಾಲಿಗೆ ನನ್ನ ಪ್ರಿಯಕರನ ಹುಟ್ಟುಹಬ್ಬ ಜೀವನದ ಅತ್ಯಂತ ಭಯಾನಕ ದಿನವಾಗಿತ್ತು. ಅಂದು ಸಂಭ್ರಮಿಸುವ ಬದಲಿಗೆ ಆತ ಅಟ್ಟಹಾಸ ಮೆರೆದಿದ್ದ. 

ಮಾತು ಮಾತಿನಲ್ಲೇ ಜಗಳ ಶುರುವಾಗಿ, ಆ ಕ್ರೂರಿ ನನ್ನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಜೊತೆಗೆ, ಆತನ ಕೈಯಲ್ಲಿದ್ದ ಉರಿಯುವ ಸಿಗರೇಟ್‌ನಿಂದ ನನ್ನ ತೊಡೆಯ ಒಳಭಾಗವನ್ನು ಸುಟ್ಟಿದ್ದ..

46

ಆ ನೋವು ಇಂದಿಗೂ ನನ್ನನ್ನು ಕಾಡುತ್ತದೆ. ಆ ಸಿಗರೇಟ್ ಬರೆಯ ಗುರುತು ಇಂದಿಗೂ ನನ್ನ ದೇಹದ ಮೇಲಿದೆ. ಅದನ್ನು ನೋಡಿದಾಗಲೆಲ್ಲಾ ನಾನು ಅನುಭವಿಸಿದ ನರಕ ಕಣ್ಣೆದುರು ಬರುತ್ತದೆ" ಎಂದು ನೀತಿ ಹೇಳುವಾಗ ಅವರ ಕಣ್ಣಾಲಿಗಳು ತೇವವಾಗಿದ್ದವು. ಹಳೆಯ ನೆನಪು ಅವರನ್ನು ಯಾವತ್ತೂ ಕಾಡುವಂತೆ ಇದ್ದು, ಅದು ಜೀವನದ ಕೊನೆಯೊಂದಿಗೆ ಕೊನೆಯಾಗಬೇಕಷ್ಟೇ ಎಂದಿದ್ದಾರೆ ನಟಿ.

56

ಧೈರ್ಯದ ನಿರ್ಧಾರ-ಹೊಸ ಬದುಕು:

ಆ ಘಟನೆ ಬಳಿಕ 'ಹೆಣ್ಣು ಅಬಲೆಯಲ್ಲ' ಎನ್ನುವುದನ್ನು ನೀತಿ ತಮ್ಮ ಹೊಸ ನಿರ್ಧಾರದ ಮೂಲಕ ಸಾಬೀತುಪಡಿಸಿದರು. ಅಂದು ಆ ಸಿಗರೇಟ್ ಸುಟ್ಟ ಘಟನೆ ನಡೆದ ಮರುಕ್ಷಣವೇ ಅವರು ಆ ಸಂಬಂಧಕ್ಕೆ ಎಳ್ಳುನೀರು ಬಿಟ್ಟರು. 

"ಇನ್ನು ಸಾಕು" ಎಂದು ಅಲ್ಲಿಂದ ಹೊರಬಂದ ನೀತಿ, ಮತ್ತೆ ಎಂದೂ ಆತನ ಮುಖ ನೋಡಲಿಲ್ಲ. ತನ್ನ ಆತ್ಮಗೌರವಕ್ಕಾಗಿ ಆಕೆ ತೆಗೆದುಕೊಂಡ ಆ ಕಠಿಣ ನಿರ್ಧಾರವೇ ಇಂದು ಆಕೆಯನ್ನು ಸುಭದ್ರವಾಗಿರಿಸಿದೆ. ಜೀವನದಲ್ಲಿ ಹೊಸ ಬೆಳಕು, ಹೊಸ ಗೌರವ ಸಿಗುವಂತೆ ಮಾಡಿದೆ.

66

ಸೇನಾ ಅಧಿಕಾರಿಯ ಕೈಹಿಡಿದ ನೀತಿ:

ಆ ಕಹಿ ನೆನಪುಗಳ ನಡುವೆಯೇ, ಬದುಕಿನಲ್ಲಿ ಹೊಸ ಭರವಸೆ ಕಂಡುಕೊಂಡಿದ್ದಾರೆ ನೀತಿ ಟೇಲರ್. 2020ರಲ್ಲಿ ಭಾರತೀಯ ಸೇನೆಯ ಧೀಮಂತ ಅಧಿಕಾರಿ ಪರೀಕ್ಷಿತ್ ಬಾವಾ ಅವರನ್ನು ವಿವಾಹವಾದರು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸರಳವಾಗಿ ನಡೆದ ಈ ಮದುವೆ ಅವರಿಗೆ ಹೊಸ ಜೀವನ ನೀಡಿತು. ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನೀತಿ ಟೇಲರ್, ಈಗ ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.

ಸದ್ಯ ನೀತಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಗಾಳಿಸುದ್ದಿಗಳು ಹರಿದಾಡುತ್ತಿದ್ದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರು ಧೈರ್ಯವಾಗಿ ಮುಂದೆ ಸಾಗುತ್ತಿದ್ದಾರೆ. ತನ್ನ ಹಳೆಯ ನೋವನ್ನು ಹಂಚಿಕೊಳ್ಳುವ ಮೂಲಕ, ಶೋಷಣೆ ಅನುಭವಿಸುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನು ನೀತಿ ಮಾಡಿದ್ದಾರೆ. ನೀತಿ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬೆಳ್ಳಿತೆರೆಯ ಸುಂದರಿಯರ ಜೀವನ ನಮಗೆ ಹೂವಿನ ಹಾಸಿಗೆಯಂತೆ ಕಂಡರೂ, ಅದರ ಕೆಳಗೆ ಮುಳ್ಳುಗಳೂ ಇರುತ್ತವೆ ಎಂಬುದಕ್ಕೆ ನೀತಿ ಟೇಲರ್ ಅವರ ಈ ಕಹಿಘಟನೆಯೇ ಸಾಕ್ಷಿ. ನೋವಿನಿಂದ ನರಳಿ ಮುಖದಲ್ಲಿ ನಗು ಮೂಡುವವರೆಗೆ ನಟಿ ನೀತಿ ಸಾಗಿ ಬಂದ ಹಾದಿ ನಿಜಕ್ಕೂ ಸ್ಫೂರ್ತಿದಾಯಕ ಎನ್ನಲೇಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories