ವಿಚಿತ್ರ ಸ್ಟೈಲ್‌ನಲ್ಲಿ ಬೇಬಿ ಬಂಪ್‌ ತೋರಿಸಿ ಟ್ರೋಲ್‌ಗೆ ಗುರಿಯಾದ Sonam Kapoor

First Published | Jun 12, 2022, 5:26 PM IST

ಬಾಲಿವುಡ್‌ ನಟಿ ಸೋನಂ ಕಪೂರ್ (Sonam Kapoor) ಮೊದಲ ಬಾರಿಗೆ ತಾಯಿಯಾಗಲಿದ್ದಾರೆ ಮತ್ತು ಅವರು ತಮ್ಮ ಜೀವನದ ಈ ಹಂತದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆಂದರೆ, ಅವರು ಪ್ರತಿದಿನ ಒಂದಲ್ಲ ಒಂದು ನೆಪದಲ್ಲಿ ತಮ್ಮ ಬೇಬಿ ಬಂಪ್‌ ತೋರಿಸುವುದನ್ನು ಕಾಣಬಹುದು. ಇತ್ತೀಚೆಗೆ, ಅವರು ತನ್ನ ಸಹೋದರಿ ರಿಯಾ ಕಪೂರ್‌ನೊಂದಿಗೆ ಲಂಡನ್‌ನ ಬೀದಿಗೆ ಸುತ್ತುವ ಫೋಟೋವೊಂದು ಹೊರಬಂದಿದೆ. ಇದರಲ್ಲಿನ ಸೋನಂ ನೀಡಿರುವ  ಪೋಸ್‌ಗೆ ತೀವ್ರವಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಲಂಡನ್‌ನ ರೆಸ್ಟೋರೆಂಟ್‌ನ ಹೊರಗೆ ತೆಗೆದ ಈ ಫೋಟೋದಲ್ಲಿ ಸೋನಮ್ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ರೀತಿಯನ್ನು ಜನರು ಇಷ್ಟಪಡುತ್ತಿಲ್ಲ. ಸೋನಂ ಕಪೂರ್‌ ಅವರ ಸಹೋದರಿ ರಿಯಾ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ನಿಂದ ಸೋನಂ ಮತ್ತು ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಇದರಲ್ಲಿ ಸೋನಂ ಬ್ರಾಲೆಟ್ ಮತ್ತು  ಕೋಟ್‌ನೊಂದಿಗೆ ಮ್ಯಾಚಿಂಗ್ ಕಲರ್ ಪ್ಯಾಂಟ್ ಧರಿಸಿದ್ದಾರೆ. ಕಣ್ಣುಗಳಿಗೆ ಕಪ್ಪು ಕನ್ನಡಕವನ್ನು ಧರಿಸಿ ನಾಲಿಗೆಯನ್ನು ಹೊರತೆಗೆದು ವಿಚಿತ್ರ ಪೋಸ್ ನೀಡಿದ್ದಾರೆ.  ಅವರ ಭಾರವಾದ ಬೇಬಿ ಬಂಪ್ ಗಮನವನ್ನು ಸೆಳೆಯುತ್ತಿದೆ.  

Tap to resize

ಫೋಟೋದ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು 'ಏನು ಅವಮಾನ' ಎಂದು ಬರೆದಿದ್ದಾರೆ. 'ಬಡವರ  ರಿಹನಾ ಅನಿಸುತ್ತಿದ್ದಾಳೆ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, ಅವಳು ಯಾವಾಗಲೂ ಬೇಬಿ ಬಂಪ್‌ ಏಕೆ ತೋರಿಸುತ್ತಾಳೆ ಎಂಬ ಪ್ರಶ್ನೆಯನ್ನು ಬಳಕೆದಾರರು ಕೇಳಿದ್ದಾರೆ.

'ಕಾಪಿ ರಿಹಾನಾ' ಎಂದು ಮತ್ತೊಬ್ಬರು ಹೇಳಿದ್ದಾರೆ. 'ಈ ಸೆಲೆಬ್ರೆಟಿಗಳು ತಾವು ಮಾತ್ರ ಪ್ರೆಗ್ನೆಂಟ್‌ ಆಗುವುದು ಎಂದು ಭಾವಿಸಿದ್ದರಾ?' ಎಂದು ಇನ್ನೊಬ್ಬರು ಬರೆದರೆ,  'ಆಮೇಲೆ ಮಗುವಿನ ಮುಖವನ್ನು ತೋರಿಸುವುದಿಲ್ಲ' ಎಂದು ಒಬ್ಬ ಯೂಸರ್‌ ಹೇಳಿದ್ದಾರೆ

ಅದೇ ಸಮಯದಲ್ಲಿ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸೋನಂ ಅವರ ಹೊಟ್ಟೆಯನ್ನು ನೋಡಿದ ನಂತರ ಅವರಿಗೆ  ಹುಟ್ಟುವುದು ಮಗ ಅಥವಾ ಮಗಳಾ ಎಂದು ಊಹಿಸುತ್ತಿದ್ದಾರೆ.

ಮೇ 2018 ರಲ್ಲಿ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾದ ಸೋನಮ್, ಈ ವರ್ಷದ ಮಾರ್ಚ್‌ನಲ್ಲಿ ಪ್ರೆಗ್ನೆಂಸಿ ವಿಷಯವನ್ನು ಘೋಷಿಸಿದರು. ಅಂದಿನಿಂದ, ಅವರು ನಿರಂತರವಾಗಿ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಇತ್ತೀಚೆಗೆ, ಅವರು ಮ್ಯಾಗಜೀನ್‌ನ ಫೋಟೋಶೂಟ್ ಮಾಡಿದ್ದರು. ಇದಕ್ಕೂ ಮೊದಲು, ಅವರು ಪೂಲ್‌ಸೈಡ್‌ನಲ್ಲಿ ಬೇಬಿ ಬಂಪ್ ಅನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮೇಕ್ಅಪ್ ಇಲ್ಲದೆ ಮತ್ತು ಅವರ ಕೂದಲು ಕೂಡ ತೆರೆದಿತ್ತು. ಆಗಲೂ ಸಾಮಾಜಿಕ ಜಾಲತಾಣ ಬಳಕೆದಾರರು ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು.

Latest Videos

click me!