Salman ಸಹೋದರನ ಪತ್ನಿ Seema Sachdev ನೆಟ್‌ವರ್ಥ್‌ ಎಷ್ಟು ಗೊತ್ತಾ?

Published : May 14, 2022, 06:32 PM IST

ಅರ್ಬಾಜ್ ಖಾನ್(Arbaaz Khan) - ಮಲೈಕಾ ಅರೋರಾ (Malaika Arora) ನಂತರ ಸಲ್ಮಾನ್ ಖಾನ್ (Salman Khan)  ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ ನಡೆಯಲಿದೆ. ಸಲ್ಮಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್ (Sohail Khan)  ಮತ್ತು ಅವರ ಪತ್ನಿ ಸೀಮಾ ಸಚ್‌ದೇವ್ (Seema Sachdev)  ಅವರು ಶುಕ್ರವಾರ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಶುಕ್ರವಾರ ಇಬ್ಬರೂ ಮುಂಬೈನ ಕೌಟುಂಬಿಕ ನ್ಯಾಯಾಲಯದ ಹೊರಗೆ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ಸೋಹೈಲ್ ಖಾನ್ ಅವರ ಪತ್ನಿ  ಸೀಮಾ ಸಚ್‌ದೇವ್  ಅವರ ನಿವ್ವಳ ಮೌಲ್ಯ, ವೈಯಕ್ತಿಕ ಜೀವನ, ವೃತ್ತಿ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.

PREV
18
Salman  ಸಹೋದರನ ಪತ್ನಿ Seema Sachdev ನೆಟ್‌ವರ್ಥ್‌ ಎಷ್ಟು ಗೊತ್ತಾ?

ಶುಕ್ರವಾರ, 24 ವರ್ಷಗಳ ದಾಂಪತ್ಯದ ನಂತರ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಬಂದಿದೆ. 1998 ರಲ್ಲಿ ವಿವಾಹವಾದ ಈ ದಂಪತಿಗಳಿಗೆ ನಿರ್ವಾನ್ ಖಾನ್ ಮತ್ತು ಯೋಹಾನ್ ಖಾನ್ ಇಬ್ಬರು ಮಕ್ಕಳಿದ್ದಾರೆ. 
 

28
sohail khan

ಶುಕ್ರವಾರ, ಮೇ 13 ರಂದು, ಸೊಹೈಲ್ ಮತ್ತು ಸೀಮಾ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಹೊರಗೆ ಕಾಣಿಸಿಕೊಂಡ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿವೆ. ಈ ಸಮಯದಲ್ಲಿ ಸೊಹೈಲ್ ಕಪ್ಪು ಟೀ ಮತ್ತು ನೀಲಿ ಜೀನ್ಸ್ ಜೊತೆ ಮಾಸ್ಕ್‌  ಧರಿಸಿದ್ದರು, ಆದರೆ ಸೀಮಾ ಸಡಿಲವಾದ ಟೀ ಮತ್ತು ಬೀಜ್ ಸ್ಲಾಕ್‌ಗಳನ್ನು ಧರಿಸಿದ್ದರು.

38

ಸಲ್ಮಾನ್‌ ಖಾನ್‌ ಅವರ ಸಹೋದರ ನಟ ಸೊಹೈಲ್ ಖಾನ್ ಅವರ ಪತ್ನಿ ಸೀಮಾ ಸಚ್‌ದೇವ್ ಖಾನ್ ಅವರು ಪ್ರಸಿದ್ಧ ಸೆಲೆಬ್ರಿಟಿ ಸ್ಟೈಲಿಸ್ಟ್ ಮತ್ತು ಫ್ಯಾಷನ್ ಡಿಸೈನರ್. ಅವರು ಮುಂಬೈ ಮತ್ತು ದುಬೈನಲ್ಲಿ 'ಸೀಮಾ ಖಾನ್ ಸ್ಟೋರ್' ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದಾರೆ. ಸೀಮಾ ಅವರು 'ಬಾಂದ್ರಾ 190' ಫ್ಯಾಶನ್ ಲೈನ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಸೀಮಾ ತನ್ನ ಫ್ಯಾಶನ್ ವಿನ್ಯಾಸಗಳಿಗಾಗಿ ಬ್ಯುಸಿನೆಸ್‌ನಲ್ಲಿ ಹೆಸರುವಾಸಿಯಾಗಿದ್ದಾರೆ. 

48

ದೆಹಲಿಯಲ್ಲಿ ಮಾರ್ಚ್ 8, 1977 ರಂದು ಪಂಜಾಬಿ ಹಿನ್ನೆಲೆಯಲ್ಲಿ ಜನಿಸಿದ ಸೀಮಾ ಅವರ ತಂದೆ ಅರ್ಜುನ್ ಸಜ್ದೇಹ್ ಅವರು ಕಾರ್ನರ್‌ಸ್ಟೋನ್ ಸ್ಪೋರ್ಟ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅವರನ್ನು ಕಾರ್ಯನಿರ್ವಾಹಕೇತರ ನಿರ್ದೇಶಕ.  ಕಿರಣ್ ಸಜ್ದೆ ಅವರ ತಾಯಿಯ ಹೆಸರು. 

58

ಸೀಮಾಗೆ ಒಬ್ಬ ಸಹೋದರಿ ಮತ್ತು ಸಹೋದರ ಇದ್ದಾರೆ. ಆಕೆಯ ಸಹೋದರ, ಬಂಟಿ ಸಜ್ದೇಹ್, ಕಾರ್ನರ್‌ಸ್ಟೋನ್ ಸ್ಪೋರ್ಟ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ರಿಚಾ ಸಜ್ದೆ ಅವಳ ಸಹೋದರಿಯ ಹೆಸರು.
 

68

ಸೊಹೈಲ್ ಮತ್ತು ಸೀಮಾ ಪಾರ್ಟಿಯೊಂದರಲ್ಲಿ ಭೇಟಿಯಾದರು. ಅವರು ಪರಸ್ಪರ ಆಕರ್ಷಿತರಾದರು ಮತ್ತು ಅಂತಿಮವಾಗಿ ಪ್ರೀತಿಯಲ್ಲಿ ಸಿಲುಕಿದರು. ಅವರು ಶೀಘ್ರದಲ್ಲೇ ಮದುವೆಯಾಗಲು ಯೋಜಿಸಿದ್ದರು. ಈ ಜೋಡಿಯು 1998 ರಲ್ಲಿ ದೇವಸ್ಥಾನದಲ್ಲಿ ರಹಸ್ಯವಾಗಿ ವಿವಾಹವಾದರು. ಸೋಹೈಲ್ ಅವರ ಕುಟುಂಬವು ಅವರ ಮದುವೆಯ ಬಗ್ಗೆ ತಿಳಿದಾಗ, ಅವರು ಸೀಮಾರನ್ನು ಸ್ವಾಗತಿಸಿದರು.ಈ ದಂಪತಿಗಳ  ಮೊದಲ ಮಗ ನಿರ್ವಾನ್ ಖಾನ್  2000 ರಲ್ಲಿ ಜನಿಸದರೆ,   ಅವರ ಎರಡನೇ ಮಗ ಯೋಹಾನ್ 2011 ರಲ್ಲಿ IVF ಬಾಡಿಗೆ ತಾಯ್ತನದ ಮೂಲಕ ಜನಿಸಿದರು. 

78

ಸೀಮಾ ಸಚ್‌ದೇವ್ ಖಾನ್ ಅವರ  ನಿವ್ವಳ ಮೌಲ್ಯವು  ಹಲವು ಮಿಲಿಯನ್ ಡಾಲರರ್‌ಗಳಲ್ಲಿದೆ ಎಂದು ವರದಿಯಾಗಿದೆ. ಅವರು ಬಾಲಿವುಡ್‌ನ ಶ್ರೀಮಂತ ಪತ್ನಿಯರಲ್ಲಿ ಒಬ್ಬರು. ಅವರು ಅತ್ಯಂತ ಶ್ರೀಮಂತ ಜೀವನಶೈಲಿಯನ್ನು ಹೊಂದಿದ್ದಾರೆ. 

88

ಅವರು ಕಲ್ಲಿಸ್ಟಾ ಎಂಬ ಬ್ಯೂಟಿ ಸ್ಪಾ ಮತ್ತು ಸಲೂನ್ ಅನ್ನು ಹೊಂದಿದ್ದಾರೆ. ಸೀಮಾ ಸಚ್‌ದೇವ್ ಖಾನ್ ಕೊನೆಯದಾಗಿ ನೆಟ್‌ಫ್ಲಿಕ್ಸ್ ಶೋ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ.

Read more Photos on
click me!

Recommended Stories