ಪತ್ನಿ ಮಕ್ಕಳ ಜೊತೆ ದುಬೈಯಲ್ಲಿ ವಾಸಿಸುತ್ತಿರುವ ಕಾರಣ ಬಹಿರಂಗ ಪಸಿಡಿದ Sanjay Dutt

Published : May 14, 2022, 06:30 PM IST

ಪ್ರಸ್ತುತ ಬಾಲಿವುಡ್‌ ನಟ ಸಂಜಯ್ ದತ್ (Sanjay Dutt) ಅವರು ''KGF Chapter 2'ನಲ್ಲಿ ಅಧೀರ ಪಾತ್ರದಲ್ಲಿ ನಟಿಸಿ ಸುದ್ದಿಯಾಗಿದ್ದಾರೆ.  ಇತ್ತೀಚೆಗೆ ತಮ್ಮ ಪತ್ನಿ ಮಾನ್ಯತಾ ಮತ್ತು ಅವಳಿಗಳಾದ ಇಕ್ರಾ ಮತ್ತು ಶಹರಾನ್ ಮುಂಬೈನಿಂದ ದುಬೈಗೆ ಶಿಫ್ಟ್ ಆಗಿರುವ ಕಾರಣವನ್ನು ಹಂಚಿಕೊಂಡಿದ್ದಾರೆ. ಸಂಜಯ್ ದತ್ ಅವರ ಕುಟುಂಬ, ಅಂದರೆ ಅವರ ಪತ್ನಿ ಮತ್ತು 11 ವರ್ಷದ ಇಬ್ಬರೂ ಮಕ್ಕಳು ಕಳೆದ ಎರಡು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಸಂಜಯ್ ದತ್ ಅವರನ್ನು ಮುಂಬೈನಲ್ಲಿ ಒಂಟಿಯಾಗಿ ಬಿಟ್ಟು ಪತ್ನಿ ಮಾನ್ಯತಾ ಮಕ್ಕಳೊಂದಿಗೆ ದುಬೈಗೆ ಏಕೆ ಹೋಗಿದ್ದರು ಎಂದು ನಟ ನಿಜವಾದ ಕಾರಣವನ್ನು ಹೇಳಿದ್ದಾರೆ.

PREV
16
  ಪತ್ನಿ ಮಕ್ಕಳ ಜೊತೆ ದುಬೈಯಲ್ಲಿ ವಾಸಿಸುತ್ತಿರುವ ಕಾರಣ ಬಹಿರಂಗ ಪಸಿಡಿದ Sanjay Dutt
Image: Sanjay Dutt/Instagram

2020 ರ ಆರಂಭದಲ್ಲಿ  ಫಸ್ಟ್‌ ಲಾಕ್‌ಡೌನ್‌ಗೆ ಮೊದಲು ಸಂಜಯ್‌ ದತ್‌ ಪತ್ನಿ ಮಾನ್ಯಾತಾ ಮಕ್ಕಳ ಜೊತೆ ದುಬೈಗೆ ಸ್ಥಳಾಂತರಗೊಂಡರು. ಅಂದಿನಿಂದ ಸಂಜಯ್ ದತ್ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. 
 

26

ಆದರೆ, ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಮಾತನಾಡುತ್ತಾರೆ. ಯಾವುದೇ ಪ್ಲಾನಿಂಗ್ ಅಡಿಯಲ್ಲಿ ಕುಟುಂಬ ದುಬೈಗೆ ಹೋಗಿಲ್ಲ ಎಂದು ಸಂಜಯ್‌ ಹೇಳಿದ್ದಾರೆ

36

ಸಂಜಯ್ ದತ್ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡುತ್ತಾ ಮಾನ್ಯತಾ, ಇಕ್ರಾ ಮತ್ತು ಶಹರಾನ್ ಯಾವುದೇ ಯೋಜನೆ ಅಡಿಯಲ್ಲಿ ದುಬೈಗೆ ಸ್ಥಳಾಂತರಗೊಂಡಿಲ್ಲ. ಆದರೆ ಅವರ ಸಂತೋಷವು ಹೆಚ್ಚು ಮುಖ್ಯವಾಗಿದೆ. ತಮ್ಮ ಕುಟುಂಬ ದುಬೈನಲ್ಲಿ ವಾಸಿಸಲು ಇಷ್ಟಪಡುತ್ತದೆ ಎಂದು ಸಂಜು ಹೇಳುತ್ತಾರೆ. 

46

ಅವರ ಮಕ್ಕಳ ಶಾಲೆ ಇದೆ, ಅವರ ಚಟುವಟಿಕೆಗಳು ಅಲ್ಲಿವೆ. ಅಷ್ಟೇ ಅಲ್ಲ ಪತ್ನಿಯ ವ್ಯವಹಾರವೂ ಅಲ್ಲೇ ಸೆಟ್ಲ್ ಆಗ್ತಿದೆ ಎಂದು  ಹೇಳಿದ್ದಾರೆ ಮತ್ತು  ಸಂಜಯ್ ಪ್ರಕಾರ, ಅವರು ತಮ್ಮ ಕೆಲಸದ ಬದ್ಧತೆಗಳಲ್ಲಿ ಬ್ಯುಸಿ ಇಲ್ಲದರುವಾಗ ಅವರು ತಮ್ಮ ಹೆಚ್ಚಿನ ಸಮಯವನ್ನು ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ಕಳೆಯುತ್ತಾರೆ. 

56

ನಿಮ್ಮ ಸಂಸಾರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದಾಗ, ಕುಟುಂಬದ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತೇನೆ ಎಂದು ಹೇಳಿದರು. 'ನನ್ನ ಮಗಳು ಪಿಯಾನೋ ಕಲಿಯುತ್ತಿದ್ದಾಳೆ. ಅವಳು ಉತ್ತಮ ಸ್ಪಿನ್ನರ್ ಮತ್ತು ಜಿಮ್ನಾಸ್ಟಿಕ್ಸ್ ಕೂಡ ಮಾಡುತ್ತಿದ್ದಾಳೆ. ನನ್ನ ಮಗ ಜೂನಿಯರ್ ವೃತ್ತಿಪರ ಫುಟ್ಬಾಲ್ ತಂಡಕ್ಕಾಗಿ ಆಡುತ್ತಾನೆ. ಅವರ ಸಂತೋಷವು ಎಲ್ಲಕ್ಕಿಂತ ಮಿಗಿಲಾಗಿದೆ' ಎಂದು ಸಂಜಯ್ ಹೇಳಿದರು

66

ಜೂನ್ 3 ರಂದು ಬಿಡುಗಡೆಯಾಗಲಿರುವ 'ಪೃಥ್ವಿರಾಜ್' ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರಲ್ಲದೆ ಮಾನವ್ ವಿಜ್ ಮತ್ತು ಸೋನು ಸೂದ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಅವರ ಇತರ ಚಿತ್ರಗಳಲ್ಲಿ 'ಶಂಶೇರಾ', 'ದಿ ಗುಡ್ ಮಹಾರಾಜ' ಮತ್ತು 'ಘುಡ್ಚಾಧಿ' ಸೇರಿವೆ.

Read more Photos on
click me!

Recommended Stories