Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್ ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.
ಗಾಯಕ S P Balasubrahmanyam ಜೊತೆ ಜಾನಕಿ ಅವರು ಹಾಡಿದ ಅನೇಕ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಆಂಧ್ರಪ್ರದೇಶದ ಎಸ್. ಜಾನಕಿ ಅವರು ಆರಂಭದಲ್ಲಿ ತೆಲುಗು, ಆಮೇಲೆ ತಮಿಳು ಚಿತ್ರರಂಗದಲ್ಲಿ ಹಾಡಲು ಆರಂಭಿಸಿದರು. ಮಲಯಾಳಂ, ಕನ್ನಡ, ಒಡಿಯಾ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ.
24
ಉಸಿರಾಟದ ಸಮಸ್ಯೆಯಿದ್ರೂ ಹಾಡಿದ್ದರು
ಜಾನಕಿ ಅವರಿಗೆ ಉಸಿರಾಟದ ಸಮಸ್ಯೆ ಇದ್ದರೂ ಅನೇಕ ಕಷ್ಟದ ಹಾಡುಗಳನ್ನು ಹಾಡಿ, ಯಶಸ್ಸು ಗಳಿಸಿದ್ದಾರೆ. ಇದಕ್ಕಾಗಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ.
2013ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ಕೊಡಲು ರೆಡಿಯಾಗಿತ್ತು. ಆದರೆ ಅವರು ತಮ್ಮ ಸಾಧನೆಗೆ ಈ ಗೌರವ ತುಂಬಾ ತಡವಾಗಿ ಬಂದಿದೆ ಎಂದು ಹೇಳಿದ್ದರು.
34
48000 ಹಾಡು ಹಾಡಿದ್ದರು
ಇಲ್ಲಿಯವರೆಗೆ 48,000ಕ್ಕೂ ಹೆಚ್ಚು ಹಾಡು ಹಾಡಿದ್ದ ಅವರು 2016ರಲ್ಲಿ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದರು. ಆಮೇಲೆ ತುಂಬ ಒತ್ತಾಯ ಮಾಡಿದ್ದಕ್ಕೆ 2018ರಲ್ಲಿ ಬಿಡುಗಡೆಯಾದ 'ಪನ್ನಾಡಿ' ಚಿತ್ರದ 'ಉನ್ ಉಸುರು ಕಾತುಲ' ಹಾಡನ್ನು ಹಾಡಿದರು.
ಪದ್ಮಭೂಷಣ ಭಾರತ ಸರ್ಕಾರ ನೀಡುವ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯುತ್ತದೆ.
ವ್ಯಕ್ತಿಯ ಸಾಧನೆ, ಸೇವೆಗೆ ಅಧಿಕೃತ ಗುರುತಿನ ಚಿಹ್ನೆಯಾಗುತ್ತದೆ.
ಸರ್ಕಾರಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿಶೇಷ ಗೌರವ ಸಿಗಬಹುದು.
ಜೀವನ ಸಾಧನೆಗೆ ಸಂಬಂಧಿಸಿದಂತೆ ಸಾಮಾಜಿಕ, ವೃತ್ತಿಪರ ಪ್ರತಿಷ್ಠೆ ಹೆಚ್ಚಾಗುತ್ತದೆ.
ಪದ್ಮಭೂಷಣ ಪ್ರಶಸ್ತಿಯೊಂದಿಗೆ ಯಾವುದೇ ನೇರ ಕ್ಯಾಶ್ ಪ್ರೈಜ್, ಪಿಂಚಣಿ ಅಥವಾ ವಿಶೇಷ ಸರ್ಕಾರಿ ಸೌಲಭ್ಯಗಳು ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಇದರ ಮುಖ್ಯ ಮೌಲ್ಯವು ಗೌರವ, ಮಾನ್ಯತೆ, ಪ್ರತಿಷ್ಠೆಯಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.