ಈ ವೇಳೆ ಆಲಿಯಾ ಭಟ್ ಗುಲಾಬಿ ಬಣ್ಣದ ಸೂಟ್ ಧರಿಸಿದ್ದರು.ಆದರೆ ಅವರನ್ನು ನೋಡಿದರೆ ಅವರಿಗೆ ಮದುವೆಯಾಗಿರುವಂತೆ ಕಾಣಿಸುತ್ತಿರಲಿಲ್ಲ. ಅವರ ಹಣೆಯಲ್ಲಿ ಸಿಂಧೂರ ಇರಲಿಲ್ಲ, ಅಥವಾ ಅವರ ಕುತ್ತಿಗೆಯಲ್ಲಿ ಮಂಗಳಸೂತ್ರ ಮತ್ತು ಯಲ್ಲಿ ಮದುವೆಯ ಬಳೆಯನ್ನು ಸಹ ಧರಿಸಿರಲಿಲ್ಲ.
ಆಲಿಯಾ ತುಂಬಾ ಸಿಂಪಲ್ ಲುಕ್‌ನಲ್ಲಿ ಯಾವುದೇ ಮೇಕಪ್ ಇಲ್ಲದೆ ಕಾಣಿಸಿಕೊಂಡು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಈ ಸಮಯದಲ್ಲಿ ಅವರು ಛಾಯಾಗ್ರಾಹಕರಿಗೆ ಪೋಸ್ ಕೊಟ್ಟಿದ್ದಾರೆ. ಆಲಿಯಾರ ಮುಖದಲ್ಲಿ ನವವಧುವಿನ ಕಳೆ ಎದ್ದು ಕಾಣುತ್ತಿತ್ತು.
ಕ್ಯಾಮರಾಮನ್ ಅವರನ್ನು ಮಿಸೆಸ್ ಕಪೂರ್ ಎಂದು ಕರೆಯುತ್ತಿದ್ದಾಗ, ಅವರ ಮುಖದಲ್ಲಿ ನಗು ಅರಳಿತು. ಅಂದಹಾಗೆ, ಆಲಿಯಾ ಅವರ ಪತಿ ರಣಬೀರ್ ಕಪೂರ್ ಕೂಡ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಸ್ಟುಡಿಯೋ ಹೊರಗಿನ ಅವರ ಹಲವು ಫೋಟೋಗಳು ವೈರಲ್ ಆಗುತ್ತಿವೆ.
ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ಅವರು ಈ ವಾರ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಅವರು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ರಣವೀರ್ ಸಿಂಗ್ ಜೊತೆಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರೀಕರಣ ಮಾಡಲಿದ್ದಾರೆ.
ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆಲಿಯಾ, ರಣವೀರ್ ಸಿಂಗ್, ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಮದುವೆಗೆ ಎರಡು ದಿನ ಮೊದಲು ಈ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಮುಂಬೈನಿಂದ ಹೊರ ಹೋಗಿದ್ದರು. ರಣವೀರ್ ಸಿಂಗ್ ಜೊತೆಗಿನ ಸೆಟ್‌ನಲ್ಲಿರುವ ಕೆಲವು ಚಿತ್ರಗಳು ವೈರಲ್ ಆಗಿವೆ.
ಮದುವೆಯ ನಂತರ, ದಂಪತಿಗಳು ಹನಿಮೂನ್‌ಗೆ ಹೋಗದಿರಲು ನಿರ್ಧರಿಸಿ ಕೆಲಸಕ್ಕೆ ಮರಳುತ್ತಿದ್ದಾರೆ.ಇಬ್ಬರೂ ಹನಿಮೂನ್‌ಗೆ ಹೋಗುವ ಯೋಜನೆಯನ್ನು ಮುಂದೂಡಿ ಮೊದಲು ತಮ್ಮ ಕೆಲಸದ ಕಮಿಟ್ಮೆಂಟ್‌ಗಳನ್ನು ಮುಗಿಸಲಿದ್ದಾರೆ.
5 ವರ್ಷಗಳ ಕಾಲ ಡೇಟಿಂಗ್ ಮಾಡಿದ ಆಲಿಯಾ ಮತ್ತು ರಣಬೀರ್ ಏಪ್ರಿಲ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.