ಕೆಲವು ಸೆಕೆಂಡುಗಳ ವೀಡಿಯೊ ಕ್ಲಿಪ್ ಈ ನಟಿಯ ಕೆರಿಯರ್‌ಯನ್ನೇ ನಾಶಮಾಡಿತ್ತು

Published : Jul 30, 2022, 06:11 PM IST

ನೀಲಿ ಕಣ್ಣಿನ  ಸುಂದರಿ ಬಾಲಿವುಡ್‌ನ ನಟಿ ಮಂದಾಕಿನಿ (Mandakini) ಇಂದು ಅಂದರೆ ಜುಲೈ 30 ರಂದು 59 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1963 ರಲ್ಲಿ ಮೀರತ್‌ನಲ್ಲಿ ಜನಿಸಿದ ಅವರು  11 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರು. ಎಷ್ಟೋ ವರ್ಷಗಳ ಕಾಲ ಲೈಮ್‌ಲೈಟಿ ನಿಂದ ದೂರವುಳಿದ ಮಂದಾಕಿನಿ  ಕೆಲ ವರ್ಷಗಳ ಹಿಂದೆ ಮತ್ತೆ ಇಂಡಸ್ಟ್ರಿಗೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು, ಅಂದಹಾಗೆ,  ಉತ್ತಮವಾಗಿ ಸಾಗುತ್ತಿದ ಮಂದಾಕಿನಿಯ ವೃತ್ತಿಜೀವನವನ್ನು   ಕೆಲವು ಸೆಕೆಂಡುಗಳ ವೈರಲ್ ವೀಡಿಯೊ ಎಲ್ಲವನ್ನೂ ಹಾಳುಮಾಡಿತು. ಅಷ್ಟಕ್ಕೂ ಆ ವಿಡೀಯೋದಲ್ಲಿ ಏನಿತ್ತು?

PREV
19
ಕೆಲವು ಸೆಕೆಂಡುಗಳ ವೀಡಿಯೊ ಕ್ಲಿಪ್ ಈ ನಟಿಯ ಕೆರಿಯರ್‌ಯನ್ನೇ ನಾಶಮಾಡಿತ್ತು

ಮಂದಾಕಿನಿ ತನ್ನ ಅದೃಷ್ಟ ಪರೀಕ್ಷೆಗೆಂದು ಬಾಲಿವುಡ್‌ಗೆ ಬಂದಾಗ, ಎಲ್ಲರೂ  ತಿರಸ್ಕರಿಸಿದರು. ಅದೃಷ್ಟ ಕೈಕೊಟ್ಟಿದ್ದರಿಂದ ನಿರ್ದೇಶಕರೊಬ್ಬರು ಆಕೆಯನ್ನು ಕುಮಾರ್ ಗೌರವ್ ಜೊತೆ ನಟಿಸಲು ಯೋಜಿಸಿದ್ದರು.

29

ಆದರೆ ಆ ಸಮಯದಲ್ಲಿ ಕುಮಾರ್ ಗೌರವ್ ಲವ್ ಸ್ಟೋರಿ ಎಂಬ ಬ್ಲಾಕ್ ಬಸ್ಟರ್ ಚಿತ್ರ ನೀಡಿ ಸೂಪರ್ ಸ್ಟಾರ್ ಆಗಿದ್ದರಿಂದ ಅವರು ಹೊಸಬರಾದ ಮಂದಾಕಿನಿಯೊಂದಿಗೆ ಕೆಲಸ ಮಾಡಲು ನಿರಾಕರಿಸಿದರು. ಪದೇ ಪದೇ ನಿರಾಕರಣೆಯ ನಂತರ, ಮಂದಾಕಿನಿ ಬೇಸತ್ತು ತನ್ನ ಮನೆಗೆ ಮರಳಿದರು. 

39

ಕೆಲವು ತಿಂಗಳುಗಳ ನಂತರ, ರಾಜ್ ಕಪೂರ್ ಅವರು ಆಂಗ್ಲೋ ಇಂಡಿಯನ್-ಲುಕಿಂಗ್ ಹೀರೋಯಿನ್ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದ  ಮಂದಾಕಿನಿ ಆಡಿಷನ್‌ ನೀಡಿದ್ದರು. ಹೀಗೆ ರಾಜ್‌ಕಪೂರ್‌ ಅವರ ರಾಮ್ ತೇರಿ ಗಂಗಾ ಮೈಲಿ ಚಿತ್ರಕ್ಕೆ ನಾಯಕಿಯಾಗಿ ಮಂದಾಕಿನಿ ಆಯ್ಕೆಯಾದರು. ಚಿತ್ರದಲ್ಲಿ ರಾಜ್ ಕಪೂರ್ ಅವರ ಮಗ ರಾಜೀವ್ ಕಪೂರ್ ಅವರೊಂದಿಗೆ ನಾಯಕರಾಗಿದ್ದರು.


 

49

ರಾಮ್ ತೇರಿ ಗಂಗಾ ಮೈಲಿ ಬಿಡುಗಡೆಯೊಂದಿಗೆ, ಮಂದಾಕಿನಿ ರಾತ್ರೋರಾತ್ರಿ ಬಾಲಿವುಡ್‌ನ ಸೆನಷನ್‌ ಆದರು. ಪ್ರತಿಯೊಬ್ಬ ನಿರ್ದೇಶಕರು ಅವರನ್ನು ತಮ್ಮ ಚಿತ್ರದಲ್ಲಿ ನಟಿಯಾಗಲು ತೆಗೆದುಕೊಳ್ಳಲು ಹತಾಶರಾಗಿದ್ದರು. 

59

ವಾಸ್ತವವಾಗಿ, ಮಂದಾಕಿನಿ ಜನಪ್ರಿಯತೆಗೆ ದೊಡ್ಡ ಕಾರಣವೆಂದರೆ ಅವರು ರಾಮ್ ತೇರಿ ಗಂಗಾ ಮೈಲಿಯಲ್ಲಿ ಬೋಲ್ಡ್ ದೃಶ್ಯಗಳನ್ನು ನೀಡಿದ್ದರು . ಚಿತ್ರದಲ್ಲಿ ಮಂದಾಕಿನಿ ಕೊಟ್ಟ ಬೋಲ್ಡ್ ನೆಸ್ ನಿಂದಾಗಿ ಎಲ್ಲೆಡೆ ಹವಾ ಸೃಷ್ಟಿಸಿದ್ದರು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ವಿವಾದವೂ ಉಂಟಾಯಿತು. 

69

ಅದೇ ಸಮಯದಲ್ಲಿ, ದಾವೂದ್ ಇಬ್ರಾಹಿಂ ಜೊತೆಗಿನ ಆಕೆಯ ಕೆಲವು ಸೆಕೆಂಡುಗಳ ವೀಡಿಯೊ ಕ್ಲಿಪ್ ಕೂಡ ಸಾಕಷ್ಟು ಗದ್ದಲವನ್ನು ಸೃಷ್ಟಿಸಿತು. ವೈರಲ್ ವಿಡಿಯೋದಲ್ಲಿ ಆಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸ್ಟೇಡಿಯಂನಲ್ಲಿ ಕ್ರಿಕೆಟ್ ನೋಡುತ್ತಿದ್ದರು. 

79

ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಇದರ ನಂತರ ತಯಾರಕರು ಅವರನ್ನು ತಮ್ಮ ಚಿತ್ರಗಳಲ್ಲಿ ತೆಗೆದುಕೊಳ್ಳುವುದರಿಂದ ದೂರ ಸರಿಯಲು ಪ್ರಾರಂಭಿಸಿದರು .ಅಂಡರ್‌ವರ್ಲ್ಡ್ ಡಾನ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಂದಾಕಿನಿ ಹೇಳಿದ್ದರೂ ಅದರ ನಂತರ ಅವರ ವೃತ್ತಿಜೀವನದ ಗ್ರಾಫ್ ಕುಸಿಯಿತು ಮತ್ತು  ಇದ್ದಕ್ಕಿದ್ದಂತೆ ಅವರು ಉದ್ಯಮದಿಂದ ಕಣ್ಮರೆಯಾದರು.


 

89

ಮಂದಾಕಿನಿ ಡಾ. ಕಗ್ಯೂರ್ ಟಿ. ರಿಂಪೋಚೆ ಠಾಕೂರ್ ಅವರನ್ನು 1990 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ರಬ್ಜೆ ಇನಾಯಾ ಠಾಕೂರ್ ಮತ್ತು ಮಗ ರಬಿಲ್.  

99

ಪ್ಯಾರ್ ಕೆ ನಾಮ್ ಕುರ್ಬಾನ್, ಫೇಟ್ಫುಲ್ ತಮಾಶಾ, ಕಮಾಂಡೋ, ಪ್ಯಾರ್ ಮೊಹಬ್ಬತ್, ಆಸಿಡ್, ಜೀವಾ, ಆಗ್ ಮತ್ತು ಶೋಲಾ, ಐರನ್, ಲಾಕ್ಔಟ್, ಆಖ್ರಿ ಬಾಜಿ, ಜಂಗ್ಬಾಜ್, ಶೇಷನಾಗ್, ಡ್ಯಾನ್ಸ್-ಡ್ಯಾನ್ಸ್, ದುಷ್ಮನ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories