ಸೋನಂ ಕಪೂರ್ ತನ್ನ ಪತಿ ಆನಂದ್ ಅಹುಜಾ ಅವರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಈಗ ತಾಯಿಯಾಗಲಿರುವ ಸೋನಂ ಮುಂಬೈಗೆ ಬಂದಿದ್ದಾರೆ. ಅವಳು ತನ್ನ ತವರು ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ನಟಿ ತಾಯಿಯಾಗುವ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅವರು ತಮ್ಮ ಪ್ರೆಗ್ನೆಂಸಿಯ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ ಅವರು ಬೇಬಿ ಬಂಪ್‌ನೊಂದಿಗೆ ಅನೇಕ ಫೋಟೋಶೂಟ್‌ಗಳನ್ನು ಮಾಡಿದ್ದಾರೆ.
ಇತ್ತೀಚಿನ ಫೋಟೋಶೂಟ್‌ನಲ್ಲಿ, ಅವರು ಕಪ್ಪು ಟ್ರಾನ್ಸಪೆರೆಂಟ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಂ ಕಪೂರ್ ತಮ್ಮ ಬೇಬಿ ಬಂಪ್ ಜೊತೆ ಲೇಸ್ ಔಟ್‌ಪೀಟ್‌ನಲ್ಲಿ ವಿಭಿನ್ನ ಪೋಸ್ ನೀಡುತ್ತಿದ್ದಾರೆ.
ನಟಿಯ ಚಿತ್ರಗಳನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಕಪ್ಪು ಗೌನ್ ಧರಿಸರುವ ಸೋನಂ ಕಪೂರ್ ಕೂದಲನ್ನು ಕಟ್ಟಿಕೊಂಡಿದ್ದಾರೆ. ಸ್ಮೋಕಿ ಐ ಮತ್ತು ನ್ಯೂಡ್ ಮೇಕಪ್‌ನೊಂದಿಗೆ ಸೋನಂ ತಮ್ಮ ಲುಕ್ ಪೂರ್ಣಗೊಳಿಸಿದ್ದಾರೆ.
ತಿಳಿ ಮೆರೂನ್ ಕಲರ್ ಲಿಪ್ ಸ್ಟಿಕ್ ಹಚ್ಚಿರುವ ಸೋನಂ ಮ್ಯಾಚಿಂಗ್ ಹೀಲ್ಸ್ ಮತ್ತು ಕಿವಿಯೋಲೆಗಳನ್ನು ತಮ್ಮ ಔಟ್‌ಪಿಟ್ ಜೊತೆ ಪೇರ್ ಮಾಡಿಕೊಂಡಿದ್ದಾರೆ. ಅವರು ಈ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಸೋನಂ ಕಪೂರ್ ಅವರ ಫೋಟೋಗಳಿಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಸೋನಂ ಅವರ ತಾಯಿ ಸುನಿತಾ ಅವರು ಕಾಮೆಂಟ್‌ನಲ್ಲಿ ಬಹಳಷ್ಟು ಹೃದಯ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ಭೂಮಿ ಪೆಡ್ನೇಕರ್, ನರ್ಗಿಸ್ ಫಕ್ರಿ ಬೆಂಕಿಯ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಇದಲ್ಲದೇ ಅಭಿಮಾನಿಗಳು ಪ್ರೀತಿ-ಪ್ರೇಮದ ಸುರಿಮಳೆಗೈಯುತ್ತಿದ್ದಾರೆ. ಪೋಸ್ಟ್ ಮಾಡಿದ ಕೆಲವು ಗಂಟೆಗಳಲ್ಲೇ ಫೋಟೋ 1.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ಇತ್ತೀಚೆಗೆ ಸೋನಂ ಕಪೂರ್ ಅವರ ಅತ್ತೆಯ ಮನೆಯಲ್ಲಿ ಕಳ್ಳತನ ನಡೆದಿತ್ತು. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ತನ್ನ ಪತಿಯೊಂದಿಗೆ ಸೇರಿ ಕಳ್ಳತನದ ಘಟನೆ ನಡೆಸುತ್ತಿದ್ದಳು.