ದಕ್ಷಿಣ ಭಾರತದ ಚಲನಚಿತ್ರೋದ್ಯಮ ಅತ್ಯಂತ ಪ್ರತಿಭಾವಂತ ಮತ್ತು ಸುಂದರ ನಟಿಯರಿಗೆ ನೆಲೆ. ನಯನತಾರಾದಿಂದ ಶ್ರೀನಿಧಿ ಶೆಟ್ಟಿಯವರೆಗೆ, ಹಲವಾರು ದಕ್ಷಿಣದ ನಟಿಯರು ದೊಡ್ಡ ಪರದೆ ಮೇಲೆ ತಮ್ಮ ಅದ್ಭುತ ಅಭಿನಯದಿಂದ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಮಾತ್ರವಲ್ಲದೆ ತಮ್ಮ ಆಕರ್ಷಿತ ಸಂಭಾವನೆ ಮೂಲಕ ತಮ್ಮ ಯೋಗ್ಯತೆಯನ್ನು ಸಾಬೀತುಪಡಿಸಿದ್ದಾರೆ. ಅವರು ಒಂದು ಚಿತ್ರಕ್ಕೆ ಎಷ್ಟು ಗಳಿಸುತ್ತಾರೆ ಗೊತ್ತಾ? 2023ರ IMDb ಪಟ್ಟಿಯ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ದಕ್ಷಿಣ ಭಾರತದ ನಟಿಯರು ಇವರುಗಳು.
ನಯನತಾರಾ:
ಹಲವಾರು ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಒಂದು ಚಿತ್ರಕ್ಕೆ 2 ಕೋಟಿಯಿಂದ 10 ಕೋಟಿ ಸಂಭಾವನೆ ಪಡೆಯುತ್ತಾರೆ.
210
ಅನುಷ್ಕಾ ಶೆಟ್ಟಿ:
ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ತನ್ನ ಅದ್ಭುತ ಅಭಿನಯಕ್ಕಾಗಿ ಹೆಸರುವಾಸಿ. ನಟಿಯಾಗಿರುವುದರ ಜೊತೆಗೆ, ಅನುಷ್ಕಾ ಶೆಟ್ಟಿ ತರಬೇತಿ ಪಡೆದ ಯೋಗ ತರಬೇತುದಾರರೂ ಹೌದು. ಇವರ ಸಂಭಾವನೆ: ಒಂದು ಚಿತ್ರಕ್ಕೆ 6 ಕೋಟಿ.
310
ಸಮಂತಾ ರುತ್ ಪ್ರಭು:
ಸಮಂತಾ ರುತ್ ಪ್ರಭು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿ. ಅವಳು ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಸಮಂತಾ ಪ್ರತಿ ಸಿನಿಮಾ ಮತ್ತು ಸರಣಿಗೆ 3 ರಿಂದ 8 ಕೋಟಿ ಪಡೆಯುತ್ತಾರೆ.
410
ಪೂಜಾ ಹೆಗ್ಡೆ:
ಪೂಜಾ ಹೆಗ್ಡೆ ಹಲವಾರು ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಇತ್ತೀಚಿನ ಚಲನಚಿತ್ರ ಸರ್ಕಸ್ ಮತ್ತು ಪೂಜಾ ಪ್ರಸ್ತುತ ಬಾಲಿವುಡ್‌ನ ಬಹುನಿರೀಕ್ಷಿತ ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ಗಾಗಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಟಿ ಸಂಭಾವನೆ ಒಂದು ಚಿತ್ರಕ್ಕೆ 2.5 ಕೋಟಿಯಿಂದ 7 ಕೋಟಿ.
510
ರಶ್ಮಿಕಾ ಮಂದಣ್ಣ:
ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಉದಯೋನ್ಮುಖ ತಾರೆ. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 'ನ್ಯಾಷನಲ್ ಕ್ರಶ್ ಆಫ್ ಇಂಡಿಯಾ' ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿರುವ ರಶ್ಮಿಕಾ ಚಿತ್ರವೊಂದಕ್ಕೆ 2ರಿಂದ 5 ಕೋಟಿ ರೂ ಗಳಿಸುತ್ತಾರೆ.
610
ತಮನ್ನಾ ಭಾಟಿಯಾ:
ತಮನ್ನಾ ಭಾಟಿಯಾ ದಕ್ಷಿಣ ಭಾರತದ ಚಿತ್ರರಂಗದ ಪ್ರಸಿದ್ಧ ನಟಿ. ಅವರು ಇತ್ತೀಚೆಗೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದ್ದಾರೆ. ಪ್ರತಿ ಸಿನಿಮಾ ಮತ್ತು ಸರಣಿಗೆ 1.5 ಕೋಟಿಯಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ.
710
ಕಾಜಲ್ ಅಗರ್ವಾಲ್:
ಕಾಜಲ್ ಅಗರ್ವಾಲ್ ಅವರ ವೃತ್ತಿಜೀವನದ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಮಗಧೀರ. ಇವರ ಸಂಭಾವನೆ ಒಂದು ಚಿತ್ರಕ್ಕೆ 1.5 ಕೋಟಿಯಿಂದ 4 ಕೋಟಿ.
810
ರಾಕುಲ್ ಪ್ರೀತ್ ಸಿಂಗ್:
ರಾಕುಲ್ ಪ್ರೀತ್ ಸಿಂಗ್ ಅವರು ಮಾಡೆಲ್-ನಟಿಯಾಗಿದ್ದು, ಅವರು ತೆಲುಗು, ತಮಿಳು, ಬಾಲಿವುಡ್ ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಂಭಾವನೆ ಒಂದು ಚಿತ್ರಕ್ಕೆ 1.5 ಕೋಟಿಯಿಂದ 3.5 ಕೋಟಿ.
910
ಕೀರ್ತಿ ಸುರೇಶ್:
ಕೀರ್ತಿ ಸುರೇಶ್ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ತನ್ನ ಪ್ರಸಿದ್ಧ ಅಭಿನಯಕ್ಕಾಗಿ ಹೆಸರುವಾಸಿ. 'ಮಹಾನಟಿ' ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಇವರು ಒಂದು ಸಿನಿಮಾಗೆ 1 ಕೋಟಿಯಿಂದ 3 ಕೋಟಿ ರೂ ಪಡೆಯುತ್ತಾರೆ.
1010
ಶ್ರೀನಿಧಿ ಶೆಟ್ಟಿ:
ಬ್ಲಾಕ್‌ಬಸ್ಟರ್ ಚಲನಚಿತ್ರ K.G.F.ಅಧ್ಯಾಯ 1 ರಲ್ಲಿನ ಪಾತ್ರಕ್ಕಾಗಿ ಅವಳು ಹೆಚ್ಚು ಹೆಸರುವಾಸಿಯಾಗಿರುವ ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ. ಒಂದು ಸಿನಿಮಾಗೆ 1 ಕೋಟಿಯಿಂದ 3 ಕೋಟಿ ರೂ ಪಡೆಯುತ್ತಾರೆ.