ಶಾರುಖ್‌ , ದೀಪಿಕಾ, ರಣವೀರ್‌, ಕತ್ರೀನಾ , ರಣಬೀರ್‌ ಪಾರ್ಟಿಯಲ್ಲಿ ಪಾರ್ಫಾಮ್‌ ಮಾಡಲು ಎಷ್ಷು ಜಾರ್ಜ್‌ ಮಾಡ್ತಾರೆ?

Published : Feb 22, 2023, 05:27 PM IST

ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರಂತಹ ಪ್ರಮುಖ ಬಾಲಿವುಡ್ ನಟರು ಖಾಸಗಿ ಪಾರ್ಟಿಗಳಲ್ಲಿ ಪ್ರದರ್ಶನ ನೀಡುತ್ತಾರೆ. ಈ ಬಾಲಿವುಡ್ ಸ್ಟಾರ್ಸ್‌ ಅನ್ನು  ನಿಮ್ಮ ಪಾರ್ಟಿಯಲ್ಲಿ ಪ್ರದರ್ಶನಕ್ಕೆ ಆಹ್ವಾನಿಸಲು ಬಯಸುತ್ತೀರಾ. ಹಾಗಾದರೆ ಅವರು ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದನ್ನು ಪರಿಶೀಲಿಸಿ.  

PREV
18
ಶಾರುಖ್‌ , ದೀಪಿಕಾ, ರಣವೀರ್‌, ಕತ್ರೀನಾ , ರಣಬೀರ್‌  ಪಾರ್ಟಿಯಲ್ಲಿ ಪಾರ್ಫಾಮ್‌ ಮಾಡಲು ಎಷ್ಷು ಜಾರ್ಜ್‌ ಮಾಡ್ತಾರೆ?

ದೀಪಿಕಾ ಪಡುಕೋಣೆ:ಪಠಾಣ್‌ನ ಅದ್ಭುತ ಯಶಸ್ಸಿನೊಂದಿಗೆ ಇನ್ನೂ ಹೆಚ್ಚು ಫೆಮಸ್‌ ಆಗಿರುವ ದೀಪಿಕಾ ಪಡುಕೋಣೆ ಈ ಸೀಸನ್‌ನಲ್ಲಿ ಖಾಸಗಿ ಪಾರ್ಟಿಗಳಿಗೆ ಹೆಚ್ಚು ಬೇಡಿಕೆಯಲ್ಲಿದ್ದಾರೆ. ದೀಪಿಕಾ ಚೊಚ್ಚಲ ಸಿನಿಮಾ  ಕನ್ನಡದ ಚಿತ್ರ ಐಶ್ವರ್ಯಾ ಎಂಬುದು ಎಲ್ಲರಿಗೂ ತಿಳಿದಿಲ್ಲ. ಆದರೆ  ಓಂ ಶಾಂತಿ ಓಂ ಮೂಲಕ ಹಿಂದಿ ಚಿತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಆಕೆ ಹಿಂದಿರುಗಿ ನೋಡಲೇ ಇಲ್ಲ. ಖಾಸಗಿ ಪಾರ್ಟಿಗಳಿಗೆ ದೀಪಿಕಾ  1 ಕೋಟಿ ಶುಲ್ಕ ವಿಧಿಸುತ್ತಾರೆ.

 
 

28

ರಣವೀರ್ ಸಿಂಗ್: ರಣವೀರ್‌ ಸಿಂಗ್‌ ತಮ್ಮ ಎನರ್ಜಿಯ ಕಾರಣದಿಂದಾಗಿ  ಖಾಸಗಿ ಪಾರ್ಟಿಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಪ್ರತಿ ಪಾರ್ಟಿಯಲ್ಲಿ ಪರ್ಫಾಮ್‌ ಮಾಡಲು ಇವರು 1 ಕೋಟಿ ರೂ ವಸೂಲಿ ಮಾಡುತ್ತಾರೆ

38

ಶಾರುಖ್ ಖಾನ್ : ಕಿಂಗ್ ಖಾನ್ ಅವರು ಪ್ರತಿ ಪ್ರದರ್ಶನಕ್ಕೆ ಅವರು ₹ 3 ಕೋಟಿ ಚಾರ್ಜ್ ಮಾಡುತ್ತಾರೆ. ಆದಾಗ್ಯೂ, ಈ ಮೊತ್ತ ಪಠಾಣ್ ಸಿನಿಮಾಗೂ ಮುಂಚೆಯದು. ಈಗ ಪಠಾಣ್‌ ಸಿನಿಮಾ 1,000 ಕೋಟಿ ಕಲೆಕ್ಷನ್‌ ದಾಟಿದ ನಂತರ ಬಹುಶಃ ಶಾರುಖ್‌ ಅವರು ಹೆಚ್ಚು ಶುಲ್ಕ ವಿಧಿಸಲು ಪ್ರಾರಂಭಿಸುತ್ತಾರೆ ಎಂದು ಊಹಿಸಲಾಗುತ್ತಿದೆ.

48

ಹೃತಿಕ್ ರೋಷನ್: ಹೃತಿಕ್‌ ಅವರ ಡ್ಯಾನ್ಸ್‌ ಮೂವ್ಸ್‌ ಬಗ್ಗೆ ಹೇಳುವುದೇ ಬೇಡ. ಚಿತ್ರ ರಂಗದ ಬೆಸ್ಟ್‌ ಡ್ಯಾನ್ಸರ್‌ ಹೃತಿಕ್‌ ರೋಷನ್‌ ಅವರು ಖಾಸಗಿ ಪಾರ್ಟಿಗಳಿಗೆ  2.5 ಕೋಟಿ ಚಾರ್ಜ್ ಮಾಡುತ್ತಾರೆ.

58

ರಣಬೀರ್ ಕಪೂರ್: ರಣಬೀರ್ ಕಪೂರ್ ಅವರ ಚಿತ್ರಗಳು ಕೆಲಸ ಮಾಡಿದರೂ ಇಲ್ಲದಿದ್ದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರ ಕೊನೆಯ ಚಿತ್ರ, ಬ್ರಹ್ಮಾಸ್ತ್ರ: ಭಾಗ ಒಂದು - ಶಿವ, ಬ್ಲಾಕ್ಬಸ್ಟರ್ ಆಗಿತ್ತು. ಖಾಸಗಿ ಪಾರ್ಟಿಗಳಲ್ಲಿ ಪ್ರದರ್ಶನ ನೀಡಲು ಆರ್‌ಕೆ 2 ಕೋಟಿ ರೂ ಪಡೆಯುತ್ತಾರೆ.

68

ಕತ್ರಿನಾ ಕೈಫ್: ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಟಾಪ್‌ ಸ್ಟಾರ್‌ ಆಗಿದ್ದಾರೆ ಕತ್ರಿನಾ ಕೈಫ್. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಕತ್ರಿನಾ  ಖಾಸಗಿ ಪಾರ್ಟಿಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ತಾರೆ. ಕತ್ರಿನಾ ಒಂದು ಪ್ರದರ್ಶನಕ್ಕೆ  3.5 ಕೋಟಿ ರೂ ಡಿಮ್ಯಾಂಡ್‌ ಮಾಡುತ್ತಾರೆ.
 

78

ಅಕ್ಷಯ್ ಕುಮಾರ್: ಖಾಸಗಿ ಪಾರ್ಟಿಗಳಲ್ಲಿ ಪ್ರದರ್ಶನವನ್ನು ತಾರೆಯರಲ್ಲಿ ಜನಪ್ರಿಯಗೊಳಿಸಿದ ಮೊದಲ ಬಾಲಿವುಡ್ ತಾರೆಗಳಲ್ಲಿ ಒಬ್ಬರು ಅಕ್ಷಯ್ ಕುಮಾರ್.   ಖಾಸಗಿ ಕಾರ್ಯಕ್ರಮಗಳಿಗೆ ಪೇಯ್ಡ್‌ ಗೆಸ್ಟ್‌ ಆಗಿ  ನಿಯಮಿತವಾಗಿ ಹಾಜರಾಗಲು ಹೆಸರುವಾಸಿಯಾಗಿರುವ ಅಕ್ಷಯ್‌ ಕುಮಾರ್‌ 2.5 ಕೋಟಿ ವಸೂಲಿ ಮಾಡುತ್ತಾರೆ

88

ಸಲ್ಮಾನ್ ಖಾನ್: ಬಾಲಿವುಡ್‌ನ ಭಾಯಿಜಾನ್ ಅವರ ಫ್ಯಾನ್‌ ಫಾಲೋವರ್ಸ್‌ ಬಗ್ಗೆ ಹೇಳುವುದೇ ಬೇಡ. ಇವರು ಚಿತ್ರದ ರಂಗದ  ಶಾಶ್ವತ ತಾರೆ. ಸಲ್ಮಾನ್‌ ಅವರು ಪಾರ್ಟಿಗೆ 2 ಕೋಟಿ ರೂ ಶುಲ್ಕ ವಿಧಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories