ಸಲ್ಮಾನ್‌ ಖಾನ್‌ - ಐಶ್ವರ್ಯಾ ರೈ ಪ್ರೀತಿ ಬಗ್ಗೆ ಶಾಕಿಂಗ್‌ ವಿಷಯ ಬಹಿರಂಗಪಡಿಸಿದ ಹಮ್ ದಿಲ್ ದೇ ಚುಕೇ ಸನಮ್ ಸಹ ನಟಿ

Published : May 05, 2024, 04:12 PM IST

ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ಬಾಲಿವುಡ್‌ ಅತ್ಯಂತ ಜನಪ್ರಿಯ ಮಾಜಿ ಪ್ರೇಮಿಗಳು. ಇವರ ಪ್ರೇಮಕಥೆ ಮುರಿದು, ಇಬ್ಬರೂ  ಜೀವನದಲ್ಲಿ ಸಾಕಷ್ಟು ಮುಂದುವರೆದರೂ ಸಹ ಇಂದಿಗೂ ಆಗಾಗ ಚರ್ಚೆಯಾಗುತ್ತಲೇ. ಇರುತ್ತದೆ. ಈಗ ಮತ್ತೊಮ್ಮ ಸಲ್ಮಾನ್‌ ಮತ್ತು ಐಶ್ವರ್ಯಾರ ಲವ್‌ ಸ್ಟೋರಿ ಮುನ್ನಲೆಗೆ ಬಂದಿದೆ. ಇವರ ಹಮ್ ದಿಲ್ ದೇ ಚುಕೇ ಸನಮ್' ಸಿನಿಮಾದ ಕೋಸ್ಟಾರ್‌ ಸ್ಮಿತಾ ಜಯಕರ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಸಲ್ಮಾನ್‌ ಮತ್ತು ಐಶ್ವರ್ಯಾ ರೈ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.   

PREV
111
ಸಲ್ಮಾನ್‌ ಖಾನ್‌ - ಐಶ್ವರ್ಯಾ ರೈ ಪ್ರೀತಿ ಬಗ್ಗೆ ಶಾಕಿಂಗ್‌ ವಿಷಯ ಬಹಿರಂಗಪಡಿಸಿದ ಹಮ್ ದಿಲ್ ದೇ ಚುಕೇ ಸನಮ್ ಸಹ ನಟಿ

ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ಒಂದೇ ಒಂದು ಸಿನಿಮಾವನ್ನು ಒಟ್ಟಿಗೆ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದ  ಬಾಲಿವುಡ್‌ ಜೋಡಿ.

211

'ಹಮ್ ದಿಲ್ ದೇ ಚುಕೇ ಸನಮ್' ನಂತಹ ಸೂಪರ್‌ಹಿಟ್ ಚಲನಚಿತ್ರವನ್ನು ಮಾಡಿದ ಅವರ ಜೋಡಿಯು ಹಿಟ್ ಆಯಿತು. ಸಲ್ಮಾನ್ ಮತ್ತು ಐಶ್ವರ್ಯಾ ಲವ್ ಸ್ಟೋರಿ ಕೂಡ ಇಲ್ಲೇ ಶುರುವಾಯಿತು ಎನ್ನಲಾಗಿದೆ. 

311

ಹಮ್ ದಿಲ್ ದೇ ಚುಕೇ ಸನಮ್' ಚಿತ್ರದಲ್ಲಿ ಅವರ ಜೊತೆ ಕೆಲಸ  ಮಾಡಿದವರು ಸಲ್ಮಾನ್‌ ಮತ್ತು ಐಶ್ವರ್ಯಾ ಕೆಮಿಸ್ಟ್ರಿ ನೋಡಿ ಇಲ್ಲಿಂದ ಅವರ ಲವ್ ಸ್ಟೋರಿ ಶುರುವಾಗಿದೆ ಎಂದು ಹೇಳಿದ್ದಾರೆ.  

411

ಹಮ್ ದಿಲ್ ದೇ ಚುಕೇ ಸನಂ  ಚಿತ್ರದಲ್ಲಿ ಐಶ್ವರ್ಯಾ ರೈ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಮಿತಾ ಜಯಕರ್ ಅವರು ಫಿಲ್ಮಿ ಬೀಟ್‌ಗೆ ನೀಡಿದ ಸಂದರ್ಶನದಲ್ಲಿ  ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. 

511

'ಆಂಖೋನ್ ಕಿ ಗುಸ್ತಖಿಯಾನ್' ಹಾಡಿನ ಚಿತ್ರೀಕರಣದ ವೇಳೆ ಒಂದು ಘಟನೆ ಸಂಭವಿಸಿದೆ ಮತ್ತು ಇಡೀ ಸೆಟ್‌ ಮೌನವಾಗಿತ್ತು  ನಂತರ ವಿಷಯವನ್ನು ಹೇಗೋ ನಿಭಾಯಿಸಲಾಯಿತು ಎಂದು ಎಂದು ಸ್ಮಿತಾ ಹೇಳಿದರು.

611

'ನಾವು ಒಟ್ಟಿಗೆ ಆ ಸಿನಿಮಾ ಮಾಡಿದ್ದೇವೆ. ಅದು ಅದ್ಭುತ ದಿನಗಳು. ಸಲ್ಮಾನ್ ಸ್ವಭಾವ ತುಂಬಾ  ಚೆನ್ನಾಗಿತ್ತು ಆದರೆ ಕೋಪ ಬಂದಾಗ ಎಲ್ಲರೂ ಸುಮ್ಮನಾಗುತ್ತಿದ್ದರು. ಸಂಜಯ್ ಜಿ ಆ ಹಾಡಿನ ದೃಶ್ಯಗಳನ್ನು ಎಲ್ಲರಿಗೂ ವಿವರಿಸಿದರು' ಎಂದು ಸ್ಮಿತಾ ಹೇಳಿದರು.
 

711

'ಈ ಹಾಡು ಸಲ್ಮಾನ್ ಮತ್ತು ಐಶ್ವರ್ಯಾ ಅವರ ರೋಮ್ಯಾಂಟಿಕ್ ಹಾಡು. ಸಂಜಯ್ ಜಿ ಐಶ್ವರ್ಯಾ ಅವರಿಗೆ ದೃಶ್ಯವನ್ನು ವಿವರಿಸುವಾಗ ಸ್ಪರ್ಶಿಸಿ  ಸಲ್ಮಾನ್ ಇದನ್ನು ಹೀಗೆ ಮಾಡಬೇಕು ಎಂದು ಹೇಳಿದರು, ಆದರೆ ನಂತರ ಸಲ್ಮಾನ್ ಅವರ ಬನ್ಸಾಲಿ ಅವರ ಬಳಿ ಬಂದು ಜೋರಾಗಿ ಮಾತನಾಡಲು ಪ್ರಾರಂಭಿಸಿದರು.

811

'ನೀವು ಅವಳನ್ನು ಏಕೆ ಮುಟ್ಟಿದ್ದೀರಿ? ನೀನು ಈ ರೀತಿ ಮಾಡಬಾರದು' ಎಂದು ಸಲ್ಮಾನ್ ಬನ್ಸಾಲಿ ಅವರಿಗೆ  ಜೋರಾಗಿ ಮಾತನಾಡಲು ಪ್ರಾರಂಭಿಸಿದರು ಎಂದು ಸ್ಮಿತಾ ಜಯಕರ್ ಬಹಿರಂಗಪಡಿಸದ್ದಾರೆ.

911

ಪ್ರೀತಿ ಇದ್ದಾಗ ಹೀಗಾಗುತ್ತದೆ. ಅವಳು ಹೊಸಬಳು ಮತ್ತು ಅವಳ ಕಣ್ಣುಗಳಲ್ಲಿ ಯಾವಾಗಲೂ ಮಿಂಚು ಇದ್ದುದರಿಂದ ಚಿತ್ರದಲ್ಲಿ ಅವರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಯಿತು ಎಂದು  ಸಂದರ್ಶನದಲ್ಲಿ, ಸ್ಮಿತಾ ಮತ್ತಷ್ಟು ಹೇಳಿದರು, 

1011

ವರದಿಗಳ ಪ್ರಕಾರ, ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿ ಮಾಧುರಿಯನ್ನು ನಟಿಸಲು ಸಂಜಯ್ ಮೊದಲು ಬಯಸಿದ್ದರು, ಆದರೆ ಸಲ್ಮಾನ್ ಅವರ ಒತ್ತಾಯದ ಮೇರೆಗೆ ಅವರು ಐಶ್ವರ್ಯಾ ರೈ ಅವರನ್ನು ಆಯ್ಕೆ ಮಾಡಿದರು. 

1111

ಈ ಚಿತ್ರವು ಸೂಪರ್‌ಹಿಟ್ ಆಯಿತು ಮತ್ತು ಇದು ಸಲ್ಮಾನ್ ಜೊತೆಗಿನ ಐಶ್ವರ್ಯಾ ಅವರ ಏಕೈಕ ರೋಮ್ಯಾಂಟಿಕ್ ಚಿತ್ರವಾಗಿತ್ತು. ಅದಾದ ನಂತರ ಒಂದೋ ಎರಡೋ ಚಿತ್ರಗಳನ್ನು ಒಟ್ಟಿಗೆ ಮಾಡಿದರೂ ಕೇವಲ ಅತಿಥಿ ಪಾತ್ರಗಳಿದ್ದವು.

Read more Photos on
click me!

Recommended Stories