ಈ ಕಾರಣಕ್ಕೆ ಟ್ರೋಲ್ ಆದ Sonam Kapoor ಪತಿ Anand Ahuja!
First Published | Mar 24, 2022, 4:53 PM ISTನಟಿ ಸೋನಂ ಕಪೂರ್ (Sonam Kapoor) ತಾಯಿಯಾಗಲಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ
ಫೋಟೋಗಳಲ್ಲಿ, ಅವರು ಕಪ್ಪು ಬಿಕಿನಿಯನ್ನು ಧರಿಸಿ ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿದ್ದಾರೆ. ಸೋನಂ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಸ
ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ತನ್ನ ಪ್ರೆಗ್ನೆಂಸಿ ಘೋಷಣೆಯ ನಂತರ ಮೊದಲ ಬಾರಿಗೆ, ಸೋನಂ ಬೇಬಿ ಬಂಪ್‌ನೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ವಾಸ್ತವವಾಗಿ, ಸೋನಂ ಅವರ ಪತಿ ಮುಂಬೈನಲ್ಲಿ ಹೊಸ ಅಂಗಡಿಯನ್ನು ತೆರೆದಿದ್ದಾರೆ. ಅನಿಲ್ ಕಪೂರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಈವೆಂಟ್‌ನಲ್ಲಿ ಸೋನಂ ಕಪೂರ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಂದೆಡೆ ಅವರ ಪತಿ ಟ್ರೋಲ್‌ಗೆ ಒಳಗಾಗಿದ್ದರು. ಆನಂದ್ ಅಹುಜಾ ಟ್ರೋಲ್ ಆಗಲು ಕಾರಣವೇನು ನೋಡಿ.