ವರ್ಷಗಳಿಂದ ರೋಟಿನೇ ತಿಂದಿಲ್ಲಂತೆ Ranbir Kapoor ಇಲ್ಲಿದೆ ನಟನ fitness diet ಸಿಕ್ರೇಟ್‌

First Published | Apr 19, 2022, 5:46 PM IST

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor Alia Bahtt) 14 ಏಪ್ರಿಲ್ 2022 ರಂದು ತಮ್ಮ ಮನೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ  ಮದುವೆಯಾದರು. ಆದರೆ ಈ ಹೈ ಪ್ರೊಫೈಲ್ ಮದುವೆ ಎಲ್ಲರ ಗಮನ ಸೆಳೆದಿತ್ತು. ಮದುವೆಯ ನಂತರ, ರಣಬೀರ್-ಆಲಿಯಾ ಅವರ ಚಿತ್ರಗಳನ್ನು ನಿರಂತರವಾಗಿ ಹಂಚಿಕೊಳ್ಳಲಾಗುತ್ತಿದೆ, ಅ ಮದುವೆಗೆ ಆಲಿಯಾ ತುಂಬಾ ಸಿಂಪಲ್ ಲುಕ್ ಅಳವಡಿಸಿಕೊಂಡಿದ್ದು, ರಣಬೀರ್ ಕೂಡ ಮದುವೆಯಲ್ಲಿ ತುಂಬಾ ಸ್ಲಿಮ್ ಟ್ರಿಮ್ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.  ಬಾಲಿವುಡ್‌ನ ಫಿಟ್ ಮತ್ತು ಸ್ಟೈಲಿಶ್ ನಟರಲ್ಲಿ ಒಬ್ಬರಾಗಿರುವ  ರಣಬೀರ್ ಅವರ ಫಿಟ್ನೆಸ್ ಮತ್ತು ಡಯಟ್ ಸೀಕ್ರೆಟ್ ಇಲ್ಲಿದೆ.

ರಣಬೀರ್ ಕಪೂರ್ ಅವರ ಟ್ರೈನರ್ ಹೆಸರು ಶಿವೋಹಂ, ಇವರನ್ನು ದೀಪೇಶ್ ಭಟ್ ಎಂದೂ ಕರೆಯುತ್ತಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ರಣಬೀರ್ ಅವರ ಫಿಟ್ನೆಸ್ ರಹಸ್ಯಗಳನ್ನು ಅವರು ಬಹಿರಂಗಪಡಿಸಿದ್ದಾರೆ. ರಣಬೀರ್ ತುಂಬಾ ಫಿಟ್‌ನೆಸ್ ಫ್ರೀಕ್ ಮತ್ತು ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುವುದರ ಜೊತೆಗೆ, ಅವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಸಹ ಅನುಸರಿಸುತ್ತಾರೆ ಎಂದು ಶಿವೋಮ್ ಹೇಳಿದ್ದಾರೆ. 

ಕಳೆದ 1.5 ವರ್ಷಗಳಿಂದ ಒಂದೇ ಒಂದು ರೊಟ್ಟಿ ತಿಂದಿಲ್ಲ. ರೊಟ್ಟಿಗೆ ಬದಲಾಗಿ ಬ್ರೌನ್‌ ರೈಸ್‌ ತಿನ್ನಲು ಅವರು ಇಷ್ಟಪಡುತ್ತಾರೆ. ಶಿವೋಮ್ ಸುಮಾರು 1.5 ವರ್ಷಗಳಿಂದ ರಣಬೀರ್‌ಗೆ ತರಬೇತಿ ನೀಡುತ್ತಿದ್ದಾರೆ ಮತ್ತು ಈ ಸಮಯದಲ್ಲಿ ಅವರು ಯಾವಾಗಲೂ ತಮ್ಮ ಫಿಟ್‌ ದೇಹವನ್ನು ಕಾಪಾಡಿಕೊಳ್ಳಲು ಸರಳವಾದ, ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ.

Tap to resize

ರಣಬೀರ್‌ಗೆ ಸಿಹಿತಿಂಡಿಗಳು ಅಥವಾ ಕರಿದ ಪದಾರ್ಥಗಳು ಇಷ್ಟವಿಲ್ಲ .ರಣಬೀರ್ ಕಪೂರ್  ಅವರು ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆ, ಪ್ರೋಟೀನ್ ಶೇಕ್ ಮತ್ತು ಬ್ರೌನ್ ಬ್ರೆಡ್ ಅನ್ನು ಸೇವಿಸುತ್ತಾರೆ.

ಮಧ್ಯಾಹ್ನದ ಊಟದಲ್ಲಿ ಬ್ರೌನ್ ರೈಸ್, ಚಿಕನ್, ಬೇಳೆ ಮತ್ತು ಹಸಿರು ತರಕಾರಿಗಳನ್ನು ತಿನ್ನುತ್ತಾರೆ. ಸ್ನಾಕ್ಸ್‌ಗೆ ಅವರು ಒಣ ಹಣ್ಣುಗಳು ಮತ್ತು ಪ್ರೋಟೀನ್ ಶೇಕ್ ಅನ್ನುತೆಗೆದುಕೊಳ್ಳುತ್ತಾರೆ.  ರಾತ್ರಿ ಅವರು ತುಂಬಾ ಲಘುವಾದ ಭೋಜನವನ್ನು ತೆಗೆದುಕೊಳ್ಳುತ್ತಾರೆ.

ರಣಬೀರ್ ಅವರ ಚೀಟ್ ಡೇಗಳಲ್ಲಿ ಬರ್ಗರ್‌ಗಳನ್ನು ಇಷ್ಟಪಡುತ್ತಾರೆ ಮತ್ತು ಅವರ ಚೀಟ್ ಡೇ ಸಮಯದಲ್ಲಿ ಅವರು ತುಂಬಾ ಉತ್ಸಾಹದಿಂದ ತಿನ್ನುತ್ತಾರೆ ಎಂದು ಅವರ ತರಬೇತುದಾರ ಹೇಳಿದ್ದಾರೆ.
 

ಇನ್ನೂ ನಟನ ವರ್ಕೌಟ್‌ ಬಗ್ಗೆ ಹೇಳುವುದಾದರೆ, ರಣಬೀರ್‌ ಫಂಕ್ಷನಲ್‌ ಟ್ರೈನಿಂಗ್‌ ಮತ್ತು ವೇಯಿಟ್‌ ಟ್ರೈನಿಂಗ್‌ ಮೇಲೆ ಕೇಂದ್ರೀಕರಿಸುತ್ತಾರೆ . ಫಂಕ್ಷನಲ್‌ ಟ್ರೈನಿಂಗ್‌  ಸ್ಕ್ವಾಟ್‌ಗಳು, ಡೆಡ್‌ಲಿಫ್ಟ್‌ಗಳು ಮತ್ತು ಪುಲ್ ಅಪ್‌ಗಳಂತಹ ಸಾಮಾನ್ಯ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ  ಬಿಡುಗಡೆಯಾಗಲಿರುವ   ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟ ತನ್ನ ಪತ್ನಿ ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್‌ನಿಂದ ಹಿಡಿದು ಹಾಡುಗಳವರೆಗೆ ರಣಬೀರ್ ಮೊದಲಿಗಿಂತ ಸ್ಲಿಮ್ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.

Latest Videos

click me!