ಈ ಕಾರಣಕ್ಕಾಗಿ 'ದಿಲ್ ಚಾಹ್ತಾ ಹೈ' ಚಿತ್ರವನ್ನು ನಿರಾಕರಿಸಿದ್ದರು ಸ್ಮೃತಿ ಇರಾನಿ!

First Published Apr 6, 2024, 3:00 PM IST

ಬೀದಿಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಮೆಕ್ ಡೊನಾಲ್ಡ್ಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವವರೆಗೆ ಸ್ಮೃತಿ ಇರಾನಿ ಕಷ್ಟ ಪಟ್ಟು ಮೇಲೆ ಬಂದವರು. ನಟನೆಯಲ್ಲಿ ಯಶಸ್ಸಿನ ಉತ್ತುಂಗ ಏರಿದ್ದ ಅವರು ಈ ಸಂದರ್ಭಗಳನ್ನು ಸ್ಮರಿಸಿಕೊಂಡಿದ್ದಾರೆ. 

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿಯವರದು ಬಹಳ ವಿಶೇಷ ಹಿನ್ನೆಲೆ. ಆಕೆ ಕಷ್ಟ ಪಟ್ಟು ಮೇಲೆ ಬಂದವರು.
 

smriti irani

ಒಂದು ಕಾಲದಲ್ಲಿ ಸ್ಮೃತಿ ಇರಾನಿ ಬೀದಿಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುತ್ತಿದ್ದರು. ನಂತರದಲ್ಲಿ ಮೆಕ್ ಡೊನಾಲ್ಡ್ಸ್‌ನಲ್ಲಿ ಕ್ಲೀನರ್ ಆಗಿಯೂ ಕೆಲಸ ಮಾಡುತ್ತಿದ್ದರು.

smriti irani

ಮಾಡೆಲ್ ಆಗಿ ಕೆಲಸ ಮಾಡಿದ ಸ್ಮೃತಿ ಮಿಸ್ ಇಂಡಿಯಾ 1998ರ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಅವರ ಅದೃಷ್ಟ ಕೈ ಹಿಡಿದಿದ್ದು ಹಿಂದಿ ಧಾರಾವಾಹಿ ಲೋಕ ಪ್ರವೇಶಿಸಿದಾಗ.

ಏಕ್ತಾ ಕಪೂರ್ ಅವರ ಹಿಟ್ ಶೋ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'ಯಲ್ಲಿ ಅವರು 'ತುಳಸಿ' ಪಾತ್ರವನ್ನು ಪಡೆದರು. ಇದರಿಂದ ಅವರ ಫೇಸ್‌ವ್ಯಾಲ್ಯೂ ಬದಲಾಯಿತು.

2004 ರಿಂದ, ಸ್ಮೃತಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಭಾರತೀಯ ದೂರದರ್ಶನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.

ಹಾಗಿದ್ದೂ, ಅವರು ಸಾಕಷ್ಟು ದುಡ್ಡಿದೆ ಎಂದು ತಿಳಿದಿದ್ದರೂ ಪಾನ್ ಮಸಾಲಾ ಜಾಹೀರಾತು ಮಾಡಲು ಒಪ್ಪಲಿಲ್ಲ, ಮದುವೆಗಳಿಗೆ ಹೋಗಲು ಒಪ್ಪಲಿಲ್ಲ. ಇದಕ್ಕೆ ಅವರ ಮನಃಸಾಕ್ಷಿ ಒಪ್ಪುತ್ತಿರಲಿಲ್ಲವಂತೆ. ಆದರೆ, ಈ ನಿರ್ಧಾರಗಳಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿರುವುದಾಗಿ ಸ್ಮೃತಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಬಾಲಿವುಡ್‌ನ ಅತಿ ಜನಪ್ರಿಯ ಚಿತ್ರಗಳಲ್ಲೊಂದಾದ 'ದಿಲ್ ಚಾಹ್ತಾ ಹೈ' ಚಿತ್ರದ ಆಡಿಷನ್‌ಗೆ ಕರೆ ಬಂದಿತ್ತಂತೆ. ಆದರೆ, ಇದನ್ನು ಕೂಡಾ ಸ್ಮೃತಿ ನಿರಾಕರಿಸಿದ್ದಾರೆ. ಅದಕ್ಕೇನು ಕಾರಣ ಗೊತ್ತೇ?

ಗೌರವಾನ್ವಿತ ನಟಿ ಎಂದು ಗುರುತಿಸಿಕೊಳ್ಳುವ ಇಚ್ಛೆಗಾಗಿ ದಿಲ್ ಚಾಹ್ತಾ ಹೈ ಚಿತ್ರವನ್ನು ನಿರಾಕರಿಸಿದ್ದೇನೆ ಎಂದು ಸ್ಮೃತಿ ಇರಾನಿ ಬಹಿರಂಗಪಡಿಸಿದ್ದಾರೆ. ಇದು ಪ್ರೀತಿ ಜಿಂಟಾ ಪಾತ್ರವಲ್ಲ, ಬದಲಿಗೆ ಮತ್ತೊಂದು ಮುಖ್ಯ ಪಾತ್ರವಾಗಿತ್ತಂತೆ.

ಆದರೆ, ಸ್ಮೃತಿ ಮರ ಸುತ್ತುವಂಥ ನಟಿ ನಾನಲ್ಲ. ಅಂಥ ಪಾತ್ರಗಳಲ್ಲಿ ನಟನೆ ಮಾಡಿ ಕುಟುಂಬಕ್ಕೆ ಮುಜುಗರ ತರುವುದಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದರಂತೆ. ಅಲ್ಲದೆ ಆ ಸಮಯದಲ್ಲಿ ಅವರು ಮಗು ಹೊಂದುವ ನಿರ್ಧಾರ ಮಾಡಿದ್ದರಂತೆ. 

ಮೆಕ್ ಡೊನಾಲ್ಡ್ಸ್ ಕ್ಲೀನರ್ ಆಗಿ ಗಳಿಸಿದ್ದಿಷ್ಟು..
ಈ ಹಿಂದೆ, ಕರ್ಲಿ ಟೇಲ್ಸ್‌ನೊಂದಿಗಿನ ಸಂವಾದದಲ್ಲಿ, ಸ್ಮೃತಿ ಇರಾನಿ ಅವರು ಮ್ಯಾಕ್ ಡೊನಾಲ್ಡ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಸಮಯದ ಬಗ್ಗೆ ಮಾತನಾಡಿದ್ದರು. ಆಗ ತಿಂಗಳಿಗೆ 1800 ರೂ. ಪಡೆಯುತ್ತಿದ್ದುದಾಗಿ ಇರಾನಿ ತಿಳಿಸಿದ್ದಾರೆ. ಈ ಹಣವನ್ನು ಧಾರಾವಾಹಿಯಲ್ಲಿ ಪ್ರಥಮ ಅವಕಾಶದಲ್ಲೇ ದಿನವೊಂದಕ್ಕೆ ಗಳಿಸುತ್ತಿದ್ದರಂತೆ ಸ್ಮೃತಿ. 

ಮಗು ಹುಟ್ಟಿದ ಕೇವಲ 3 ದಿನದ ಬಳಿಕ ನಟನೆಗೆ ಮರಳಿದ್ದಾಗಿ ಸ್ಮೃತಿ ಹೇಳಿದ್ದು, ಇದಕ್ಕೆ ಬಡತನವೊಂದೇ ಕಾರಣವಾಗಿತ್ತು ಎಂದೂ ಅವರು ವಿವರಿಸಿದ್ದಾರೆ. 

click me!