ಪದೇ ಪದೇ ಸಂಸಾರದ ಗುಟ್ಟು ವ್ಯಾಧಿ ರಟ್ಟು ಮಾಡೋ ಪತ್ನಿ; No 1 ಹೀರೋಗೆ ಪಬ್ಲಿಕ್‌ನಲ್ಲೇ ಎಲ್ಲ ಹೇಳೋ ಹಾಗಾಯ್ತು

Published : Jul 11, 2026, 04:55 PM IST

Bollywood Actor Govinda: ಬಾಲಿವುಡ್‌ ನಟ ಗೋವಿಂದ ಮನೆಯ ಸಮಸ್ಯೆಗಳೆಲ್ಲವೂ ಬೀದಿ ರಂಪಾಟ ಆಗೋಗಿದೆ. ಈ ಹಿಂದೆ ಸಂಬಂಧಿ ಕೃಷ್ಣ ಅಭಿಷೇಕ್-‌ ಗೋವಿಂದ ನಡುವಿನ ಮನಸ್ತಾಪ ಕೂಡ ಎಲ್ಲರ ಮುಂದೆ ಬಯಲಾಗಿತ್ತು. ಈಗ ಗೋವಿಂದ ಅಕ್ರಮ ಸಂಬಂಧವನ್ನು ಪತ್ನಿ ಸುನಿತಾ ಹೇಳಿದ್ದಾರೆ.

PREV
15
ಗನ್‌ ಶೂಟ್‌ ಆಗಿದ್ದಕ್ಕೆ ತಮಾಷೆ ಮಾಡಿದ್ರು

ಹೌದು, 'ಲಾಕ್ ಅಪ್ʼ ಶೋನಲ್ಲಿ ಗೋವಿಂದ ಪತ್ನಿ ಪತ್ನಿ ಸುನಿತಾ ಅಹುಜಾ ಕೂಡ ಸ್ಪರ್ಧಿ. ಇದರಲ್ಲಿ ಅವರು ಗೋವಿಂದಗೆ ಅಫೇರ್‌ ಇದೆ ಎಂದು ಹೇಳಿದ್ದರು. ಈ ಹಿಂದೆ ಗೋವಿಂದ ಅವರು ಗನ್‌ ಕ್ಲೀನ್‌ ಮಾಡುವಾಗ ಅವರಿಗೆ ಅವರೇ ಅಚಾನಕ್‌ ಆಗಿ ಶೂಟ್‌ ಮಾಡಿಕೊಂಡಿದ್ದರು. ಕೆಲವರು ಸುನಿತಾರೇ ಶೂಟ್‌ ಮಾಡಿದ್ದಾರಾ ಎಂದು ತಮಾಷೆ ಮಾಡಿದ್ದರು. ಆಗ ಸುನಿತಾ ಅವರು ಶೂಟ್‌ ಮಾಡೋದಿದ್ರೆ ಕಾಲಿಗಲ್ಲ, ಎದೆಗೆ ಹಾಕುತ್ತಿದ್ದೆ ಎಂದಿದ್ದರು.

ಈಗ ಗೋವಿಂದ ಅವರು ಈ ಶೋನಲ್ಲಿ ಸುನಿತಾ ನನ್ನ ಎದೆಗೆ ಶೂಟ್‌ ಮಾಡಬಹುದು ಎಂದು ಹೇಳಿದ್ದಾರೆ. ಈ ಶೋನಲ್ಲಿ ಎಲ್ಲರೂ ಜೈಲು ವಾಸಿಗಳು ಎಂದು ಅನಿಸುತ್ತದೆ, ನಾನು ಮದುವೆ ಆದಾಗಿನಿಂದಲೂ ಜೈಲಿನಲ್ಲಿ ಇದ್ದಂತೆ ಭಾಸವಾಗಿದೆ ಎಂದಿದ್ದಾರೆ.

25
ಪತ್ನಿಯನ್ನು ಹೊಗಳಿದ ಸುನಿತಾ

ಸುನಿತಾಳಲ್ಲಿ ತಾಯ್ತನದ ಪ್ರೀತಿ, ಕರುಣೆ ಇದೆ. ಕಳೆದ ಹಲವು ವರ್ಷಗಳಿಂದ ಸುನಿತಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾಕಷ್ಟು ಕೆಲಸ ಮಾಡಿದ್ದಾಳೆ. ಅವಳು ಸದಾ ದಯಾಶೀಲೆ, ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ. ಅವಳಲ್ಲಿರುವ ನೈಜ ಮಾತೃಪ್ರೇಮವು ಎಲ್ಲರನ್ನೂ ಸಹಜವಾಗಿಯೇ ಒಂದಾಗುವಂತೆ ಮಾಡುತ್ತದೆ" ಎಂದು ಗೋವಿಂದ ಹೇಳಿದ್ದಾರೆ.

35
ಪರ್ಸನಲ್‌ ವಿಷಯ ರಿವೀಲ್‌ ಆಯ್ತು

'ಲಾಕ್ ಅಪ್' ಶೋನ ಆರಂಭದಿಂದಲೂ ಗೋವಿಂದ ಪತ್ನಿ ಸುನಿತಾ ಅಹುಜಾ ಅವರು ತಮ್ಮ ನೇರ ನಡೆ-ನುಡಿಯಿಂದ ಸಖತ್ ಸುದ್ದಿಯಲ್ಲಿದ್ದಾರೆ. ಅವರು ಶೋನಲ್ಲಿ ದಾಂಪತ್ಯ ಜೀವನದ ಕೆಲವು ಅಚ್ಚರಿಯ ಸಂಗತಿಗಳನ್ನು ರಿವೀಲ್‌ ಮಾಡಿದ್ದಾರೆ. ಈಗ ಗೋವಿಂದ ಅವರು ಬಂದಿದ್ದು, ಎಪಿಸೋಡ್‌ ಇನ್ನೂ ಟೆಲಿಕಾಸ್ಟ್‌ ಆಗಿಲ್ಲ. ಏನೇನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.

45
ಗೋವಿಂದ ತರ ಮಗ ಹುಟ್ಟಬೇಕು

"ಸಂಸಾರ ಅಂದಮೇಲೆ ಪ್ರೀತಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಗೋವಿಂದ ಲೈಫ್‌ನಲ್ಲಿ ಸಾಕಷ್ಟು ಅಫೇರ್‌ಗಳು ಇದ್ದವು. ಚಿತ್ರರಂಗದಲ್ಲಿ ನಾಯಕ, ನಾಯಕಿಯರ ನಡುವೆ ಇವೆಲ್ಲ ಸರ್ವೇಸಾಮಾನ್ಯ. ಇಷ್ಟೆಲ್ಲ ಆದರೂ ನಾನು ಇಷ್ಟು ವರ್ಷಗಳ ಕಾಲ ಗೋವಿಂದ ಸಂಸಾರ ಮಾಡಿದ್ದಕ್ಕಾಗಿ, ಮುಂದಿನ ಜನ್ಮದಲ್ಲಿ ನನಗೆ ಅವರ ಗುಣಗಳೇ ಇರುವ ಒಬ್ಬ ಒಳ್ಳೆಯ ಮಗ ಹುಟ್ಟಬೇಕು ಎಂದು ಅನಿಸುತ್ತದೆ" ಎಂದು ಹೇಳಿದ್ದರು.

55
ಮಗ ಹುಟ್ಟಿದ್ಮೇಲೆ ವಿಷಯ ಬಯಲಾಯ್ತು

ಗೋವಿಂದ, ಸುನಿತಾ ಅವರು 1987 ರಲ್ಲಿ ಮದುವೆಯಾಗಿದ್ದಾರೆ. ಆದರೆ ಮಗಳು ಟೀನಾ ಹುಟ್ಟಿದ ಬಳಿಕ ಮದುವೆಯಾದ ವಿಷಯ ತಿಳಿಸಿದ್ದರು. ಇನ್ನು ಈ ದಂಪತಿಗೆ ಯಶವರ್ಧನ್ ಅಹುಜಾ ಎಂಬ ಮಗನೂ ಇದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories