Photos: ದೀಪಾವಳಿಗೆ ಫಸ್ಟ್‌ ಟೈಮ್ ಮಗಳು ದುವಾ ಮುಖ ತೋರಿಸಿದ Deepika Padukone, Ranveer Singh ದಂಪತಿ!

Published : Oct 21, 2025, 09:41 PM IST

Deepika Padukone‌ Daughter Photos: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪಾಲಕರಾಗಿ ಬಡ್ತಿ ಪಡೆದು ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಮಗಳ ಮುಖವನ್ನು ಪಬ್ಲಿಕ್‌ಗೆ ತೋರಿಸಿರಲಿಲ್ಲ. ಈಗ ಫೋಟೋ ಹಂಚಿಕೊಂಡಿದ್ದಾರೆ. 

PREV
16
ದೀಪಾವಳಿ ಸಂಭ್ರಮ

ಇಡೀ ನಾಡು ದೀಪಾವಳಿ ಸಂಭ್ರಮದಲ್ಲಿದೆ. ಎಲ್ಲರೂ ಈ ಹಬ್ಬವನ್ನು ಖುಷಿಯಿಂದ ಆಚರಿಸುತ್ತಿದ್ದಾರೆ. ಈಗ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಅವರು ಮಗಳು ದುವಾಳ ಮುದ್ದಾದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

26
ವರ್ಷದ ಹಿಂದೆ ಮಗಳ ಜನನ

2024 ಸೆಪ್ಟೆಂಬರ್‌ 8ರಂದು ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ದೀಪಿಕಾ ಮಗುವಿಗೆ ಒಂದು ವರ್ಷ ತುಂಬಿದೆ.

36
ಟ್ರೋಲ್‌ ಆಗಿದ್ರು

ದೀಪಿಕಾ ಪಡುಕೋಣೆ ಗರ್ಭಿಣಿಯೇ ಆಗಿಲ್ಲ, ಸರೋಗಸಿ ಮೂಲಕ ಮಗು ಮಾಡಿಕೊಳ್ಳುತ್ತಿದ್ದಾರೆ ಎಂದು ಕೂಡ ಸುದ್ದಿ ಹಬ್ಬಿತ್ತು. ಅದಾದ ಬಳಿಕ ಹೊಟ್ಟೆ ಕಾಣುವ ಥರ ಪಾರದರ್ಶಕವಾಗಿ ದೀಪಿಕಾ ಪಡುಕೋಣೆ ಅವರು ಪತಿ ಜೊತೆಗೆ ಬೇಬಿ ಬಂಪ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದರು.

46
ಸಿನಿಮಾ ಮೂಲಕ ಸದ್ದು ಮಾಡ್ತಾರೆ

ದೀಪಿಕಾ ಮತ್ತು ರಣವೀರ್ ಅವರು ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿ ಇಡುತ್ತಾರೆ, ಅಷ್ಟಾಗಿ ಕ್ಯಾಮರಾ ಮುಂದೆ ಬಂದು ಪೋಸ್‌ ಕೂಡ ಕೊಡೋರಲ್ಲ. ಸಿನಿಮಾ ವಿಚಾರವಾಗಿ ಹಾಗೂ ತಮ್ಮ ಹೇಳಿಕೆಗಳ ಮೂಲಕ ದೀಪಿಕಾ ಪಡುಕೋಣೆ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ.

56
5 ವರ್ಷದ ಬಳಿಕ ಮಗು

ಇಟಲಿಯಲ್ಲಿ 2018 ನವೆಂಬರ್ 14 ರಂದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮದುವೆಯಾಗಿದ್ದರು. ಮದುವೆಗೂ ಮುನ್ನ ಇವರು ಪ್ರೀತಿಯ ವಿಷಯವನ್ನು ರಿವೀಲ್‌ ಮಾಡಿರಲಿಲ್ಲ. 

66
ಬೆಂಗಳೂರಿನಲ್ಲಿ ಆರತಕ್ಷತೆ

ಮದುವೆಯಾದ ಬಳಿಕ ಬೆಂಗಳೂರಿನ ಈ ನಟಿ ಆಮೇಲೆ ಬೆಂಗಳೂರು, ಮುಂಬೈನಲ್ಲಿ ಆರತಕ್ಷತೆ ಆಚರಿಸಿಕೊಂಡಿದ್ದರು. 

Read more Photos on
click me!

Recommended Stories