ಆಮೀರ್‌ ಖಾನ್‌ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಅಚ್ಚರಿ ನಟಿ ಆಯ್ಕೆ!

Published : Oct 13, 2023, 05:11 PM IST

ಆಮೀರ್ ಖಾನ್‌ (Aamir Khan) ಅವರ ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾದ ವರ್ಷದ ನಂತರ, ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ. 'ತಾರೆ ಜಮೀನ್ ಪರ್' (Taare Zameen Par) ಚಿತ್ರದ ಸೀಕ್ವೆಲ್ ಅನ್ನು ಬಿಡುಗಡೆ ಮಾಡಲು ನಟ ಸಿದ್ಧರಾಗಿದ್ದು, ಅದರಲ್ಲಿ ನಾಯಕಿ ಯಾರೆಂಬುದನ್ನು ಖಚಿತಪಡಿಸಿದ್ದಾರೆ. ಅಷ್ಷಕ್ಕೂ ಆಮೀರ್‌ ಚಿತ್ರದಲ್ಲಿ ನಾಯಕಿಯಾಗುವ ಆದೃಷ್ಟ ಪಡೆದ ನಟಿ ಯಾರು ಗೊತ್ತಾ?

PREV
17
 ಆಮೀರ್‌ ಖಾನ್‌ ಸಿತಾರೆ ಜಮೀನ್ ಪರ್ ಚಿತ್ರಕ್ಕೆ  ಅಚ್ಚರಿ ನಟಿ ಆಯ್ಕೆ!

ಆಮೀರ್ ತಮ್ಮ ಮುಂದಿನ ಚಿತ್ರಕ್ಕೆ 'ಸಿತಾರೆ ಜಮೀನ್ ಪರ್' ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ಜೆನಿಲಿಯಾ ದೇಶಮುಖ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಸುದ್ದಿ ಹೊರ ಬಂದಿದೆ.

27

ಸಿತಾರೆ ಜಮೀನ್ ಪರ್' ಆಮೀರ್‌ ಖಾನ್‌ ಅವರ 2007 ರ 'ತಾರೆ ಜಮೀನ್ ಪರ್' ಚಿತ್ರದ ಮುಂದುವರಿದ ಭಾಗವಾಗಿದ್ದು, ಹಾಸ್ಯಮಯ ಚಿತ್ರವಾಗಲಿದೆ.
 
 

37

ಇದು ಇಬ್ಬರು ಸ್ಟಾರ್‌ಗಳ ನಡುವಿನ ಮೊದಲ ಸಹಯೋಗ ಮತ್ತು ಜೆನಿಲಿಯಾ ಅವರು ಆಮೀರ್‌ ಅವರ ಲವ್‌ ಇಂಟರೆಸ್ಟ್‌ ಪಾತ್ರವನ್ನು ವಹಿಸುತ್ತಾರೆ  ಮತ್ತು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ತಂಡಕ್ಕೆ ಕಲಿಸುವ ಪ್ರಯಾಣದಲ್ಲಿ ನಾಯಕನ ಜೊತೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ.

47

ಆಮೀರ್ ತನ್ನ ನಿರ್ದೇಶಕರೊಂದಿಗಿನ ವ್ಯಾಪಕ ಸಂಭಾಷಣೆಯ ನಂತರ ಚಿತ್ರದ ನಾಯಕಿಯಾಗಿ ಜೆನಿಲಿಯಾರನ್ನು ಸಹಿ ಮಾಡಿದ್ದಾರೆ  ಮತ್ತು ಗಟ್ಟಿ ಸ್ವತಂತ್ರ ಮಹಿಳೆಯ ಪಾತ್ರಕ್ಕೆ ಜೆನಿಲಿಯಾ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದು ಆಮೀರ್ ನಂಬಿದ್ದರು ಎಂದು ವರದಿಯಾಗಿದೆ.

57

ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಆಮೀರ್ ಅವರು 'ತಾರೆ ಜಮೀನ್ ಪರ್' ವಿಷಯದೊಂದಿಗೆ 'ಸಿತಾರೆ ಜಮೀನ್ ಪರ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಖಚಿತಪಡಿಸಿದರು. ಹಿಂದಿನ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿದ ನಂತರ ಈ ಚಿತ್ರವು ಒಂದು ನಗು ಮೂಡುಸುತ್ತದೆ, ಎನ್ನಲಾಗಿದೆ. 

67

 2022ರಲ್ಲಿ ಬಿಡುಗಡೆಯಾದ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡಾ' ನಂತರ  'ಸಿತಾರೆ ಜಮೀನ್ ಪರ್' ಮೂಲಕ ಆಮೀರ್ ಖಾನ್ ದೊಡ್ಡ ಪರದೆಗೆ ಮರಳುತ್ತಿದ್ದಾರೆ.

77

ಕೆಲಸದ ಮುಂಭಾಗದಲ್ಲಿ, ಜಿಯೋಸಿನಿಮಾದ ಹಾಸ್ಯ ಚಿತ್ರ 'ಟ್ರಯಲ್ ಪೀರಿಯಡ್' ನಲ್ಲಿ ಜೆನಿಲಿಯಾ ಕಾಣಿಸಿಕೊಂಡಿದ್ದಾರೆ.ತಮ್ಮ ಪತಿ ರಿತೇಶ್ ದೇಶಮುಖ್ ಅವರೊಂದಿಗೆ ನಟಿಸಿದ 'ವೇದ್' ಚಿತ್ರದಲ್ಲಿಯೂ ನಟಿಸಿದ್ದಾರೆ.

Read more Photos on
click me!

Recommended Stories