ಕರೀನಾ ಕಪೂರ್-ಸೈಫ್ ಅಲಿ ಖಾನ್ 2ನೇ ಮಗ ಜೇಹ್‌ ಬರ್ತ್‌ಡೇ ಪೋಟೋಗಳು

Published : Feb 22, 2023, 05:03 PM IST

ಸ್ಟಾರ್ ಜೋಡಿ ಕರೀನಾ ಕಪೂರ್ ಖಾನ್ (Kareena Kapoor)  ಮತ್ತು ಸೈಫ್ ಅಲಿ ಖಾನ್ (Saif Ali Khan) ತಮ್ಮ ಮಗ ಜೆಹ್ (Jeh Ali Khan) ಅವರ ಎರಡನೇ ಹುಟ್ಟುಹಬ್ಬಕ್ಕೆ ಪೂಲ್ ಪಾರ್ಟಿಯನ್ನು ಆಯೋಜಿಸಿಸಲಾಗಿತ್ತು. ದಂಪತಿಗಳ ನಿವಾಸದಲ್ಲಿ ಬರ್ತ್‌ಡೇ ಬ್ಯಾಷ್ ನಡೆಯಿತು, ಬಿ-ಟೌನ್ ಸೆಲೆಬ್ರೆಟಿಗಳು  ಮತ್ತು ಅವರ ಪುಟ್ಟ ಮಕ್ಕಳ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದರು. ಜೆಹ್‌ ಹುಟ್ಟುಹಬ್ಬದ ಫೋಟೋಗಳು ಸಖತ್‌ ವೈರಲ್‌ ಆಗಿವೆ.  

PREV
18
ಕರೀನಾ ಕಪೂರ್-ಸೈಫ್ ಅಲಿ ಖಾನ್ 2ನೇ ಮಗ ಜೇಹ್‌ ಬರ್ತ್‌ಡೇ ಪೋಟೋಗಳು

ನಿನ್ನೆ ಅಂದರೆ ಫೆಬ್ರವರಿ 21ರಂದು ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ಅವರ ಎರಡನೇ ಮಗ ಜೆಹ್‌ ಆಲಿ ಖಾನ್‌ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿದ್ದರು. ಈ ಪೂಲ್‌ ಪಾರ್ಟಿ ಫ್ಯಾಮಿಲಿ ಮತ್ತು ಕ್ಲೋಸ್‌ ಫ್ರೆಂಡ್ಸ್‌ಗೆ ಮಾತ್ರ ಸೀಮಿತವಾಗಿತ್ತು

28

ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ತಮ್ಮ ಮಗಳು ಇನಾಯಾ ಅವರೊಂದಿಗೆ ಪಾರ್ಟಿಗೆ ಆಗಮಿಸಿದರು. ಅಂಗದ್ ಬೇಡಿ ಅವರು ತಮ್ಮ ಮಗ ಗುರಿಕ್ ಅವರೊಂದಿಗೆ ಈ ಬ್ಯಾಷ್‌ನಲ್ಲಿ ಭಾಗವಹಿಸಿದ್ದರು. 

38

ಪಟೌಡಿ ಸಹೋದರಿಯರಾದ ಸಬಾ ಮತ್ತು ಸೋಹಾ ಅವರು ಮಂಗಳವಾರ ಜೆಹ್ ಅವರ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.


 

48

ಇನ್‌ಸ್ಟಾಗ್ರಾಮ್‌ನಲ್ಲಿ ಸೋಹಾ ಅವರು ಪೋಸ್ಟ್‌ ಮಾಡಿರುವ ವೀಡಿಯೋದಲ್ಲಿ  ಕರೀನಾ ಅವರ ಮನೆಯ ಈಜುಕೊಳದ ಸುತ್ತಲೂ ಎಲ್ಲಾ ಕುಟುಂಬ ಸದಸ್ಯರು ಸೇರಿರುವುದು ಕಾಣಬಹುದು

58

ಕರೀನಾ ಕಪೂರ್‌ ಸಹೋದರಿ ಕರಿಷ್ಮಾ ಕಪೂರ್‌ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದು ಪಾರ್ಟಿಯಲ್ಲಿ ಸೈಫ್‌ ಜೊತೆಯಿರುವ  ಫೋಟೋವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ

68
Jeh Ali Khan

ಕರೀನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮಗನ ಬರ್ತ್‌ಡೇಗೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ, ಸೈಫ್ ಮತ್ತು ತೈಮೂರ್ ಕೊಳದ ಬಳಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. 

78

ಜೆಹ್ ಅವರ ಜನ್ಮದಿನದಂದು, ಮಮ್ಮಿ ಕರೀನಾ ಟಿ-ಶರ್ಟ್ ಮತ್ತು ಡೆನಿಮ್ ಅನ್ನು ಧರಿಸಿದ್ದರು. ಡ್ಯಾಡಿ ಸೈಫ್ ಪೀಚ್ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಜೆಹ್ ಅವರ ಹಿರಿಯ ಸಹೋದರ ತೈಮೂರ್ ಕಪ್ಪು ಟೀ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು.

88
Jeh Ali Khan

ಕರೀನಾ ಮತ್ತು ಸೈಫ್ ಅಕ್ಟೋಬರ್ 2012 ರಲ್ಲಿ ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಮದುವೆಯಾದರು. ದಂಪತಿ 2016 ರಲ್ಲಿ ತೈಮೂರ್‌ಗೆ ಮತ್ತು ನಂತರ 2021 ರಲ್ಲಿ ಅವರು ಜೆಹ್‌ಗೆ ಪೋಷಕರಾದರು.

Read more Photos on
click me!

Recommended Stories