ಸಿನಿಮಾ ತಾರೆಯರ ಮದುವೆಯೆಂದರೆ ಕೇಳುವುದೇ ಬೇಡ. ಎಲ್ಲಾ ಕಡೆ ಅದೇ ಸುದ್ದಿ. ಅದೇ ರೀತಿ ಸದ್ಯಕ್ಕೆ ಬಾಲಿವುಡ್‌ನ ಮೋಸ್ಟ್ ಫೇಮಸ್ ಜೋಡಿಗಳಲ್ಲಿ ಒಂದಾದ ಸಿಧಾರ್ಥ್ ಮಲ್ಹೋತ್ರಾ (Sidhrath Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಮದುವೆಯ ಸುದ್ದಿ ಸೌಂಡ್ ಮಾಡುತ್ತಿದೆ. ಈ ಜೋಡಿಯ ರಾಯಲ್ ವೆಡ್ಡಿಂಗ್ ಬಗ್ಗೆ ಮಾಹಿತಿ ಇಲ್ಲಿದೆ.
ಈಗಾಗಲೇ ಸಿದ್ದಾರ್ಥ ಮಲ್ಹೊತ್ರ ಮತ್ತು ಕಿಯಾರಾ ಅಡ್ವಾಣಿ ಮದುವೆಯ ದಿನಾಂಕಗಳು ಕನ್ಫರ್ಮ್ ಆಗಿದ್ದು. ಈ ಜೋಡಿ ನಾಳೆ ಅಂದರೆ ಫೆಬ್ರವರಿ 7 ರಂದು ಸಪ್ತಪದಿ ತುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.
210
ಅಲ್ರೆಡಿ ಮದುವೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಶುರುವಾಗಿದೆ. ಇಂದು ಹಲ್ಡಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳು ನಡೆಯಲಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಜೈಸಲ್ಮೇರ್ ಸೂರ್ಯಘರ್ ಕೋಟೆಯೆಡೆಗೆ ಪ್ರಯಾಣ ಬೆಳೆಸಿದ್ದಾರೆ.
310
ಸಿದ್ದಾರ್ಥ ಮತ್ತು ಕಿಯಾರಾ ತಮ್ಮ ಮದುವೆಯಾಗಿ ಜೈಸಲ್ಮೇರ್‌ನ ಐಷಾರಾಮಿ ಸೂರ್ಯಘರ್ ಪ್ಯಾಲೇಸ್ ಹೋಟೆಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
410
ಈ ರಾಯಲ್ ವೆಡ್ಡಿಂಗ್100-125 ಜನರ ಅತಿಥಿಗಳ ಖಾಸಗಿ ವ್ಯವಹಾರವಾಗಿದೆ ಎಂದು ವರದಿಯಾಗಿದೆ. ದಂಪತಿಗಳ ನಿಕಟ ಸ್ನೇಹಿತರಾದ ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್, ಇಶಾ ಅಂಬಾನಿ ಮತ್ತು ವರುಣ್ ಧವನ್ ಈಗಾಗಲೇ ಮದುವೆಗೆ ರಾಜಸ್ಥಾನ ತಲುಪಿರುವ ಫೋಟೋಗಳು ವೈರಲ್ ಅಗಿವೆ.
510
ಕಿಯಾರಾ ಅಡ್ವಾಣಿ ಅವರ ಬಾಲ್ಯ ಸ್ನೇಹಿತೆ ಇಶಾ ಅಂಬಾನಿ ಈಗಾಗಲೇ ಮದುವೆಗೆ ಆಗಮಿಸಿರುವ ಫೋಟೋಗಳು ಇಂಟರೆನೆಟ್‌ನಲ್ಲಿ ಹರಿದಾಡುತ್ತಿವೆ.
610
ಅತಿಥಿಗಳಿಗಾಗಿ ಸುಮಾರು 80 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಮತ್ತು ಮರ್ಸಿಡಿಸ್ ಬೆಂಜ್, ಜಾಗ್ವಾರ್ ಮತ್ತು ಬಿಎಂಡಬ್ಲ್ಯು ಸೇರಿದಂತೆ 70 ಕಾರುಗಳನ್ನು ವಿಮಾನ ನಿಲ್ದಾಣದಿಂದ ಅತಿಥಿಗಳನ್ನು ಸ್ವಾಗತಿಸಲು ಬಳಸಲಾಗುತ್ತದೆ.ವಿವಾಹದ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಸಹ ಏರ್ಪಾಟು ಮಾಡಲಾಗಿದೆ.
710
ವಿವಾಹದ ನಂತರ, ಸಿದ್ಧಾರ್ಥ್ ಮತ್ತು ಕಿಯಾರಾ ಅವರಿಗೆ ದೆಹಲಿಯಲ್ಲಿ ರಿಸೆಪ್ಷನ್ ಆಯೋಜಿಸಲಾಗಿದೆ. ಸಿದ್ದ್ ಅವರ ಕುಟುಂಬ ಇರುವುದು ದೆಹಲಿಯಲ್ಲಿ.
810
ಮುಂಬೈಗೆ ಹಿಂದಿರುಗಿದ ನಂತರ, ದಂಪತಿಗಳು ನಗರದ ತಮ್ಮ ಬಾಲಿವುಡ್ ಸ್ನೇಹಿತರಿಗಾಗಿ ಮತ್ತೊಂದು ಸೆಲಬ್ರೆಷನ್ ಇಟ್ಟುಕೊಂಡಿದ್ದಾರೆ .
910
Image: Instagram
ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ವಿವಾಹವನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ, ಈ ದಿನಗಳಲ್ಲಿ ಸೆಲೆಬ್ರಿಟಿಗಳ ವಿವಾಹಗಳ ಓಟಿಟಿ ಪ್ರಸಾರ ಟ್ರೆಂಡ್ ಆಗಿದೆ.
1010
‘ಶೆರ್ಶಾ’ ಸೆಟ್‌ಗಳಲ್ಲಿ ಶುರುವಾದ ಸಿದ್ಧಾರ್ಥ್ ಮತ್ತು ಕಿಯಾರಾ ನಡುವೆಯ ರಿಲೆಷನ್‌ಶಿಪ್ ಹಿಂದೊಮ್ಮೆ ಬ್ರೇಕ್ ಆಗಿದೆ ಎಂಬ ಸುದ್ದಿ ಹೊರಬಿದ್ದಿತು. ನಂತರ ಇಬ್ಬರು ಪ್ಯಾಚಪ್ ಮಾಡಿಕೊಂಡು ಶಾಶ್ವತವಾಗಿ ಒಟ್ಟಿಗೆ ಇರಲು ಮತ್ತೆ ಒಂದಾದರು.