ಸಮಂತಾ ಆಯ್ತು, ಸಾಯಿ ಪಲ್ಲವಿಯೂ ಕೊಡ್ತಾರಾ Bollywoodಗೆ ಎಂಟ್ರಿ?

First Published | Dec 27, 2021, 5:24 PM IST

ಸೌತ್‌ ನಟಿಯರು ಬಾಲಿವುಡ್‌ಗೆ ಎಂಟ್ರಿ ಕೊಡುವುದು ಹೊಸದೇನಲ್ಲ. ಬಹಳ ಹಿಂದಿನಿಂದಲೂ ದಕ್ಷಿಣ ಭಾರತೀಯ ನಟಿಯರು ಹಿಂದಿ ಸಿನಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರೇಖಾ, ಜಯಪ್ರದಾ, ಶ್ರೀದೇವಿ, ಹೇಮಮಾಲಿನಿಯಿಂದ ಹಿಡಿದು ಇತ್ತೀಚಿನ ದೀಪಿಕಾ ಪಡುಕೋಣೆಯವರೆಗೆ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ನಟಿಯರಿದ್ದಾರೆ. ಅದರಲ್ಲಿ ಹಲವರು ಸಾಕಷ್ಟು ಫೇಮಸ್‌ ಕೂಡ ಆಗಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಸಮಂತಾ ರುತ್‌ ಫ್ರಭು (Samantha Ruth Prabhu) ನಂತರ ಈಗ ಸಾಯಿ ಪಲ್ಲವಿ (Sai Pallavi)  ಕೂಡ ಬಾಲಿವುಡ್‌ ಮೇಲೆ ಮೇಲೆ ಕಣ್ಣಿಟ್ಟಿದ್ದಾರಾ? ಇದಕ್ಕೆ ನಟಿ ಹೇಳಿದ್ದೇನು?   

ತಮ್ಮ ಆಕೌಂಟ್‌ನಲ್ಲಿ ಹಿಟ್ ಸಿನಿಮಾಗಳನ್ನು ಹೊಂದಿರುವ ಜನಪ್ರಿಯ ದಕ್ಷಿಣ ಭಾರತದ ನಟಿಯರಲ್ಲಿ ನ್ಯಾಚುರಲ್‌ ಬ್ಯೂಟಿ 
ಸಾಯಿ ಪಲ್ಲವಿ  ಒಬ್ಬರು. ಸಾಯಿ ಪಲ್ಲವಿ ಪ್ರೇಮಂ, ಫಿದಾ, ಮಾರಿ 2, ಅತಿರನ್ ಮುಂತಾದ ಕೆಲವು ಸಿನಿಮಾಗಳಿಂದ ಭಾರತೀಯ ಚಿತ್ರ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದವರು.
 

ಲವ್ ಸ್ಟೋರಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ ಮತ್ತು ಅಭಿಮಾನಿಗಳು ನಾಗ ಚೈತನ್ಯ ಅವರೊಂದಿಗಿನ ಅವರ ಸಿಜ್ಲಿಂಗ್ ಕೆಮಿಸ್ಟ್ರಿಗೆ ಫುಲ್‌ ಫಿದಾ ಆಗಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿ ರಸಿಕರ ಹೃದಯ ಗೆಲ್ಲುವಲ್ಲಿ ಸಾಯಿ ಯಶಸ್ವಿಯಾಗಿದ್ದಾರೆ.

Tap to resize

ದಕ್ಷಿಣದ ಈ ನಟಿ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಆದರೆ ನಟಿಗೆ ಬಾಲಿವುಡ್ ಚಿತ್ರ ಮಾಡಲು ಕೆಲವು ಷರತ್ತುಗಳಿವೆಯಂತೆ. ಸಾಯಿ ಪಲ್ಲವಿ ತನಗೆ ಅತ್ಯುತ್ತಮವಾದ ಸ್ಕ್ರಿಪ್ಟ್ ಮತ್ತು ತನಗೆ ಸರಿ ಹೊಂದುವ ಮಾದರಿ ಪಾತ್ರದ ಅಗತ್ಯವಿದೆ ಎಂದು ಹೇಳಿದ್ದಾರೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

ಸಮಂತಾ ಅವರಂತೆ ಸಾಯಿ ಪಲ್ಲವಿ ಕೂಡ ಬಾಲಿವುಡ್‌ಗೆ ರೆಡಿಯಾಗಿದ್ದಾರೆ. 'ನಾನು ಬಾಲಿವುಡ್ ಚಿತ್ರ ಮಾಡಲು ಸಿದ್ಧನಿದ್ದೇನೆ, ಅದಕ್ಕೆ ನನಗೆ ಸೂಕ್ತವಾದ ಸ್ಕ್ರಿಪ್ಟ್ ಮತ್ತು ಪಾತ್ರದ  ಅಗತ್ಯವಿದೆ' ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. 

ಆಕೆಯ ಇತ್ತೀಚಿನ ಬಿಡುಗಡೆ ಶ್ಯಾಮ್ ಸಿಂಘ ರಾಯ್, ಒಂದು ಅದ್ಭುತ ಪ್ರೇಮಕಥೆ. ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾನಿ ಮತ್ತು ಸಾಯಿ ಪಲ್ಲವಿ ಜೊತೆಗೆ ಕೃತಿ ಶೆಟ್ಟಿ, ಮಡೋನಾ ಸೆಬಾಸ್ಟಿಯನ್, ಬೆಂಗಾಲಿ ನಟ ಜಿಶು ಸೇನ್‌ಗುಪ್ತಾ, ಮುರಳಿ ಶರ್ಮಾ ಮುಂತಾದವರು ವಿಮರ್ಶಾತ್ಮಕ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾನಿ ಅಭಿನಯದ ಶ್ಯಾಮ್ ಸಿಂಹ ರಾಯ್ ಸಿನಿಮಾದ ಯಶಸ್ಸನ್ನು ಅವರು ಪ್ರಸ್ತುತ ಎಂಜಾಯ್‌ ಮಾಡುತ್ತಿದ್ದಾರೆ. ಮಿಡಲ್ ಕ್ಲಾಸ್ ಅಬ್ಬಾಯಿ ಸಿನಿಮಾದ  ನಂತರ ನಾನಿ ಜೊತೆ ಸಾಯಿ ಪಲ್ಲವಿ  ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಸಾಯಿ ಪಲ್ಲವಿ ಮುಂದೆ ಟಾಲಿವುಡ್ ಸಿನಿಮಾ ವಿರಾಟ ಪರ್ವಂನಲ್ಲಿ ರಾಣಾ ದಗ್ಗುಬಾಟಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಪಿರಿಯಾಡ್ ಡ್ರಾಮಾ ಫಿಲ್ಮ್‌ನಲ್ಲಿ ನಂದಿತಾ ದಾಸ್, ನವೀನ್ ಚಂದ್ರ, ಜರೀನಾ ವಹಾಬ್, ಈಶ್ವರಿ ರಾವ್, ಪ್ರಿಯಾಮಣಿ ಮತ್ತು ಸಾಯಿ ಚಂದ್ ಅವರು ಇತರ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Latest Videos

click me!