ಆಲಿಯಾ ಭಟ್‌ ಅವರ ಐಷಾರಾಮಿ ವಾಕ್-ಇನ್ ಕ್ಲೋಸೆಟ್; ಎಷ್ಷು ಶೂಗಳಿವೆ ನೋಡಿ

Published : Feb 22, 2023, 06:10 PM IST

ಮುಂಬೈನಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ಆಲಿಯಾ ಭಟ್ (Alia Bhatt) ತನ್ನ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಲಿಯಾರ ಐಷಾರಾಮಿ ವಾಕ್-ಇನ್ ಕ್ಲೋಸೆಟ್ ಬೂಟುಗಳು ಮತ್ತು ಡ್ರೆಸ್ಸಿಂಗ್ ರೂಮ್ ಸಖತ್‌ ಗಮನ ಸೆಳೆದಿದೆ.    

PREV
110
ಆಲಿಯಾ ಭಟ್‌ ಅವರ ಐಷಾರಾಮಿ ವಾಕ್-ಇನ್ ಕ್ಲೋಸೆಟ್; ಎಷ್ಷು ಶೂಗಳಿವೆ ನೋಡಿ

ಸೋಮವಾರ ಮುಂಬೈನಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳಲ್ಲಿ ಆಲಿಯಾ ಭಟ್ ಗಂಗೂಬಾಯಿ ಕಥಿವಾಡಿಗಾಗಿ ಪ್ರಶಸ್ತಿಯನ್ನು ಪಡೆದರೆ, ಬ್ರಹ್ಮಾಸ್ತ್ರ ಭಾಗ 1 ಗಾಗಿ ರಣಬೀರ್ ಕಪೂರ್ ಅವರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

210

ಬಿಳಿ ಸೀರೆ ಧರಿಸಿ ಪುಟ್ಟ ಹ್ಯಾಂಡ್‌ ಫ್ಯಾನ್‌ವೊಂದನ್ನು ಹಿಡಿದು ಪೋಸ್‌ ನೀಡಿರುವ ಎರಡು ಫೋಟೋಗಳನ್ನು ಆಲಿಯಾ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಆಲಿಯಾ  'Meet my friend - my fan' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

310

ಕ್ಲಾಸಿಕ್ ಬಿಳಿ ಮತ್ತು ಕಂದು ಬಣ್ಣದ ಟೋನ್‌ಗಳಲ್ಲಿ ಅಲಂಕರಿಸಲ್ಪಟ್ಟ ಅವರ ಡ್ರೆಸ್ಸಿಂಗ್ ರೂಮ್‌ ಒಳಗೆ ಆಲಿಯಾ ಪೋಸ್ ನೀಡಿದ್ದಾರೆ. ಫೋಟೋ ಜೊತೆ ಆಲಿಯಾರ ಗ್ರ್ಯಾಂಡ್ ವಾಕ್-ಇನ್ ಕ್ಲೋಸೆಟ್‌ನಲ್ಲಿ ಒಂದು ನೋಟ ಸಹ ಕಂಡುಬರುತ್ತದೆ. 

410

ಫೋಟೋಗಳ ಹಿನ್ನೆಲೆಯಲ್ಲಿ ಶೂ-ಡಿಸ್ಪ್ಲೇ ಕ್ಯಾಬಿನೆಟ್ ಗಮನ ಸೆಳೆಯಿತು. ಜೊತೆಗೆ ಸುತ್ತ ಲೈಟ್‌ಗಳಿರುವ  ದೊಡ್ಡ ಕನ್ನಡಿ ಸಹ ಫೋಟೊದಲ್ಲಿ ಕಾಣಬಹುದು

510

ಆಲಿಯಾ, ರಣಬೀರ್ ಮತ್ತು ಅವರ ಮಗಳು ರಾಹಾ ಕಪೂರ್ ಮುಂಬೈನ ವಾಸ್ತು ಹೆಸರಿನ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.  ಈ ದಂಪತಿ ಮನೆ ವಾಸ್ತುವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

610

ಇವರ  ಮನೆ ಭಾವನಾತ್ಮಕ ಸ್ಪರ್ಶದಿಂದ ಕೂಡಿದೆ. ರಾಜ್ ಕಪೂರ್ ಅವರ ಕಪ್ಪು-ಬಿಳುಪು ಫೋಟೋ ಆಲಿಯಾ ಮತ್ತು ರಣಬೀರ್ ಅವರ ಮುಂಬೈ ಮನೆಯ ಮುಖ್ಯಾಂಶಗಳಲ್ಲಿ ಒಂದಾಗಿದೆ. 

710

ರಣಬೀರ್ ಅವರ ನೆಚ್ಚಿನ ಸಂಖ್ಯೆ '8' ಇರುವ ಜೆರ್ಸಿಯನ್ನು ಫೇರ್ಮ್‌ ಮಾಡಿಸಿ ಗೋಡೆಯೊಂದರ ಮೇಲೆ ನೇತುಹಾಕಲಾಗಿದೆ. ಇಷ್ಟು.ವರ್ಷಗಳಲ್ಲಿ ದಂಪತಿ ಗಳಿಸಿದ ಪ್ರಶಸ್ತಿಗನ್ನು ಸಹ ಕಪಾಟಿನಲ್ಲಿ ಒಟ್ಟಿಗೆ ಪ್ರದರ್ಶಿಸಲಾಗುತ್ತದೆ. 

810

ಆಲಿಯಾ ಭಟ್‌ ಮತ್ತು ರಣಬೀರ್ ದಂಪತಿ ಮನೆ ಒಳಗಿನ ಫೋಟೋಗಳನ್ನು ಕಳೆದ ವರ್ಷ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದವು.

910

ಆಲಿಯಾ ಮತ್ತು ರಣಬೀರ್ ಏಪ್ರಿಲ್ 2022 ರಲ್ಲಿ ವಾಸ್ತುದಲ್ಲಿ ವಿವಾಹವಾದರು. ದಂಪತಿ ಬಾಲಿವುಡ್‌ನ ನಿಕಟ ಸ್ನೇಹಿತರು ಮತ್ತು ನೀತು ಕಪೂರ್ ಮತ್ತು ಸೋನಿ ರಜ್ದಾನ್ ಸೇರಿದಂತೆ ಅಪ್ತ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು. 

1010

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ದಂಪತಿ ತಮ್ಮ ಮೊದಲ ಮಗಳು ರಾಹಾಳ ಜನನವನ್ನು ನವೆಂಬರ್ 6, 2022 ರಂದು ಸೋಶಿಯಲ್‌ ಮೀಡಿಯಾ ಮೂಲಕ ಫ್ಯಾನ್ಸ್‌ಗಳೊಂದಿಗೆ ಹಂಚಿಕೊಂಡರು.

Read more Photos on
click me!

Recommended Stories