ತಂದೆಯ ಆರೋಗ್ಯ ನೋಡಿಕೊಳ್ಳಲು ಬಂದ ಖ್ಯಾತ ಸಿಂಗರ್ ರಿಷಬ್ ಹೃದಯಾಘಾತಕ್ಕೆ ಬಲಿ

Published : Oct 22, 2025, 04:09 PM IST

ತಂದೆಯ ಆರೋಗ್ಯ ನೋಡಿಕೊಳ್ಳಲು ಬಂದ ಖ್ಯಾತ ಸಿಂಗರ್ ರಿಷಬ್ ಹೃದಯಾಘಾತಕ್ಕೆ ಬಲಿ, ಯೇ ಆಶಿಖಿ, ಫಕೀರನಾ ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ರಿಷಬ್, ಕರ್ವಾ ಚೌತ್ ಆಚರಿಸಿದ ಕೆಲವೇ ದಿನದಲ್ಲಿ ಹದಯಾಘಾತಕ್ಕೆ ಬಲಿಯಾಗಿದ್ದಾರೆ.

PREV
16
35ರ ಹರೆಯದ ಗಾಯಕ ರಿಷಬ್ ಟಂಡನ್

ಹೃದಯಾಘಾತ ಸಮಸ್ಯೆ ತೀವ್ರವಾಗುತ್ತಿದೆ, ಆತಂಕವೂ ಹೆಚ್ಚಾಗುತ್ತಿದೆ. ಪ್ರತಿ ದಿನ ಈ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಖ್ಯಾತ ಗಾಯಕ ರಿಷಬ್ ಟಂಡನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೇವಲ 35ರ ಹರೆಯದ ರಿಷಬ್ ಟಂಡನ್ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ರಿಷಬ್ ಟಂಡನ್ ಸಾವಿಗೆ ಸೆಲೆಬ್ರೆಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.

26
ತಂದೆ ಆರೋಗ್ಯ ಹದಗೆಟ್ಟ ಕಾರಣ ದೆಹಲಿಯಲ್ಲಿದ್ದ ರಿಷಬ್

ರಿಷಬ್ ಟಂಡನ್ ತಂದೆಯ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ದೆಹಲಿಗೆ ಮರಳಿದ್ದ ರಿಷಬ್ ಟಂಡನ್, ತಂದೆಯ ಜೊತೆಗಿದ್ದರು. ತಂದೆಯ ಆರೋಗ್ಯ ಚೇತರಿಕೆ ಕಂಡ ಬಳಿಕ ಮುಂಬೈಗೆ ತೆರಳಿ ಮತ್ತೆ ತಮ್ಮ ಹಾಡುಗಳ ರೆಕಾರ್ಡಿಂಗ್ ಮುಂದುರಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಇದೀಗ ರಿಷಬ್ ಟಂಡನ್ ಹೃದಯಘಾತಕ್ಕೆ ಬಲಿಯಾಗಿದ್ದಾರೆ.

36
ಕರ್ವಾ ಚೌತ್ ಆಚರಿಸಿದ್ದ ರಿಷಬ್ ಟಂಡನ್

ಕರ್ವಾ ಚೌತ್ ಆಚರಿಸಿದ್ದ ರಿಷಬ್ ಟಂಡನ್

ಪತ್ನಿ ಜೊತೆ ಕರ್ವಾ ಚೌಚ್ ಆಚರಿಸಿದ್ದ ರಿಷಷ್ ಟಂಡನ್ ಸೋಶಿಯಲ್ ಮೀಡಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದರು. ಕರ್ವಾ ಚೌತ್ ಆಚರಣೆ ಕುರಿತು ಪೋಸ್ಟ್ ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಕೊನೆಯ ಪೋಸ್ಟ್ ಆಗಿದೆ. ತಂದೆಯ ಆರೋಗ್ಯದ ಕುರಿತು ಅತೀವ ಕಾಳಜಿ ವಹಿಸಿದ್ದ ರಿಷಬ್ ಟಂಡನ್ ಸಾವು, ಕುಟಂಬ್ಥರನನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

46
ಅಕ್ಟೋಬರ್ 10 ರಂದು 35ನೇ ಹುಟ್ಟು ಹಬ್ಬ ಆಚರಿಸಿದ್ದ ರಿಷಬ್

ಅಕ್ಟೋಬರ್ 10 ರಂದು ರಿಷಬ್ ಟಂಡನ್ 35ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಕುಟುಂಬಸ್ಥರು, ಆಪ್ತರ ಜೊತೆಗೆ ಅದ್ಧೂರಿಯಾಗಿ ರಿಷಬ್ ಟಂಡನ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದರು. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ನಿನ್ನೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಅಕ್ಟೋಬರ್ 10 ರಂದು 35ನೇ ಹುಟ್ಟು ಹಬ್ಬ ಆಚರಿಸಿದ್ದ ರಿಷಬ್

56
ಮುಂಬೈ ಮೂಲದ ಗಾಯಕ

ಮುಂಬೈ ಮೂಲದ ಗಾಯಕ ರಿಷಬ್ ಟಂಡನ್, ಶಿವನ ಭಕ್ತನಾಗಿದ್ದರು. ಫಕೀರ್, ಲಿವಿಂಗ್ ಲೈಮ್‌ಲೈಟ್ಸ್, ರಾಶ್ನಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ರಿಷಬ್ ಟಂಡನ್ ಹೆಸರು ಮಾಡಿದ್ದಾರೆ. ನಟನೆಯಲ್ಲೂ ಆಸಕ್ತಿ ತೋರಿದ್ದ ರಿಷಬ್ ಟಂಡನ್, ಗಾಯನಕಾಗಿ ಗುರುತಿಸಿಕೊಂಡಿದ್ದರು.

ಮುಂಬೈ ಮೂಲದ ಗಾಯಕ

66
ಸಾರಾ ಖಾನ್ ಜೊತೆ ರಿಲೇಶನ್‌ಶಿಪ್‌ನಿಂದ ಭಾರಿ ಸದ್ದು ಮಾಡಿದ್ದ ರಿಷಬ್

ರಿಷಬ್ ಟಂಡನ್ ತಮ್ಮ ರಿಲೇಶನ್‌ಶಿಪ್‌ನಿಂದ ಬಾರಿ ಸದ್ದು ಮಾಡಿದ್ದರು. ನಟಿ ಸಾರಾ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇತ್ತ ಸಾರಾ ಖಾನ್ ಕುಂಕುಮ ಧರಿಸಿದ ಫೋಟೋಗಳು ವೈರಲ್ ಆಗುವ ಮೂಲಕ ಈ ಡೇಟಿಂಗ್ ರೂಮರ್ ಬಲವಾಗಿತ್ತು.

ಸಾರಾ ಖಾನ್ ಜೊತೆ ರಿಲೇಶನ್‌ಶಿಪ್‌ನಿಂದ ಭಾರಿ ಸದ್ದು ಮಾಡಿದ್ದ ರಿಷಬ್

Read more Photos on
click me!

Recommended Stories