ಐಶ್ವರ್ಯಾ ರೈ ತರಹ ಇರೋದಕ್ಕೇ ಸಲ್ಮಾನ್ ಖಾನ್ ಚಾನ್ಸ್ ಕೊಟ್ರಾ? ಇಷ್ಟು ವರ್ಷದ ಬಳಿಕ ಸೀಕ್ರೆಟ್ ಬಿಚ್ಚಿಟ್ಟ ಸ್ನೇಹಾ ಉಲ್ಲಾಳ್!

Published : Mar 16, 2026, 03:54 PM IST

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಪ್ರೇಮ ಪುರಾಣ ಮುರಿದು ಬಿದ್ದ ನಂತರ, ಸಲ್ಮಾನ್ ಬೇಕಂತಲೇ ಐಶ್ವರ್ಯಾ ಅವರಂತೆಯೇ ಇರುವ ಸ್ನೇಹಾ ಉಲ್ಲಾಳ್ ಅವರನ್ನು ಕರೆತಂದರು ಎಂಬ ದೊಡ್ಡ ವದಂತಿ ಬಾಲಿವುಡ್‌ನಲ್ಲಿ ಹಬ್ಬಿತ್ತು. ಇದಕ್ಕೆ ಇಷ್ಟು ವರ್ಷಗಳ ಬಳಿಕ ಸ್ನೇಈ ಸೀಕ್ರೆಟ್ ರಿವೀಲ್ ಆಗಿದೆ.

PREV
17

ಬಾಲಿವುಡ್‌ನ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರಂತೆಯೇ ಕಾಣುವ ನಟಿ ಸ್ನೇಹಾ ಉಲ್ಲಾಳ್ (Sneha Ullal) ಬಗ್ಗೆ ನಿಮಗೆಲ್ಲಾ ನೆನಪಿರಬಹುದು. 2005ರಲ್ಲಿ ಸಲ್ಮಾನ್ ಖಾನ್ ನಾಯಕತ್ವದ 'ಲಕ್ಕಿ: ನೋ ಟೈಮ್ ಫಾರ್ ಲವ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸ್ನೇಹಾ ಉಲ್ಲಾಳ್, ಅಂದು ರಾತ್ರೋರಾತ್ರಿ ದೊಡ್ಡ ಸುದ್ದಿಯಾಗಿದ್ದರು. ಅದಕ್ಕೆ ಮುಖ್ಯ ಕಾರಣ ಅವರ ನಟನೆಗಿಂತ ಹೆಚ್ಚಾಗಿ, ಅವರು ಐಶ್ವರ್ಯಾ ರೈ ಅವರ ಪ್ರತಿರೂಪದಂತೆ (Doppelganger) ಕಾಣುತ್ತಿದ್ದುದು! ಇದೀಗ ಸುಮಾರು 19 ವರ್ಷಗಳ ನಂತರ, ಸ್ನೇಹಾ ಉಲ್ಲಾಳ್ ಈ ಹೋಲಿಕೆಗಳ ಬಗ್ಗೆ, ಸಲ್ಮಾನ್ ಖಾನ್ ಅವರ ವರ್ತನೆ ಬಗ್ಗೆ ಮತ್ತು ಐಶ್ವರ್ಯಾ ರೈ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

27

"ಐಶ್ವರ್ಯಾ ರೈ ತರಹ ಇದ್ದಿದ್ದಕ್ಕೇ ಸಲ್ಮಾನ್ ಚಾನ್ಸ್ ಕೊಟ್ಟರಾ?" : ಸ್ನೇಹಾ ಸ್ಪಷ್ಟನೆ

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಪ್ರೇಮ ಪುರಾಣ ಮುರಿದು ಬಿದ್ದ ನಂತರ, ಸಲ್ಮಾನ್ ಬೇಕಂತಲೇ ಐಶ್ವರ್ಯಾ ಅವರಂತೆಯೇ ಇರುವ ಸ್ನೇಹಾ ಉಲ್ಲಾಳ್ ಅವರನ್ನು ಕರೆತಂದರು ಎಂಬ ದೊಡ್ಡ ವದಂತಿ ಬಾಲಿವುಡ್‌ನಲ್ಲಿ ಹಬ್ಬಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಸ್ನೇಹಾ, "ಆ ಸಮಯದಲ್ಲಿ ಪಿಆರ್ (PR) ಚಟುವಟಿಕೆಗಳು ಆ ರೀತಿ ಇದ್ದವು. ನಾನು ಸಲ್ಮಾನ್ ಖಾನ್ ಜೊತೆ ಚಿತ್ರರಂಗಕ್ಕೆ ಬರುತ್ತಿದ್ದರಿಂದ ಸಹಜವಾಗಿಯೇ ಜನ ನನ್ನನ್ನು ಹಾಗೆ ಗುರುತಿಸುತ್ತಿದ್ದರು. ಆದರೆ ಆ ಹೋಲಿಕೆಗಳು ನನಗೆ ಎಂದಿಗೂ ತೊಂದರೆ ಕೊಡಲಿಲ್ಲ. ಆಗ ನನಗೆ ವಯಸ್ಸು ಚಿಕ್ಕದಾಗಿತ್ತು ಮತ್ತು ನನ್ನಲ್ಲಿ ಯಾವುದೇ ಅಹಂ ಇರಲಿಲ್ಲ. ನಾನು ಎಂದಿಗೂ ನನ್ನ ಸೌಂದರ್ಯದ ಬಗ್ಗೆ ಅತಿಯಾಗಿ ಯೋಚಿಸಿದವಳಲ್ಲ," ಎಂದು ಹೇಳಿದ್ದಾರೆ.

37

"ನನ್ನನ್ನು ದ್ವೇಷಿಸಬೇಡಿ" ಎಂದು ಐಶ್ವರ್ಯಾ ಬಳಿ ಕೇಳಿಕೊಂಡಿದ್ದ ಸ್ನೇಹಾ!

ಐಶ್ವರ್ಯಾ ರೈ ಅವರನ್ನು ಭೇಟಿಯಾದ ಆ ಕ್ಷಣವನ್ನು ನೆನಪಿಸಿಕೊಂಡ ಸ್ನೇಹಾ, "ನಾನು ಐಶ್ವರ್ಯಾ ಅವರನ್ನು ಒಮ್ಮೆ ಭೇಟಿಯಾದಾಗ ಅವರು ತುಂಬಾ ಪ್ರೀತಿಯಿಂದ ಮಾತನಾಡಿಸಿದರು. 'ಬಾಲಿವುಡ್ ಕುಟುಂಬಕ್ಕೆ ನಿಮಗೆ ಸ್ವಾಗತ' ಎಂದು ಅವರು ಹೇಳಿದರು. ಆದರೆ ಆ ಸಮಯದಲ್ಲಿ ಮಾಧ್ಯಮಗಳು ನನ್ನನ್ನು ಅವರ ಜೊತೆ ಅತಿಯಾಗಿ ಹೋಲಿಕೆ ಮಾಡುತ್ತಿದ್ದವು. ಇದರಿಂದ ಅವರಿಗೆ ಎಲ್ಲಾದರೂ ಬೇಸರವಾಗಿದೆಯೇ ಅಥವಾ ಸಿಟ್ಟು ಬಂದಿದೆಯೇ ಎಂಬ ಭಯ ನನಗಿತ್ತು. ಹಾಗಾಗಿ ನಾನು ಅವರಲ್ಲಿ ಕ್ಷಮೆ ಕೇಳುತ್ತಾ, 'ದಯವಿಟ್ಟು ನನ್ನನ್ನು ದ್ವೇಷಿಸಬೇಡಿ' ಎಂದು ಹೇಳಿದ್ದೆ. ಆದರೆ ಅವರು ತುಂಬಾ ದೊಡ್ಡ ಗುಣದವರು, ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು," ಎಂದು ನೆನಪಿಸಿಕೊಂಡಿದ್ದಾರೆ.

47

ಸಲ್ಮಾನ್ ಖಾನ್ ವರ್ತನೆ ಹೇಗಿತ್ತು?

ಸಲ್ಮಾನ್ ಖಾನ್ ಅವರ ಬಗ್ಗೆ ಇರುವ 'ಆಟಿಟ್ಯೂಡ್' ಬಿಂಬದ ಬಗ್ಗೆ ಮಾತನಾಡಿದ ಸ್ನೇಹಾ, "ಶೂಟಿಂಗ್ ಸಮಯದಲ್ಲಿ ಸಲ್ಮಾನ್ ನನಗೆ ತುಂಬಾ ಬೆಂಬಲ ನೀಡಿದರು. ನಾನು ಹೊಸಬಳಾಗಿದ್ದರೂ ಅವರು ಒಮ್ಮೆಯೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಸಾಮಾನ್ಯವಾಗಿ ಜನ ಸಲ್ಮಾನ್ ಖಾನ್ ಬಗ್ಗೆ ಏನು ಹೇಳುತ್ತಾರೋ ಆ ರೀತಿಯ ನಡವಳಿಕೆ ಅಥವಾ ಆಟಿಟ್ಯೂಡ್ ಅವರಲ್ಲಿ ನನಗೆ ಕಾಣಿಸಲಿಲ್ಲ. ಅವರು ತುಂಬಾ ತಾಳ್ಮೆಯಿಂದ ನನ್ನನ್ನು ನಡೆಸಿಕೊಂಡರು," ಎಂದಿದ್ದಾರೆ.

57

ಅಕಸ್ಮಾತ್ ಆಗಿ ಬಂದ ನಟನಾ ಅವಕಾಶ:

ನಟಿಯಾಗುವ ಬಗ್ಗೆ ಸ್ನೇಹಾ ಅವರಿಗೆ ಯಾವುದೇ ಆಸೆ ಇರಲಿಲ್ಲವಂತೆ. ಅವರು ಕಾಲೇಜಿನಲ್ಲಿದ್ದಾಗ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಗೆಳೆಯರು ಇವರನ್ನು ಗಮನಿಸಿ ನಂತರ 'ಲಕ್ಕಿ' ಸಿನಿಮಾದ ಆಡಿಷನ್‌ಗೆ ಕರೆದರಂತೆ. "ನಾನು ಯಾವತ್ತೂ ನಟಿಯಾಗಬೇಕು ಎಂದು ಅಂದುಕೊಂಡವಳಲ್ಲ. ಐಶ್ವರ್ಯಾ ರೈ ಮಿಸ್ ವರ್ಲ್ಡ್ ಆದಾಗ, ನನ್ನ ಸಣ್ಣ ಜಗತ್ತಿನಲ್ಲಿ ಜನರು ನನ್ನನ್ನು ಅವರ ಹಾಗೆಯೇ ಇದ್ದೀಯಾ ಎಂದು ಹೊಗಳುತ್ತಿದ್ದರು.

67

ನಾನು ಒಬ್ಬ 'ಟಾಂಬಾಯ್' ತರಹ ಇದ್ದವಳು, ಗ್ಲಾಮರ್ ಜಗತ್ತಿನ ಬಗ್ಗೆ ನನಗೆ ಆಸಕ್ತಿಯೇ ಇರಲಿಲ್ಲ. ಆದರೆ ವಿಧಿ ನನ್ನನ್ನು ಇಲ್ಲಿಗೆ ಕರೆತಂದಿತು," ಎಂದು ತಮ್ಮ ಸಿನಿ ಪಯಣದ ಆರಂಭದ ಬಗ್ಗೆ ಸ್ನೇಹಾ ಉಲ್ಲಾಳ್ ಹೇಳಿಕೊಂಡಿದ್ದಾರೆ.

77

ಒಟ್ಟಿನಲ್ಲಿ, ಐಶ್ವರ್ಯಾ ರೈ ಅವರ ಹೋಲಿಕೆಯಿಂದಲೇ ಗುರುತಿಸಿಕೊಂಡರೂ, ಸ್ನೇಹಾ ಉಲ್ಲಾಳ್ ತಮ್ಮ ವಿನಮ್ರತೆಯಿಂದ ಜನರ ಮನಗೆದ್ದಿದ್ದಾರೆ. ಸದ್ಯ ಈ ಸಂದರ್ಶನದ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories