ಪಬ್‌ನಲ್ಲಿ ಬಾಲಕಿಗೆ ಬಲವಂತವಾಗಿ ಕಿಸ್‌ ಮಾಡಿದ ಬಾಲಿವುಡ್‌ ಗಾಯಕ

Published : Oct 30, 2022, 04:12 PM IST

ಒಂದು ಕಾಲದಲ್ಲಿ ಶಾರುಖ್ ಖಾನ್ ಅವರ ಧ್ವನಿ ಎಂದು ಕರೆಯಲ್ಪಡುತ್ತಿದ್ದ ಪ್ರಸಿದ್ಧ ಗಾಯಕ ಅಭಿಜೀತ್ ಭಟ್ಟಾಚಾರ್ಯ (Abhijeet Bhattacharya) ಅವರ ಹೆಸರಿನೊಂದಿಗೆ ಅನೇಕ ವಿವಾದಗಳಿವೆ. ಅಭಿಜಿತ್ ಯಾವಾಗಲೂ ಮುಕ್ತವಾಗಿ ಮಾತನಾಡುತ್ತಾರೆ, ಅವರು ತಮ್ಮ ಮನಸ್ಸನಲ್ಲಿರುವುದನ್ನು ಹೇಳಲು ಎಂದಿಗೂ ಹಿಂದೆ ಸರಿಯುವುದಿಲ್ಲ, ಅವರು ಬಾಲಿವುಡ್ ಕಿಂಗ್ ಖಾನ್ ವಿರುದ್ಧವೂ ಮಾತನಾಡಿದ್ದಾರೆ. ಪಾಕಿಸ್ತಾನಿ ಗಾಯಕನ ವಿರುದ್ಧ ಬಹಿರಂಗವಾಗಿಯೇ ಪ್ರತಿಭಟನೆ ನಡೆಸಿದ್ದರು. ಅದೇ ಸಮಯದಲ್ಲಿ, MeToo ಅಭಿಯಾನದ ಅಡಿಯಲ್ಲಿ ಈ ಗಾಯಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿದೆ. ಇಂದು ಅಂದರೆ ಅಕ್ಟೋಬರ್ 30 ನೇ ತಾರೀಖು  ಗಾಯಕ ಅಭಿಜೀತ್ ಭಟ್ಟಾಚಾರ್ಯ ಅವರ ಜನ್ಮದಿನವಾಗಿದೆ, ಈ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಕೆಲವು ವಿವಾದಗಳ ಮಾಹಿತಿ.

PREV
16
ಪಬ್‌ನಲ್ಲಿ ಬಾಲಕಿಗೆ ಬಲವಂತವಾಗಿ ಕಿಸ್‌ ಮಾಡಿದ ಬಾಲಿವುಡ್‌  ಗಾಯಕ

ಕೆಲವು ವರ್ಷಗಳ ಹಿಂದೆ ಬಾಲಿವುಡ್ ಗಾಯಕ ಅಭಿಜೀತ್ ಭಟ್ಟಾಚಾರ್ಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಗನಸಖಿಯೊಬ್ಬರು ಆರೋಪಿಸಿದ್ದರು.

26

ಅಭಿಜೀತ್ 'ಚುಂಬಿಸುವಾಗ ಬಹುತೇಕ ನನ್ನ ಎಡ ಕಿವಿಯನ್ನು ಕಚ್ಚಿದ್ದಾರೆ' ಎಂದು ಮಹಿಳೆ ಹೇಳಿದ್ದರು. ಘಟನೆಯನ್ನು ಉಲ್ಲೇಖಿಸಿದ ಮಹಿಳೆ, ಕೋಲ್ಕತ್ತಾದ ಪಬ್‌ನಲ್ಲಿ 20 ವರ್ಷಗಳ ಹಿಂದೆ ತನ್ನ ಮತ್ತು ಅಭಿಜೀತ್ ನಡುವೆ ಈ ಘಟನೆ ಸಂಭವಿಸಿದೆ ಎಂದು ಹೇಳಿದರು.

36

2018 ರಲ್ಲಿ ಫ್ಲೈಟ್ ಅಟೆಂಡೆಂಟ್ ಗಾಯಕ ಅಭಿಜೀತ್ ಭಟ್ಟಾಚಾರ್ಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 20 ವರ್ಷಗಳ ಹಿಂದೆ ಅಭಿಜೀತ್ ಕೋಲ್ಕತ್ತಾದ ಪಬ್‌ನಲ್ಲಿ ಅವನನ್ನು ಬಹುತೇಕ ಮುತ್ತಿಕ್ಕಿ ಎಡ ಕಿವಿಯನ್ನು ಪರಚಿದನೆಂದು ಅಟೆಂಡೆಂಟ್ ಹೇಳಿದ್ದಾರೆ.ಆದರೆ, ಆ ಸಮಯದಲ್ಲಿ ತಾನು ಇನ್ನೂ ಜನಿಸಿರಲಿಲ್ಲ ಮತ್ತು ತಾನು ಎಂದಿಗೂ ಪಬ್‌ಗೆ ಹೋಗಿಲ್ಲ ಎಂದು ಅಭಿಜೀತ್ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಅಭಿಜಿತ್ ಭಟ್ಟಾಚಾರ್ಯ ಅವರು ಮಹಿಳೆ ಅರೋಪ  ತಿರಸ್ಕರಿಸಿದರು, "ನಾನು ಆ ಸಮಯದಲ್ಲಿ ಹುಟ್ಟಿರಲಿಲ್ಲ. ನಾನು ನನ್ನ ಜೀವನದಲ್ಲಿ ಎಂದಿಗೂ ಪಬ್‌ಗೆ ಹೋಗಿಲ್ಲ.ನೀವು ನನ್ನನ್ನು ಯಾವುದೇ ಪೇಜ್‌ 3 ಅಥವಾ ಚಲನಚಿತ್ರ ಪಾರ್ಟಿಗಳಲ್ಲಿ ಎಂದಿಗೂ ನೋಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

46

'ನನ್ನ ಹೆಸರು ಮಾರಾಟವಾಗುತ್ತದೆ. ಯಾರಾದರೂ ಅದರಿಂದ ಪ್ರಯೋಜನ ಪಡೆಯುತ್ತಿದ್ದರೆ ಒಳ್ಳೆಯದು. ಕೆಲವೊಮ್ಮೆ ನನ್ನ ಹೆಸರಿನಲ್ಲಿ ಅವರು ಬ್ರೆಡ್ ಮತ್ತು ಬೆಣ್ಣೆಯನ್ನು ಗಳಿಸುತ್ತಾರೆ, ಅದು ಸರಿ' ಎಂದು ಅಭಿಜೀತ್ ಹೇಳಿದ್ದಾರೆ.

56

ಅಭಿಜಿತ್ ಭಟ್ಟಾಚಾರ್ಯ ಶಾರುಖ್ ಖಾನ್ ವಿರುದ್ಧ ಕೂಡ  ವಾಗ್ದಾಳಿ ನಡೆಸಿದ್ದರು. ಬಾಲಿವುಡ್ ಬಾದಷಾಗಾಗಿ ಹಾಡಿದ ಹಾಡುಗಳಿಗೆ ಸರಿಯಾಗಿ ಮನ್ನಣೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.


 

66

'ನಾನು ಅವರಿಗೆ (ಶಾರುಖ್ ಖಾನ್) ಪ್ಲೇಬ್ಯಾಕ್ ಮಾಡುವಾಗ ಅವರು ರಾಕ್‌ಸ್ಟಾರ್ ಆಗಿದ್ದರು, ನಾನು ಅವರಿಗೆ ಹಾಡುವುದನ್ನು ನಿಲ್ಲಿಸಿದಾಗ ಅವರು ಲುಂಗಿ ಡ್ಯಾನ್ಸ್‌ಗೆ ಬಂದರು' ಎಂದು  ಸಂದರ್ಶನವೊಂದರಲ್ಲಿ ಹೇಳಿದ್ದರು. 'ಇದಲ್ಲದೇ, ಮೈ ಹೂ ನಾದಲ್ಲಿ ಸ್ಪಾಟ್‌ಬಾಯ್‌ಗೆ ಮನ್ನಣೆ ನೀಡಿದ್ದಾರೆ, ಆದರೆ ಅದರ ಪ್ರಮುಖ ಗಾಯಕನಿಗೆ ಗೌರವ ನೀಡಲಿಲ್ಲ' ಎಂದು ಅಭಿಜೀತ್ ಹೇಳಿದರು.

Read more Photos on
click me!

Recommended Stories