ಸಿನಿಮಾದ ಹೊರತಾಗಿ ಈ ಬ್ಯುಸಿನೆಸ್‌ನಿಂದಲೂ ಹಣ ಸಂಪಾದನೆ ಮಾಡುವ ಸೋನು ಸೂದ್‌

First Published Jul 30, 2022, 6:12 PM IST

ರಿಯಲ್ ಹೀರೋ ಆಗಿ ಅಭಿಮಾನಿಗಳಲ್ಲಿ ಜನಪ್ರಿಯರಾಗಿರುವ ನಟ ಸೋನು ಸೂದ್ (Sonu Sood) 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜುಲೈ 30, 1973 ರಂದು ಪಂಜಾಬ್‌ನ ಮೊಂಗಾದಲ್ಲಿ ಜನಿಸಿದ ಸೋನು ಸೂದ್ ಕೊರೊನಾ ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಮನೆಗೆ ಕಕಳುಹಿಸಲು ಬಹಳಷ್ಷಟು ಶ್ರಮ ವಹಿಸಿದ್ದರು  ಮತ್ತು ಇಂದಿಗೂ ಅವರು ನಿರ್ಗತಿಕರ ಪರವಾಗಿದ್ದಾರೆ. ಅವರ ಆಸ್ತಿ ಎಷ್ಟು ಮತ್ತು ಸಿನಿಮಾದ ಹೊರತಾಗಿ ಅವರ ಆದಾಯ ಮೂಲ ಯಾವುದು ಎಂಬ ವಿವರಗಳು ಇಲ್ಲಿವೆ.

ವರದಿಗಳ ಪ್ರಕಾರ ಸೋನು ಸೂದ್ 17 ಮಿಲಿಯನ್ ಡಾಲರ್ ಅಥವಾ ಭಾರತೀಯ ರೂಪಾಯಿಯಲ್ಲಿ ಸುಮಾರು 137 ಕೋಟಿ ಮೌಲ್ಯದ ಆಸ್ತಿಯ ಮಾಲೀಕ. ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ.

ಸೋನು ಸೂದ್ ಅವರ ಆಸ್ತಿ ಮುಂಬೈನ ಲೋಖಂಡವಾಲಾದಲ್ಲಿ 4 BHK ಅಪಾರ್ಟ್ಮೆಂಟ್ ಆಗಿದೆ, ಇದು 2600 ಚದರ ಅಡಿಗಳಷ್ಟು ಹರಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ಮನೆಯನ್ನು ಹೊರತುಪಡಿಸಿ, ಅವರು ಮುಂಬೈನಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಸ್ವಗ್ರಾಮ ಮೊಂಗಾದಲ್ಲಿ ಬಂಗಲೆಯನ್ನೂ ಹೊಂದಿದ್ದಾರೆ. ಇದಲ್ಲದೆ, ಅವರು ಮುಂಬೈನ ಜುಹು ಪ್ರದೇಶದಲ್ಲಿ ಹೋಟೆಲ್ ಹೊಂದಿದ್ದಾರೆ.

ಸೋನುಗೆ  ಐಷಾರಾಮಿ ವಾಹನಗಳೆಂದರೆ ಸೋನುಗೆ ಪ್ರೀತಿ. ಅವರ ಗ್ಯಾರೇಜ್‌ನಲ್ಲಿ ಸುಮಾರು 66 ಲಕ್ಷ ರೂಪಾಯಿ ಮೌಲ್ಯದ Mercedes Benz ML Class 350 CDI, ಸುಮಾರು 80 ಲಕ್ಷ ರೂಪಾಯಿ ಮೌಲ್ಯದ Audi Q7 ಮತ್ತು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಪೋರ್ಷೆ ಪನಾಮ ಕಾರುಗಳು ಸೇರಿವೆ.

ಇನ್ನು ಸೋನು ಗಳಿಕೆಯ ಬಗ್ಗೆ ಹೇಳುವುದಾದರೆ, ಅವರ ವಾರ್ಷಿಕ ಸರಾಸರಿ ಗಳಿಕೆ 15 ಕೋಟಿ ರೂ. ಅದರಂತೆ ಪ್ರತಿ ತಿಂಗಳ ಆದಾಯ1.25 ಕೋಟಿ ರೂ. ಸೋನು ಸೂದ್ ಮುಖ್ಯವಾಗಿ ಚಲನಚಿತ್ರಗಳಿಂದ ಗಳಿಸುತ್ತಾರೆ. ಒಂದು ಚಿತ್ರಕ್ಕೆ 3-4 ಕೋಟಿ ರೂ ಚಾರ್ಜ್‌ ಮಾಡುತ್ತಾರೆ ಈ ನಟ.

Image: Sonu SoodInstagram

ಇದಲ್ಲದೆ, ಅವರು 'ಶಕ್ತಿ ಸಾಗರ್ ಪ್ರೊಡಕ್ಷನ್ಸ್' ಹೆಸರಿನ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ,ನು ಅವರ ಗಳಿಕೆಯ ಪ್ರಮುಖ ಭಾಗವು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಬರುತ್ತದೆ. ಅವರು ಪ್ರತಿ ಬ್ರಾಂಡ್‌ಗೆ 1 ರಿಂದ 2 ಕೋಟಿ ರೂ ಸಂಬಾವನೆ ಪಡೆಯುವ ಸೋನು  ಅವರು  ಹೋಟೆಲ್‌ ಸಹ ಅವರ ಗಳಿಕೆಯ ಭಾಗವಾಗಿದೆ.

Image: Sonu SoodInstagram

ಸೋನು ಇದುವರೆಗೆ ಹಿಂದಿ, ತಮಿಳು, ತೆಲುಗು, ಕನ್ನಡ, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೊನೆಯದಾಗಿ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರದಲ್ಲಿ ಚಾಂದಬಾರ್ದಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಚಿತ್ರಗಳಲ್ಲಿ ತಮಿಳು ಭಾಷೆಯಲ್ಲಿ 'ತಮಿಳ್ಸನ್' ಮತ್ತು ಹಿಂದಿಯಲ್ಲಿ 'ಫತೇಹ್' ಸೇರಿವೆ.
 

click me!