ಫಿಟ್ನೆಸ್ ಪರಿಣಿತರಾಗಿ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿ, ತನ್ನದೇ ಆದ ಫಿಟ್‌ನೆಸ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಉದ್ಯಮಿಯಾಗಿ ಬೆಳೆಯಲು ತೀರ್ಮಾನಿಸಿದರು. ಸಾಹಿಲ್ ಖಾನ್ ಅವರ ಫಿಟ್‌ನೆಸ್ ಸಾಮ್ರಾಜ್ಯದ ಕಡೆಗಿನ ಪ್ರಯಾಣವು ದೇಶಾದ್ಯಂತ ಜಿಮ್‌ಗಳಲ್ಲಿ ಅವರ ಸಣ್ಣ ಹೂಡಿಕೆಯೊಂದಿಗೆ ಆರಂಭವಾಯ್ತು. ಜೊತೆಗೆ 2016ರಲ್ಲಿ ಡಿವೈನ್ ನ್ಯೂಟ್ರಿಷನ್ ಎಂಬ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದರು. ಕಂಪನಿಯು ಫಿಟ್‌ನೆಸ್ ಪೂರಕಗಳಾದ ಉತ್ಪನ್ನಗಳು, ಪ್ರೋಟೀನ್, ಕ್ರಿಯೇಟೈನ್ ಮತ್ತು ಸ್ನಾಯು ಬೆಳೆಸುವವರಿಗೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.