Keerthy Suresh: ನಟನೆಯಿಂದ ದಕ್ಷಿಣದ ಟಾಪ್ ನಟಿ ನಿವೃತ್ತಿ: ಕಾರಣ ಏನ್‌ ಗೊತ್ತಾ?

First Published | Nov 29, 2022, 5:07 PM IST

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ (Keerthy Suresh) ವಿವಾಹವಾಗಲಿದ್ದಾರೆ ಎಂದು  ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. 30 ವರ್ಷದ ನಟಿ ಮದುವೆಯ ನಂತರ ನಟನೆಯನ್ನು ತೊರೆದು ನಿರ್ಮಾಪಕಿಯಾಗಿ ವೃತ್ತಿಜೀವನವನ್ನು ಮುಂದುವರಿಸುತ್ತಾರೆ ಎಂದೂ ವರದಿಯಾಗುತ್ತಿದೆ. ಕೀರ್ತಿಮದುವೆಯಾಗಲು ಒಪ್ಪಿಗೆ ನೀಡಿದ್ದರಿಂದ ಅವರ ತಂದೆ ಸುರೇಶ್ ಮತ್ತು ತಾಯಿ ಮೇನಕಾ ಅವರು  ಮಗಳಿಗೆ ಸೂಕ್ತವಾದ ಜೋಡಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 
 

ಕೀರ್ತಿ ಅವರ ಕುಟುಂಬವು ಇತ್ತೀಚೆಗೆ ಅವರ ವಿವಾಹದ ಸಿದ್ಧತೆಯ ಭಾಗವಾಗಿ ಅವರ ಪೂರ್ವಜರ ಮನೆ ಮತ್ತು ತಿರುನಲ್ವೇಲಿ ಬಳಿಯ ಕುಟುಂಬ ದೇವತೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ

ತಮಿಳು ಮತ್ತು ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಕೀರ್ತಿ ಸುರೇಶ್ ಕ್ರಮೇಣ ತಮ್ಮ ನಟನಾ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ ಮತ್ತು ಮುಂದೆ ಚಲನಚಿತ್ರ ನಿರ್ಮಾಣದತ್ತ ಗಮನ ಹರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ವರದಿ ತಿಳಿಸಿದೆ.

Tap to resize

ಆದರೆ, ಮದುವೆಯಾಗಲಿದ್ದಾರೆ ಮತ್ತು   ನಟನೆಯನ್ನು ತ್ಯಜಿಸಲಿದ್ದಾರೆ ಎಂಬುದರ ಬಗ್ಗೆ ಸ್ವತಃ ಕೀರ್ತಿ ಸುರೇಶ್, ಅವರ ತಂಡ ಅಥವಾ ಅವರ ಕುಟುಂಬ ಸದಸ್ಯರಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ.

Keerthy Suresh

ಎರಡು ವರ್ಷಗಳ ಹಿಂದೆ, ಕೀರ್ತಿ ಸುರೇಶ್ ರಾಜಕೀಯ ಪಕ್ಷಕ್ಕೆ ಸೇರಿದ ಕೇರಳ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. ಆದರೆ, ಆ ಸಮಯದಲ್ಲಿ ಅಂತಹ ವರದಿಗಳನ್ನು ಸ್ವತಃ ಕೀರ್ತಿ ನಿರಾಕರಿಸಿದ್ದರು.

ಮೂಲತಃ ತಮಿಳುನಾಡಿನ ಮದ್ರಾಸ್‌ನವರಾದ ಕೀರ್ತಿ ಸುರೇಶ್ ಅವರು ಕೇವಲ 8 ವರ್ಷ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು 2000 ರಿಂದ 2005 ರವರೆಗೆ 'ಪೈಲಟ್ಸ್' ಮತ್ತು 'ಕುಬೇರನ್' ಮುಂತಾದ ಅನೇಕ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕೆಲಸ ಮಾಡಿದರು.

keerthy suresh

ನಾಯಕಿಯಾಗಿ ಅವರ ಮೊದಲ ಚಿತ್ರ ಮಲಯಾಳಂ ಭಾಷೆಯಲ್ಲಿ ತಯಾರಾದ 'ಗೀತಾಂಜಲಿ ಮತ್ತು ಇದು 2013 ರಲ್ಲಿ  ಬಿಡುಗಡೆಯಾಯಿತು. ಅವರ ತಮಿಳು ಭಾಷೆಯ ಚೊಚ್ಚಲ ಚಿತ್ರ 'ಇಧು ಎನ್ನ ಮಾಯಂ' 2015 ರಲ್ಲಿ ಬಿಡುಗಡೆಯಾಯಿತು ಮತ್ತು ಅವರ ತೆಲುಗು ಚೊಚ್ಚಲ ಚಿತ್ರ 'ನೇನು ಸೈಲಜಾ' 2016 ರಲ್ಲಿ ಬಿಡುಗಡೆಯಾಯಿತು.

ಮಲಯಾಳಂನ 'ವಾಶಿ' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಕೀರ್ತಿ ಸುರೇಶನ್ ಅವರ ಮುಂಬರುವ ಚಿತ್ರಗಳಲ್ಲಿ 'ದಸರಾ', 'ಭೋಲಾ ಶಂಕರ್', 'ಮಾಮನ್ನನ್' ಮತ್ತು 'ಸೈರನ್' ಇದೆ. ಈ ಪೈಕಿ ಮೊದಲೆರಡು ತೆಲುಗಿನಲ್ಲಿ ಹಾಗೂ ಉಳಿದೆರಡು ತಮಿಳು ಭಾಷೆಯಲ್ಲಿ ತಯಾರಾಗುತ್ತಿದೆ.

Latest Videos

click me!