ಟಾಲಿವುಡ್ ಮತ್ತು ಬಾಲಿವುಡ್ ಟಾಪ್ ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುವ ಡಿಸೈನರ್ ಪ್ರತ್ಯುಶಾ ಗರಿಮೆಲ್ಲಾ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
26
ಬಂಜಾರ ಹಿಲ್ಸ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದ ಪ್ರತ್ಯುಶಾ ಬಾತ್‌ರೂಮ್‌ನಲ್ಲಿ carbon monoxide cylinder ಪತ್ತೆಯಾಗಿದೆ. ಇದನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
36
ಡಿಎನ್‌ಎ ವೆಬ್ ವರದಿ ಮಾಡಿರುವ ಪ್ರಕಾರ ನಾಗೇಶ್ವರ್ ರಾವ್ ಅವರಿಗೆ ಪ್ರತ್ಯುಶಾ ಮನೆಯಲ್ಲಿ ಪತ್ರ ಸಿಕ್ಕಿದೆ. ಒಂಟಿತನ ಮತ್ತು ಡಿಪ್ರೆಶನ್ ಕಾಡುತ್ತಿತ್ತು ಎಂದು ಬರೆದಿದ್ದಾರೆ ಎನ್ನಲಾಗಿದೆ.
46
35 ವರ್ಷದ ಪ್ರತ್ಯುಶಾ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ತಂದೆ ಎಲ್‌ಇಡಿ ಉತ್ಪಾದನೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಫ್ಯಾಷನ್ ಲೋಕದಲ್ಲಿ ಆಸಕ್ತಿ ಇದ್ದ ಕಾರಣ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ತೆರೆದರು.
56
ರವೀನಾ ಟಂಡನ್, ಪರಿಣಿತಿ ಚೋಪ್ರಾ, ಹುಮಾ ಖುರೇಷಿ, ಕಾಜೋಲ್, ಶ್ರೇಯಾ ಸರಣ್, ಕಾಜಲ್ ಅಗರ್ವಾಲ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಗೌಹರ್ ಖಾನ್, ನೇಹಾ ಧೂಪಿಯಾ, ಭೂಮಿ ಫಡ್ನೇಕರ್ ಸೇರಿದಂತೆ ಹಲವರ ಜೊತೆ ಪ್ರತ್ಯುಶಾ ಕೆಲಸ ಮಾಡಿದ್ದರು.
66
'ನನ್ನ ಬೆಸ್‌ಫ್ರೆಂಡ್ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಿರುವುದಕ್ಕೆ ಬೇಸರವಿದೆ, ಕೋಪವಿದೆ. ಆಕಗೆ ಎಲ್ಲಾ ಇತ್ತು ದೇಶದಲ್ಲಿರುವ ಬೆಸ್ಟ್ ಅವಳ ಬಳಿ ಇತ್ತು. ಆದರೆ ಡಿಪ್ರೆಶನ್ ಅವನ್ನು ನಿಂಗಿತ್ತು. ಆಕೆ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಉಪಾಸನ ಕೊನೆಡೆಲ್ಲಾ ಬರೆದುಕೊಂಡಿದ್ದಾರೆ.